WhatsApp Ban: ವಾಟ್ಸ್​​ಆ್ಯಪ್ ಬ್ಯಾನ್ ಆದ್ರೆ ಬೇರೆ ಯಾವ ಆ್ಯಪ್​ಗಳಿವೆ? ಇಲ್ಲಿದೆ ಲಿಸ್ಟ್

WhatsApp Ban: ವಾಟ್ಸ್​​ಆ್ಯಪ್ ಬ್ಯಾನ್ ಆದ್ರೆ ಬೇರೆ ಯಾವ ಆ್ಯಪ್​ಗಳಿವೆ? ಇಲ್ಲಿದೆ ಲಿಸ್ಟ್

ಕಿರಣ್​ ಐಜಿ
|

Updated on: May 24, 2024 | 1:00 PM

ಒಂದು ವೇಳೆ ವಾಟ್ಸ್​​ಆ್ಯಪ್ ಭಾರತದಲ್ಲಿ ಬ್ಯಾನ್ ಆದರೆ ಅಥವಾ ಆ್ಯಪ್ ಸೇವೆ ನಿಲ್ಲಿಸಿದರೆ, ಅದರ ಬದಲು ಲಭ್ಯವಿರುವ ಮೆಸೇಜಿಂಗ್ ಆ್ಯಪ್​ಗಳು ಯಾವುದಿದೆ? ಇಲ್ಲಿದೆ ನೋಡಿ ಲಿಸ್ಟ್..

ದೇಶದಲ್ಲಿ ಕೆಲವೊಂದು ಅಪರಾಧ ಪ್ರಕರಣಗಳಲ್ಲಿ ತನಿಖೆಗೆ ಪೊಲೀಸರು ಆರೋಪಿಗಳ ಸಾಮಾಜಿಕ ಜಾಲತಾಣಗಳ ಖಾತೆ ವಿವರ ಕೇಳುತ್ತಾರೆ. ಆದರೆ ಕೆಲವೊಮ್ಮೆ ಎಲ್ಲ ವಿವರ ಲಭ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಆಯಾ ಆ್ಯಪ್ ಇಲ್ಲವೇ ಸಾಮಾಜಿಕ ತಾಣಗಳ ವಿರುದ್ಧ ನೋಟಿಸ್ ಜಾರಿಗೊಳಿಸಲಾಗುತ್ತದೆ. ಇದೇ ರೀತಿಯ ಪ್ರಕರಣವೊಂದರಲ್ಲಿ ಭಾರತದ ಇತ್ತೀಚಿನ ಐಟಿ ನಿಯಮಗಳ ವಿರುದ್ಧ ವಾಟ್ಸ್​​ಆ್ಯಪ್ ನ್ಯಾಯಾಲಯದ ಮೊರೆ ಹೋಗಿದೆ. ಸಂದೇಶಗಳನ್ನು ಎನ್​ಕ್ರಿಪ್ಟ್ ಮಾಡಲಾಗುತ್ತದೆಯಾದ್ದರಿಂದ ಅದರ ಮೂಲ ಶೋಧಿಸಲು ಆಗುವುದಿಲ್ಲ. ಎನ್​ಕ್ರಿಪ್ಷನ್ ವ್ಯವಸ್ಥೆ ತೆಗೆದುಹಾಕುವುದಿಲ್ಲ ಎಂದು ವಾಟ್ಸ್​​ಆ್ಯಪ್ ಹೇಳಿದ್ದು, ಒಂದು ವೇಳೆ ಬಲವಂತ ಮಾಡಿದರೆ ಭಾರತದಿಂದಲೇ ನಿರ್ಗಮಿಸುವುದಾಗಿ ಹೇಳಿದೆ. ಒಂದು ವೇಳೆ ವಾಟ್ಸ್​​ಆ್ಯಪ್ ಭಾರತದಲ್ಲಿ ಬ್ಯಾನ್ ಆದರೆ ಅಥವಾ ಆ್ಯಪ್ ಸೇವೆ ನಿಲ್ಲಿಸಿದರೆ, ಅದರ ಬದಲು ಲಭ್ಯವಿರುವ ಮೆಸೇಜಿಂಗ್ ಆ್ಯಪ್​ಗಳು ಯಾವುದಿದೆ? ಇಲ್ಲಿದೆ ನೋಡಿ ಲಿಸ್ಟ್..