Weekly Horoscope: ಆಗಸ್ಟ್ 25 ರಿಂದ 31 ರವರೆಗಿನ ವಾರ ಭವಿಷ್ಯ
ವಾರಭವಿಷ್ಯ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ಆಗಸ್ಟ್ 25 ರಿಂದ 31ರ ವಾರದ ರಾಶಿ ಫಲಗಳನ್ನು ತಿಳಿಸಿದ್ದಾರೆ. ಮೇಷ ಮತ್ತು ವೃಷಭ ರಾಶಿಯವರಿಗೆ ಈ ವಾರ ಆರ್ಥಿಕವಾಗಿ ಮತ್ತು ವೃತ್ತಿಪರವಾಗಿ ಏಳುಬೀಳುಗಳಿವೆ. ಗ್ರಹಗಳ ಸ್ಥಿತಿ, ಮುಂಬರುವ ಹಬ್ಬಗಳು ಹಾಗೂ ಪ್ರತಿ ರಾಶಿಗೆ ಸೂಕ್ತ ಪರಿಹಾರಗಳನ್ನು ಕಾರ್ಯಕ್ರಮದಲ್ಲಿ ವಿವರಿಸಲಾಗಿದೆ.
ಬೆಂಗಳೂರು, ಆಗಸ್ಟ್ 24: ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಆಗಸ್ಟ್ 25 ರಿಂದ 31 ರವರೆಗಿನ ವಾರದ ರಾಶಿ ಫಲಗಳನ್ನು ವಿವರಿಸಿದ್ದಾರೆ. ಈ ವಾರ ವಿಶ್ವಾವಸು ಸಂವತ್ಸರ, ದಕ್ಷಿಣಾಯನ, ಭಾದ್ರಪದ ಮಾಸ, ವರ್ಷ ಋತು, ಶುಕ್ಲ ಪಕ್ಷ ಇರುವುದು ವಿಶೇಷ. ವರಾಹ ಜಯಂತಿ, ಸ್ವರ್ಣಗೌರಿ ವ್ರತ, ಗಣೇಶ ಚತುರ್ಥಿ ಮುಂತಾದ ಹಬ್ಬಗಳಿವೆ. ಗ್ರಹಗಳ ಸ್ಥಿತಿಯನ್ನು ಗಮನಿಸಿದರೆ, ಶನಿ ಮೀನ ರಾಶಿಯಲ್ಲಿದ್ದು, ಬುಧ ಗ್ರಹ 30ನೇ ತಾರೀಕು ಸಿಂಹ ರಾಶಿಗೆ ಪ್ರವೇಶಿಸಲಿದೆ.

