ಕುಡಿದ ಮತ್ತಿನಲ್ಲಿ ಯುವತಿಯ ತುಟಿಗೆ ಮುತ್ತಿಡಲು ಹೋದ ಪೊಲೀಸ್; ಶಾಕಿಂಗ್ ವಿಡಿಯೋ ವೈರಲ್

|

Updated on: Oct 25, 2024 | 5:02 PM

ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ರಾಯ್ ಯುವತಿಯೊಬ್ಬಳ ಕತ್ತು ಹಿಡಿದು ಆಕೆಯನ್ನು ಚುಂಬಿಸುತ್ತಿರುವುದನ್ನು ಚಿತ್ರೀಕರಿಸಲಾಗಿತ್ತು. ಈ ಘಟನೆಯ ಸಮಯದಲ್ಲಿ ರೆಕಾರ್ಡ್ ಮಾಡಲಾದ ವೀಡಿಯೊದಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಯುವತಿಯನ್ನು ಚುಂಬಿಸಲು ಹೋಗಿರುವುದನ್ನು ನೋಡಬಹುದು. ಈ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದಂತೆ, ಇದು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶಕ್ಕೆ ಕಾರಣವಾಯಿತು.

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಗಸ್ತು ಕರ್ತವ್ಯದ ವೇಳೆ ಕುಡಿದ ಅಮಲಿನಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಮಹಿಳೆಯರ ಸುರಕ್ಷತೆಯನ್ನು ಖಾತ್ರಿಪಡಿಸುವ ಉದ್ದೇಶದಿಂದ ಇತ್ತೀಚೆಗೆ ಪರಿಚಯಿಸಲಾದ ಪಿಂಕ್ ಮೊಬೈಲ್ ವ್ಯಾನ್‌ನಲ್ಲಿದ್ದ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ತನಿಯಾ ರಾಯ್ ಬುಧವಾರ ರಾತ್ರಿ ಅನುಚಿತವಾಗಿ ವರ್ತಿಸಿ ಇಬ್ಬರು ಅಪ್ರಾಪ್ತರ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಇದು ಮಹಿಳಾ ಪೋಲೀಸ್ ಅಧಿಕಾರಿ ಅಮಲೇರಿದ ಸ್ಥಿತಿಯಲ್ಲಿ ಇರುವುದನ್ನು ತೋರಿಸುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ