AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Horoscope: ಆಗಸ್ಟ್ 31 ರಿಂದ ಸೆಪ್ಟೆಂಬರ್​​ 6 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ

Weekly Horoscope: ಆಗಸ್ಟ್ 31 ರಿಂದ ಸೆಪ್ಟೆಂಬರ್​​ 6 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ

ಅಕ್ಷತಾ ವರ್ಕಾಡಿ
|

Updated on: Aug 30, 2026 | 8:36 AM

Share

31-08-2026 ರಿಂದ 06-09-2026 ರವರೆಗಿನ ಶ್ರಾವಣ ಕೃಷ್ಣ ಪಕ್ಷದ ಈ ವಾರದಲ್ಲಿ ಸಂಕಷ್ಟ ಚತುರ್ಥಿ, ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ, ಮಂಗಳ ಗೌರಿ ವ್ರತ, ದ್ರೌಪದಿ ಜಯಂತಿ, ಬಾಗೇವಾಡಿ ಜಾತ್ರೆ ಮತ್ತು ದಶಫಲ ವ್ರತಗಳು ಜರುಗಲಿದ್ದು, ಸೆಪ್ಟೆಂಬರ್ 4 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ತಾರೀಖು 31-08- 2026 ರಿಂದ 06-09- 2026 ರವರೆಗಿನ ಈ ವಾರದಲ್ಲಿ, ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು ದ್ವಾದಶ ರಾಶಿಗಳ ವಾರ ಭವಿಷ್ಯವನ್ನು ನೀಡಿದ್ದಾರೆ. ಈ ವಾರವು ಪರಾಭವನಾಮ ಸಂವತ್ಸರ, ದಕ್ಷಿಣಾಯನ, ವರ್ಷಋತು, ಶ್ರಾವಣ ಮಾಸದ ಕೃಷ್ಣ ಪಕ್ಷದ ಅವಧಿಯಾಗಿದ್ದು, ಈ ದಿನಗಳಲ್ಲಿ ತದಿಗೆ, ಚೌತಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ ಹಾಗೂ ದಶಮಿ ತಿಥಿಗಳು ಎದುರಾಗಲಿವೆ (ಈ ವಾರ ಪಂಚಮಿ ತಿಥಿ ಇರುವುದಿಲ್ಲ). ಭಕ್ತಿ-ಶ್ರದ್ಧೆಯ ಪರ್ವಕಾಲವಾದ ಈ ಶುಭ ವಾರದಲ್ಲಿ ಸಂಕಷ್ಟ ಹರ ಚತುರ್ಥಿ, ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ, ಮಂಗಳ ಗೌರಿ ವ್ರತ, ದ್ರೌಪದಿ ಜಯಂತೋತ್ಸವ, ಬಾಗೇವಾಡಿಯಲ್ಲಿ ನಡೆಯುವ ಪ್ರಸಿದ್ಧ ಜಾತ್ರಾ ಮಹೋತ್ಸವ ಹಾಗೂ ದಶಫಲ ವ್ರತಗಳು ಆಚರಣೆಯಾಗಲಿವೆ. ಇವೆಲ್ಲವುಗಳ ಜೊತೆಗೆ, ಸರ್ವರೂ ಶ್ರದ್ಧಾಭಕ್ತಿಯಿಂದ ಸ್ಮರಿಸಿ ಪೂಜಿಸುವ ಸಾಕ್ಷಾತ್ ಕೃಷ್ಣ ಭಗವಾನರ ಕೃಷ್ಣ ಜನ್ಮಾಷ್ಟಮಿ ಮಹೋತ್ಸವವನ್ನು ಈ ವಾರದ ಸೆಪ್ಟೆಂಬರ್ 4 ರಂದು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪ್ರತಿಯೊಂದು ರಾಶಿಗೂ ಆರ್ಥಿಕ, ವೃತ್ತಿ, ಆರೋಗ್ಯ ಮತ್ತು ವೈಯಕ್ತಿಕ ಜೀವನದಲ್ಲಿನ ಬದಲಾವಣೆಗಳು ಹಾಗೂ ಅದೃಷ್ಟದ ದಿಕ್ಕು, ಬಣ್ಣ ಮತ್ತು ಸಂಖ್ಯೆಗಳ ಬಗ್ಗೆಯೂ ಗುರೂಜಿ ಮಾಹಿತಿ ನೀಡಿದ್ದಾರೆ. ಉತ್ತಮ ಫಲಿತಾಂಶಕ್ಕಾಗಿ ಸೂಕ್ತ ಪರಿಹಾರಗಳು ಮತ್ತು ಜಪ ಮಂತ್ರಗಳನ್ನು ಸಹ ತಿಳಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Follow Us