ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್ ನಾಯಕಿ ಹೇಳಿದ್ದೇನು?
ಕರ್ನಾಟಕದಲ್ಲಿ ನಕ್ಸಲರ ಅತಿದೊಡ್ಡ ಶರಣಾಗತಿ ನಡೆದಿದ್ದು, ಪಶ್ಚಿಮ ಘಟ್ಟಗಳ ನಕ್ಸಲರ ಅಧ್ಯಾಯ ಅಂತ್ಯವಾಗಿದೆ. ಇಂದು ಆರು ಜನ ಮೋಸ್ಟ್ ವಾಟೆಂಡ್ ನಕ್ಸಲರು ಸಿಎಂ ಸಿದ್ದರಾಮಯ್ಯ ಸಮುಖದಲ್ಲೇ ಶರಣಾಗಿದ್ದಾರೆ. ಶರಣಾಗತಿ ಬಳಿಕ ಮಾತನಾಡಿದ ನಕ್ಸಲ್ ನಾಯಕಿ, ನಾನು ಸಂವಿಧಾನಾತ್ಮಕವಾಗಿ ಮುಂದೆ ನಮ್ಮ ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಬೆಂಗಳೂರು, ಜನವರಿ 08: ನಕ್ಸಲರ (Naxal) ಬಟ್ಟೆ ನೀಡುವ ಮೂಲಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಗೃಹ ಸಚಿವ ಜಿ. ಪರಮೇಶ್ವರ್ ಮುಂದೆ 6 ನಕ್ಸಲರು ಇಂದು ಶರಣಾಗತಿಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮುಂಡಗಾರು ಲತಾ, ವನಜಾಕ್ಷಿ, ದಕ್ಷಿಣ ಕನ್ನಡ ಜಿಲ್ಲೆಯ ಸುಂದರಿ, ತಮಿಳುನಾಡಿನ ಕೆ.ವಸಂತ ಅಲಿಯಾಸ್ ರಮೇಶ್, ಕೇರಳದ ಜೀಶ, ಆಂಧ್ರದ ಮಾರಪ್ಪ ಅರೋಲಿ ಶರಣಾಗತಿಯಾಗಿದ್ದಾರೆ. ಶರಣಾಗತಿ ಬಳಿಕ ಮಾತನಾಡಿದ ಲತಾ, ನಾನು ಸಂವಿಧಾನಾತ್ಮಕವಾಗಿ ಮುಂದೆ ನಮ್ಮ ಹೋರಾಟ ನಡೆಸುತ್ತೇವೆ. ನಮ್ಮನ್ನ ಮುಖ್ಯವಾಹಿನಿಗೆ ಬರಮಾಡಿಕೊಂಡ ಸಿಎಂಗೆ ಧನ್ಯವಾದ ಅಂತಾ ಹೇಳಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.