AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವೆಂಬರ್ ಕ್ರಾಂತಿ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ನಿರಾಸೆ ತಂದ ಬಿಹಾರ ಚುನಾವಣೆ ಫಲಿತಾಂಶ

ನವೆಂಬರ್ ಕ್ರಾಂತಿ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ನಿರಾಸೆ ತಂದ ಬಿಹಾರ ಚುನಾವಣೆ ಫಲಿತಾಂಶ

ರಮೇಶ್ ಬಿ. ಜವಳಗೇರಾ
|

Updated on: Nov 14, 2025 | 3:21 PM

Share

ಭಾರೀ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದೆ. ಬಿಹಾರದಲ್ಲಿ ಎನ್​​ಡಿಎ ಭಾರೀ ಮುನ್ನಡೆ ಸಾಧಿಸಿದ್ದು, ಆರ್​ಜೆಡಿ ಹಾಗೂ ಕಾಂಗ್ರೆಸ್​ಗೆ ಭಾರೀ ಮುಖಭಂಗವಾಗಿದೆ. ಇನ್ನು ಇತ್ತ ಕರ್ನಾಟಕದಲ್ಲಿ ಬಿಹಾರ ಚುನಾವಣೆ ಫಲಿತಾಂಶ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವ ಚರ್ಚೆಗಳು ಶುರುವಾಗಿವೆ. ಈ ಸಂಬಂಧ ವಿಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು, ಬಿಹಾರ ಚುನಾವನೆ ಫಲಿತಾಂಶ ಸಿದ್ದರಾಮಯ್ಯನವರನ್ನು ಬಲಿಷ್ಠವನ್ನಾಗಿ ಮಾಡಿದೆ ಎಂದು ಕುಹಕವಾಡಿದ್ದಾರೆ.

ಬೆಂಗಳೂರು, (ನವೆಂಬರ್ 14): ಭಾರೀ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದೆ. ಬಿಹಾರದಲ್ಲಿ ಎನ್​​ಡಿಎ ಭಾರೀ ಮುನ್ನಡೆ ಸಾಧಿಸಿದ್ದು, ಆರ್​ಜೆಡಿ ಹಾಗೂ ಕಾಂಗ್ರೆಸ್​ಗೆ ಭಾರೀ ಮುಖಭಂಗವಾಗಿದೆ. ಇನ್ನು ಇತ್ತ ಕರ್ನಾಟಕದಲ್ಲಿ ಬಿಹಾರ ಚುನಾವಣೆ ಫಲಿತಾಂಶ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವ ಚರ್ಚೆಗಳು ಶುರುವಾಗಿವೆ. ಈ ಸಂಬಂಧ ವಿಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು, ಬಿಹಾರ ಚುನಾವನೆ ಫಲಿತಾಂಶ ಸಿದ್ದರಾಮಯ್ಯನವರನ್ನು ಬಲಿಷ್ಠವನ್ನಾಗಿ ಮಾಡಿದೆ ಎಂದು ಕುಹಕವಾಡಿದ್ದಾರೆ.

ಇನ್ನು ಬಿಹಾರ ಚುನಾವಣೆ ಕರ್ನಾಟಕ ಬಿಜೆಪಿಗರಿಗೆ ಒಂದು ರೀತಿಯ ನಿರಾಸೆಯಾಗಿದೆ. ಯಾಕಂದ್ರೆ ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್​ ಏನಾದರೂ ಗಮನಾರ್ಹ ಸಾಧನೆ ಮಾಡಿದ್ದರೆ ಇತ್ತ ಕರ್ನಾಟಕದಲ್ಲಿ ನವೆಂಬರ್ ಕ್ರಾಂತಿಯಾಗುವ  ನಿರೀಕ್ಷೆಗಳು ಇದ್ದವು. ಆದ್ರೆ, ಇದೀಗ ಬಂದ ಫಲಿತಾಂಶ ಕಾಂಗ್ರೆಸ್​​ನ್ನು ಮಾನಸಿಕವಾಗಿ ಕುಗ್ಗಿಸುವ.ತೆ ಮಾಡಿದೆ. ಆದ್ರೆ, ಈ ರಿಸಲ್ಟ್​ನಿಂದ ರಾಹುಲ್ ಗಾಂಧಿ, ಕರ್ನಾಟಕದಲ್ಲಿ ತಕ್ಷಣವೇ ಯಾವುದೇ ಬದಲಾವಣೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿಲ್ಲ. ಹೀಗಾಗಿ ಸಹಜವಾಗಿಯೇ ಬಿಜೆಪಿ ಒಂದು ರೀತಿಯ ನಿರಾಸೆಯಾದಂತಾಗಿದೆ.