ನೀವೇ ಎಂಎಲ್ಸಿ ಅಂತ ಗ್ಯಾರಂಟಿ ಏನು? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ನೀವು ಎಂಎಲ್ಸಿ ಎನ್ನುವುದನ್ನು ಏನು ಗ್ಯಾರಂಟಿ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಕೇಶವ ಪ್ರಸಾದ್ ಅವರನ್ನು ಟೋಲ್ ಸಿಬ್ಬಂದಿ ಪ್ರಶ್ನಿಸಿದ್ದು, ಬರೋಬ್ಬರಿ 1 ಗಂಟೆಗಳ ಕಾಲ ತಡೆ ನಿಲ್ಲಿಸಿದ್ದಾನೆ. ವಿಜಯಪುರ ಹೊರವಲಯದಲ್ಲಿರುವ ಟೋಲ್ ನಲ್ಲಿ ಈ ಘಟನೆ ನಡೆದಿದೆ. ನಾಳೆ ಕೆಡಿಪಿ ಸಭೆ ಹಿನ್ನೆಲೆಯಲ್ಲಿ ಕೇಶವಪ್ರಸಾದ್ ಅವರು ಇಂದು (ಡಿಸೆಂಬರ್ 21) ವಿಜಯಪುರಕ್ಕೆ ಹೊರಟ್ಟಿದ್ದರು. ಮಾರ್ಗಮಧ್ಯೆ ಟೋಲ್ ಸಿಬ್ಬಂದಿ ಕಾರು ಬಿಡದೇ ನಿಲ್ಲಿಸಿದ್ದಾನೆ.
ವಿಜಯಪುರ, (ಡಿಸೆಂಬರ್ 21): ನೀವು ಎಂಎಲ್ಸಿ ಎನ್ನುವುದನ್ನು ಏನು ಗ್ಯಾರಂಟಿ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಕೇಶವ ಪ್ರಸಾದ್ (BJP MLC keshav prasad) ಅವರನ್ನು ಟೋಲ್ ಸಿಬ್ಬಂದಿ ಪ್ರಶ್ನಿಸಿದ್ದು, ಬರೋಬ್ಬರಿ 1 ಗಂಟೆಗಳ ಕಾಲ ತಡೆ ನಿಲ್ಲಿಸಿದ್ದಾನೆ. ವಿಜಯಪುರ (Vijayapura) ಹೊರವಲಯದಲ್ಲಿರುವ ಟೋಲ್ ನಲ್ಲಿ ಈ ಘಟನೆ ನಡೆದಿದೆ. ನಾಳೆ ಕೆಡಿಪಿ ಸಭೆ ಹಿನ್ನೆಲೆಯಲ್ಲಿ ಕೇಶವಪ್ರಸಾದ್ ಅವರು ಇಂದು (ಡಿಸೆಂಬರ್ 21) ವಿಜಯಪುರಕ್ಕೆ ಹೊರಟ್ಟಿದ್ದರು. ಮಾರ್ಗಮಧ್ಯೆ ಟೋಲ್ ಸಿಬ್ಬಂದಿ ಕಾರು ಬಿಡದೇ ನಿಲ್ಲಿಸಿದ್ದಾನೆ. ನೀವು ಎಂಎಲ್ಸಿ ಎನ್ನುವುದಕ್ಕೆ ಏನು ಗ್ಯಾರಂಟಿ ಎಂದು ಪ್ರಶ್ನಿಸಿ ಗಲಾಟೆ ಮಾಡಿದ್ದಾನೆ. ಇದನ್ನು ಕಾರು ಚಾಲಕ ವಿಡಿಯೋ ವಿಡಿಯೋ ಮಾಡಲು ಮುಂದಾಗಿದ್ದ ವೇಳೆ ಮೊಬೈಲ್ ಕಿತ್ತುಕೊಂಡಿದ್ದಾನೆ. ಇದರಿಂದ ಕೆಂಡಾಮಂಡಲರಾದ ಕೇಶವ ಪ್ರಸಾದ್ ಕೂಡಲೇ ವಿಜಯಪುರ ಎಸ್ಪಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ವಿಜಯಪುರ ಗ್ರಾಮೀಣ ಠಾಣೆ ಸಿಪಿಐ, ಡಿವೈಎಸ್ಪಿ ದೌಡಾಯಿಸಿದ್ದಾರೆ. ಆಗ ಟೋಲ್ ಸಿಬ್ಬಂದಿ ಕೇಶವ ಪ್ರಸಾದ್ ಅವರ ಕಾರು ಬಿಟ್ಟಿದ್ದಾನೆ.
