Loading video

Daily Devotional: ಪೂಜೆ ಮಾಡುವಾಗ ದೇವರ ಮನೆಯಲ್ಲಿ ಹೂ ಬಿದ್ರೆ ಏನರ್ಥ?

| Updated By: ಗಂಗಾಧರ​ ಬ. ಸಾಬೋಜಿ

Updated on: Mar 27, 2025 | 7:09 AM

ದೇವಸ್ಥಾನಗಳಲ್ಲಿ ಪೂಜಾ ಸಮಯದಲ್ಲಿ ದೇವರ ವಿಗ್ರಹ ಅಥವಾ ಫೋಟೋದಿಂದ ಹೂವು ಬೀಳುವುದನ್ನು ಅನೇಕರು ಶುಭ ಸೂಚಕವೆಂದು ಪರಿಗಣಿಸುತ್ತಾರೆ. ಭಕ್ತಿಯಿಂದ ನಡೆಸುವ ಪೂಜೆಯಲ್ಲಿ ಹೂವುಗಳು ಪ್ರಮುಖ ಪಾತ್ರ ವಹಿಸುತ್ತವೆ. "ಪತ್ರಂ ಪುಷ್ಪಂ ಫಲಂ ತೋಯಂ" ಎಂಬ ಹೇಳಿಕೆಯಂತೆ, ಭಕ್ತಿಯಿಂದ ಅರ್ಪಿಸುವ ಯಾವುದೇ ವಸ್ತು ಭಗವಂತನಿಗೆ ಸ್ವೀಕಾರಾರ್ಹ.

ಬೆಂಗಳೂರು, ಮಾರ್ಚ್​ 27: ದೇವಸ್ಥಾನಗಳಲ್ಲಿ ಪೂಜಾ ಸಮಯದಲ್ಲಿ ದೇವರ ವಿಗ್ರಹ ಅಥವಾ ಫೋಟೋದಿಂದ ಹೂವು ಬೀಳುವುದನ್ನು ಅನೇಕರು ಶುಭ ಸೂಚಕವೆಂದು ಹೇಳುತ್ತಾರೆ. ಪೂಜೆಯಲ್ಲಿ ಹೂವುಗಳು ಪ್ರಮುಖ ಪಾತ್ರ ವಹಿಸುತ್ತವೆ. “ಪತ್ರಂ ಪುಷ್ಪಂ ಫಲಂ ತೋಯಂ” ಎಂಬಂತೆ, ಭಕ್ತಿಯಿಂದ ಅರ್ಪಿಸುವ ಯಾವುದೇ ವಸ್ತು ಭಗವಂತನಿಗೆ ಸ್ವೀಕಾರಾರ್ಹ. ಹೂವು ಬೀಳುವುದು ಭಗವಂತನ ಅನುಗ್ರಹ ಮತ್ತು ಅವನೊಂದಿಗಿನ ನಿಕಟ ಸಂಬಂಧದ ಸಂಕೇತವೆಂದು ನಂಬಲಾಗುತ್ತದೆ. ಹೂವು ಬಿದ್ದಾಗ ಅದನ್ನು ಜೇಬಿನಲ್ಲಿ ಇಟ್ಟುಕೊಳ್ಳುವುದು ಅಥವಾ ಮನೆಯ ಸಿಂಹದ್ವಾರದಲ್ಲಿ ಇಡುವುದು ಶುಭವೆಂದು ನಂಬಲಾಗುತ್ತದೆ. ಆದರೆ ಇದು ವೈಯಕ್ತಿಕ ನಂಬಿಕೆಗಳನ್ನು ಆಧರಿಸಿದೆ.

 

Published on: Mar 27, 2025 07:08 AM