ವಿರೋಧಪಕ್ಷದ ಸದಸ್ಯರು ಹೇಳಿದಂತೆ ಸರ್ಕಾರ ಕುಣಿಯಲಾಗಲ್ಲ: ಪ್ರಿಯಾಂಕ್ ಖರ್ಗೆ
ಮುಡಾ ಪ್ರಕರಣದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಮೈಸೂರಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡುವುದಾದರೆ ಮಾಡಲಿ, ವಾತಾವರಣ ಸಹ ಅನುಕೂಲಕರವಾಗಿದೆ ಎಂದ ಪ್ರಿಯಾಂಕ್ ಖರ್ಗೆ ಸದನದಲ್ಲಿ ವಿರೋಧಪಕ್ಷದ ಸದಸ್ಯರು ಹೇಳಿದಂತೆ ಸರ್ಕಾರ ಕುಣಿಯಲಾಗಲ್ಲ ಅಂತ ಹೇಳಿದರು.
ಬೆಂಗಳೂರು: ವಿಧಾನಸೌಧ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಅಹೋರಾತ್ರಿ ಧರಣಿ ನಡೆಸಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಯಾವುದೇ ದಾಖಲೆಗಳಿಲ್ಲದೆ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ, ದಾಖಲೆಗಳಿದ್ದರೆ ಆಯೋಗಕ್ಕೆ ನೀಡಲಿ, ಪತ್ರಿಕೆಗಳಲ್ಲಿ ಬಂದಿದ್ದನ್ನೇ ಸದನದಲ್ಲಿ ಹೇಳುತ್ತಿದ್ದಾರೆ ಎಂದರು. ಕಾರ್ಯಕಲಾಪದ ಪಟ್ಟಿಯಲ್ಲಿ ಅಸಲಿಗೆ ದೇವರಾಜ ಅರಸು ಟರ್ಮಿನಲ್, ಪ್ರಜ್ವಲ್ ರೇವಣ್ಣ, ಈಡಿ ಬಂಧನಗಳು, ಅನುದಾನ ಹಂಚಿಕೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅಗಿರುವ ಅನ್ಯಾಯ, ಅತಿವೃಷ್ಟಿ ಮೊದಲಾದ ವಿಷಯಗಳ ಮೇಲೆ ಚರ್ಚೆ ನಡೆಯಬೇಕಿತ್ತು, ಅದರೆ ಅದ್ಯಾವುದಕ್ಕೂ ವಿರೋಧಪಕ್ಷದ ನಾಯಕರು ಅವಕಾಶ ಮಾಡಿಕೊಡಲಿಲ್ಲ. ಹಗರಣದಲ್ಲಿ ಸಿಕ್ಕಿ ಜೈಲಿಗೆ ಹೋದ ತಮ್ಮ ಪರಿಷತ್ ಸದಸ್ಯನ ಬಗ್ಗೆ ಅವರು ಮಾತಾಡಲ್ಲ, ಎಮ್ಮೆಲ್ಸಿಯ ಮಗನೊಬ್ಬ ಬೋವಿ ಸಮಾಜದ ಹಗರಣದಲ್ಲಿ ಆರೋಪಿಯಾಗಿರುವ, ಬಿಎಸ್ ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೋ ಕೇಸ್ ಬಗ್ಗೆ ಮಾತಾಡಲ್ಲ, ಅವರಿಗೆ ಕೇವಲ ಸರ್ಕಾರದ ವಿರುದ್ಧ ದೋಷಾರೋಪಣೆ ಮಾಡುವುದು ಬೇಕಿದೆ ಎಂದು ಸಚಿವ ಖರ್ಗೆ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಿಜೆಪಿಯವರು ಐಟಿ, ಇಡಿ, ಸಿಬಿಐ ಕರೆಸೋದು ಮಾಡುತ್ತಿದ್ದಾರೆ: ಸಚಿವ ಪ್ರಿಯಾಂಕ್ ಖರ್ಗೆ ಕಿಡಿ