Assembly Session: ತಮ್ಮ ಕಾಲದ ಹಗರಣಗಳನ್ನು ಮುಚ್ಚಿಹಾಕಲು ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ: ಡಿಕೆ ಶಿವಕುಮಾರ್

ಮುಡಾ ಹಗರಣದ ತನಿಖೆ ನಡೆಸಲು ಮುಖ್ಯಮಂತ್ರಿಯವರು ಒಂದು ಆಯೋಗವನ್ನು ರಚಿಸಿದ್ದಾರೆ. ಬಿಜೆಪಿ ನಾಯಕರಲ್ಲಿ ಸೈಟು ಹಂಚಿಕೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ದಾಖಲೆಗಳಿದ್ದರೆ ಹೋಗಿ ಅಯೋಗಕ್ಕೆ ನೀಡಲಿ, ಅವರನ್ನು ತಡೆದಿರೋದು ಯಾರು? ಎಂದು ಶಿವಕುಮಾರ್ ಹೇಳಿದರು.

Assembly Session: ತಮ್ಮ ಕಾಲದ ಹಗರಣಗಳನ್ನು ಮುಚ್ಚಿಹಾಕಲು ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ: ಡಿಕೆ ಶಿವಕುಮಾರ್
|

Updated on: Jul 25, 2024 | 2:31 PM

ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್ ಶಾಸಕರು ತಮ್ಮ ಹುಳುಕನ್ನು ಮುಚ್ಚಿಟ್ಟುಕೊಳ್ಳಲು ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು. ವಿಧಾನಸೌಧ ಅವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಅವರ ಆಡಳಿತದಲ್ಲಿ ನಡೆದ ಅವ್ಯವಹಾರಗಳನ್ನೆಲ್ಲ ಬಯಲು ಮಾಡುತ್ತೇವೆ, ಮುಡಾ ಸೈಟು ಹಂಚಿಕೆಯ ಬಗ್ಗೆ ಅವರು ಈಗ ಮಾತಾಡುತ್ತಿದ್ದಾರೆ, ಎರಡು ವರ್ಷಗಳ ಹಿಂದೆಯೇ ವಿಷಯ ಪತ್ರಿಕೆಯಲ್ಲಿ ಬಂದಿತ್ತು, ಆಗ್ಯಾಕೆ ಅಧಿಕಾರದಲ್ಲಿದ್ದ ಬಿಜೆಪಿ ನಾಯಕರು ಮಾತಾಡಲಿಲ್ಲ. ಅದು ಹೋಗಲಿ, ಅಧಿವೇಶನ ಶುರುವಾಗಿ ಹತ್ತು ದಿನಗಳ ನಂತರ ಯಾಕೆ ಅವರು ಮುಡಾ ವಿಷಯವನ್ನು ಪ್ರಸ್ತಾಪಿಸುತ್ತಿದ್ದಾರೆ? ಎಂದು ಶಿವಕುಮಾರ್ ಪ್ರಶ್ನಿಸಿದರು. ಅಷ್ಟಕ್ಕೂ ಸಿದ್ದರಾಮಯ್ಯ ಅವರಿಂದ ಅಕ್ರಮ ಎಲ್ಲಿ ನಡೆದಿದೆ? ಅವರು ಖರೀದಿಸಿದ ಜಮೀನನ್ನು ಮುಡಾ ಸ್ವಾಧೀನ ಮಾಡಿಕೊಂಡಿದೆ ಮತ್ತು ಬದಲೀ ಸೈಟುಗಳನ್ನು ಅವರಿಗೆ ನೀಡಿದೆ. ಆಗ ಅಧಿಕಾರದಲ್ಲಿ ಬಿಜೆಪಿ ಸರ್ಕಾರವೇ ಇತ್ತಲ್ಲ ಎಂದು ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಬಿಜೆಪಿ ಪ್ರತಿಭಟನೆಗಿಳಿದಾಗ ಶಿವಕುಮಾರ್ ಜೊತೆ ವಿಜಯೇಂದ್ರ ಹರಟೆಗೆ ಕೂತಿದ್ದು ನಾಚಿಕೆಗೇಡು: ಬಸನಗೌಡ ಯತ್ನಾಳ್

Follow us