ರಾಹುಲ್ ಗಾಂಧಿ ಜೊತೆ ಪ್ರತ್ಯೇಕವಾಗಿ ಏನೇನು ಚರ್ಚೆ? ಡಿಕೆ ಶಿವಕುಮಾರ್ ಹೇಳಿದ್ದೇನು ನೋಡಿ
ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ರಾಹುಲ್ ಗಾಂಧಿ ಜತೆಗಿನ ಭೇಟಿಯನ್ನು ಪ್ರೋಟೋಕಾಲ್ ಎಂದು ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗಳೇ ಗೊಂದಲ ಸೃಷ್ಟಿವೆ ಎಂದ ಅವರು, ನರೇಗಾ ಯೋಜನೆಗಳು ಮತ್ತು ಬಿಜೆಪಿ ರಾಜಕಾರಣದ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು. ಅಲ್ಲದೆ, ನವೆಂಬರ್ 16ರಂದು ದೆಹಲಿಗೆ ಭೇಟಿ ನೀಡುವುದಾಗಿ ಖಚಿತಪಡಿಸಿದ್ದಾರೆ.
ಬೆಂಗಳೂರು, ಜನವರಿ 14: ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ ಜತೆಗೆ ಮಂಗಳವಾರ ಪ್ರತ್ಯೇಕವಾಗಿ ಮಾತನಾಡಿದ್ದಕ್ಕೆ ಸಂಬಂಧಿಸಿ ಡಿಸಿಎಂ ಡಿಕೆ ಶಿವಕುಮಾರ್ ಬುಧವಾರ ಪ್ರತಿಕ್ರಿಯೆ ನೀಡಿದ್ದಾರೆ. ರಾಹುಲ್ ಗಾಂಧಿ ಕಾಂಗ್ರೆಸ್ ಹೈಕಮಾಂಡ್ ನಾಯಕ ಹಾಗೂ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರು ಆಗಿರುವುದರಿಂದ ಅವರನ್ನು ಭೇಟಿ ಮಾಡುವುದು ಮತ್ತು ಗೌರವಿಸುವುದು ಪ್ರೋಟೋಕಾಲ್ನ ಭಾಗವಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು. ಯಾವುದೇ ವಿಶೇಷ ಸಂದೇಶ ಇರಲಿಲ್ಲ ಎಂದು ತಿಳಿಸಿದ ಅವರು, ಮಾಧ್ಯಮಗಳು ಅನಗತ್ಯ ಗೊಂದಲ ಸೃಷ್ಟಿಸುತ್ತಿವೆ ಎಂದು ಟೀಕಿಸಿದರು.
