ಭಕ್ತರ ಶ್ರದ್ಧೆ, ನಿಷ್ಠೆಯೊಂದಿಗೆ ವಿಜೃಂಭಣೆಯಿಂದ ಜರುಗಿದ ಆನೇಕಲ್ ಕರಗ ಮಹೋತ್ಸವ, ಸಹಸ್ರಾರು ಜನ ಭಾಗಿ

ಭಕ್ತರ ಶ್ರದ್ಧೆ, ನಿಷ್ಠೆಯೊಂದಿಗೆ ವಿಜೃಂಭಣೆಯಿಂದ ಜರುಗಿದ ಆನೇಕಲ್ ಕರಗ ಮಹೋತ್ಸವ, ಸಹಸ್ರಾರು ಜನ ಭಾಗಿ

ಅರುಣ್​ ಕುಮಾರ್​ ಬೆಳ್ಳಿ
|

Updated on: May 24, 2024 | 11:53 AM

ಆನೇಕಲ್ ನಲ್ಲಿ ನಡೆಯುವ ಶ್ರೀ ಧರ್ಮರಾಯಸ್ವಾಮಿ ದ್ರೌಪದಿ ಕರಗ ಮಹೋತ್ಸವ ಕೂಡ ಬೆಂಗಳೂರು ಕರಗದಷ್ಟೇ ಪ್ರಸಿದ್ಧಿ ಹೊಂದಿದೆ ಎಂದು ಜನ ಹೇಳುತ್ತಾರೆ. ಚಂದ್ರಪ್ಪ ಹೆಸರಿನ ವ್ಯಕ್ತಿ ದ್ರೌಪದಮ್ಮ ದೇವಿ ಕರಗ ಹೊತ್ತಿದ್ದರು. ಟಿವಿ9 ಕನ್ನಡ ವಾಹಿನಿಯ ವರದಿಗಾರ ನೀಡಿರುವ ಮಾಹಿತಿಯ ಪ್ರಕಾರ ಆನೇಕಲ್ ಧರ್ಮರಾಯಸ್ವಾಮಿ ದೇವಸ್ಥಾನದ ಗರ್ಭಗುಡಿಯಿಂದ ಧ್ವಜಸ್ತಂಭದವರೆಗೆ ಕರಗ ಮಂಡಿ ಕಾಲಲ್ಲಿ ತೆವಳುತ್ತಾ ಹೊರಬಂದರು.

ಆನೇಕಲ್: ಗುರುವಾರ ರಾತ್ರಿ ಆನೇಕಲ್ (Anekal) ಕರಗ ಮಹೋತ್ಸವ (Karaga Mahotsav) ಬಹು ವಿಜೃಂಭಣೆ ಮತ್ತು ಧಾರ್ಮಿಕ ಶ್ರದ್ಧೆಯಿಂದ ಜರುಗಿತು. ಕಳೆದ ತಿಂಗಳು ಬೆಂಗಳೂರಿನ ತಿಗಳರಪೇಟೆಯಲ್ಲಿರುವ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ (Dharmarayaswamy temple) ನಡೆದ ದಕ್ಷಿಣ ಭಾರತದಲ್ಲೇ ಖ್ಯಾತಿವೆತ್ತಿರುವ ಕರಗ ಮಹೋತ್ಸವದ ಬಗ್ಗೆ ನಾವು ವರದಿ ಮಾಡಿದ್ದೇವೆ. ಆನೇಕಲ್ ನಲ್ಲಿ ನಡೆಯುವ ಶ್ರೀ ಧರ್ಮರಾಯಸ್ವಾಮಿ ದ್ರೌಪದಿ ಕರಗ ಮಹೋತ್ಸವ ಕೂಡ ಬೆಂಗಳೂರು ಕರಗದಷ್ಟೇ ಪ್ರಸಿದ್ಧಿ ಹೊಂದಿದೆ ಎಂದು ಜನ ಹೇಳುತ್ತಾರೆ. ಚಂದ್ರಪ್ಪ ಹೆಸರಿನ ವ್ಯಕ್ತಿ ದ್ರೌಪದಮ್ಮ ದೇವಿ ಕರಗ ಹೊತ್ತಿದ್ದರು. ಟಿವಿ9 ಕನ್ನಡ ವಾಹಿನಿಯ ವರದಿಗಾರ ನೀಡಿರುವ ಮಾಹಿತಿಯ ಪ್ರಕಾರ ಆನೇಕಲ್ ಧರ್ಮರಾಯಸ್ವಾಮಿ ದೇವಸ್ಥಾನದ ಗರ್ಭಗುಡಿಯಿಂದ ಧ್ವಜಸ್ತಂಭದವರೆಗೆ ಕರಗ ಮಂಡಿ ಕಾಲಲ್ಲಿ ತೆವಳುತ್ತಾ ಹೊರಬಂದರು. ಆ ಕ್ಷಣಕ್ಕಾಗಿ ಕಾಯುತ್ತಿದ್ದ ಭಕ್ತಸಾಗರ ಧನ್ಯತೆಯ ಭಾವದೊಂದಿಗೆ ಕರಗ ಮರವಣಿಗೆಯಲ್ಲಿ ಹೆಜ್ಜೆ ಹಾಕಿತು. ಕರಗ ಬಂದಾಗ ಡಮರುಗ ಮತ್ತು ಗೆಜ್ಜೆಯ ಸದ್ದು ಮುಗಿಲು ಮುಟ್ಟಿತು. ನಗರದ ಎಲ್ಲ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಕರಗವನ್ನು ರಸ್ತೆಗಳಲ್ಲಿ ಜನ ಕಣ್ತುಂಬಿಕೊಂಡರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Bengaluru Karaga: ಬೆಂಗಳೂರು ಕರಗ ಮೆರವಣಿಗೆಯಲ್ಲಿ ಸಾಗುತ್ತಾ ತಪ್ಪದೆ ದರ್ಗಾಗೆ ಹೋಗುವುದೇಕೆ ಗೊತ್ತಾ!? ಮಿಸ್ ಮಾಡದೆ ವಿಡಿಯೋ ನೋಡಿ