ದರ್ಗಾ ದರ್ಶನ ಬಳಿಕ ಕಂಠ ಪೂರ್ತಿ ಕುಡಿದ ಯುವಕ ನೀರಲ್ಲಿ ಮುಳುಗಿ ಸಾವು; ವಿಡಿಯೋ ಮಾಡಿದ ಸ್ನೇಹಿತರು
ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಪಟವಾದ ಬ್ರಿಜ್ ಕಂ ಬ್ಯಾರೇಜ್ನಲ್ಲಿ ಸ್ನೇಹಿತ ನೀರಿನಲ್ಲಿ ಮುಳುಗಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವುದನ್ನು ಸ್ನೇಹಿತರು ವಿಡಿಯೋ ಮಾಡಿದ್ದಾರೆ. ಹೈದರಾಬಾದ್ ಮೂಲದ ಸಾಜೀದ್ (25) ಮೃತ ದುರ್ದೈವಿ.
ಇತ್ತೀಚಿಗೆ ಅಣ್ಣ ನೀರಿನ ಹೊಂಡದಲ್ಲಿ ಮುಳುಗುತ್ತಿರುವುದನ್ನು ತಂಗಿ ವಿಡಿಯೋ ಮಾಡಿದ್ದು, ನೋಡುಗರ ಮನಕಲಕುವಂತೆ ಮಾಡಿತ್ತು. ಇದೀಗ ಸ್ನೇಹಿತ ನೀರಿನಲ್ಲಿ ಮುಳುಗಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವುದನ್ನು ಸ್ನೇಹಿತರು (Friends) ವಿಡಿಯೋ ಮಾಡಿದ್ದಾರೆ. ಹೈದರಾಬಾದ್ ಮೂಲದ ಸಾಜೀದ್ (25) ಸ್ನೇಹಿತರ ಜೊತೆ ಚೇಂಗಟಾದ ದರ್ಗಾಕ್ಕೆ ಹೋಗಿದ್ದರು. ದರ್ಗಾ ದರ್ಶನ ಬಳಿಕ ಸಾಜೀದ್ ಮದ್ಯ ಸೇವಿಸಿದ್ದನು. ಬಳಿಕ ನಾಲ್ವರು ಸ್ನೇಹಿತರು ಕಲಬುರಗಿ (Kalaburagi) ಜಿಲ್ಲೆಯ ಕಮಲಾಪುರ (Kamlapur) ತಾಲೂಕಿನ ಪಟವಾದ ಬ್ರಿಜ್ ಕಂ ಬ್ಯಾರೇಜ್ನಲ್ಲಿ ಈಜಲು ನೀರಿಗೆ ಹಾರಿದ್ದಾರೆ. ನಶೆಯಲ್ಲಿದ್ದ ಸಾಜೀದ್ ಕೂಡ ನೀರಿಗೆ ಹಾರಿದ್ದಾನೆ. ಆದರೆ ಸಾಜೀದ್ಗೆ ಈಜಲು ಆಗಲಿಲ್ಲ. ಇದರಿಂದ ನೀರಿನಲ್ಲಿ ಮುಳುಗಲು ಆರಂಭಿಸಿದ್ದಾನೆ. ಸಾಜೀದ್ ನೀರಿನಲ್ಲಿ ಮುಳುಗಿ ಸಾವು-ಬದುಕಿನ ಮಧ್ಯೆ ಹೋರಾಡಲು ಆರಂಭಿಸಿದ್ದಾನೆ. ಸಾಜೀದ್ ಮುಳುಗಿ ಸಾಯುವದನ್ನು ಕಂಡರೂ ಸ್ನೇಹಿತರು ಸಹಾಯಕ್ಕೆ ಹೋಗಿಲ್ಲ. ಅಲ್ಲದೆ ಸ್ನೇಹಿತರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದ್ದಾರೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ನೋಡಿ: ಸೋರುತಿಹುದು ಬಸ್ ಮಾಳಿಗಿ: ವಾಯುವ್ಯ ಸಾರಿಗೆ ಬಸ್ ಚಾಲಕರಿಗೆ ಛತ್ರಿ ಗ್ಯಾರಂಟಿ! ವಿಡಿಯೋ ನೋಡಿ
ಪ್ರಕರಣ ಸಂಬಂಧ ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಮಾತನಾಡಿ, ಮೃತ ಸಾಜೀದ್ ಕುಟುಂಬಸ್ಥರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದೆವೆ. ಐಪಿಸಿ ಸೆಕ್ಷನ್ 174ಸಿ ಅಡಿಯಲ್ಲಿ ಸಂಶಯಾಸ್ಪದ ಸಾವು ಪ್ರಕರಣ ದಾಖಾಲಾಗಿದೆ. ಮೇ 19 ರಂದು ಘಟನೆ ನಡೆದಿದ್ದು, ತಡವಾಗಿ ವಿಡಿಯೋ ವೈರಲ್ ಆಗಿದೆ. ಅಂದೇ ನಮ್ಮ ಕಮಲಾಪುರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ತಿಳಿಸಿದರು.
ಮೃತ ಸಾಜೀದ್ ತೆಲಂಗಾಣದ ಜಹಿರಾಬಾದ್ ನವರು. ಸಾಜೀದ್ ತನ್ನ ಐದು ಜನ ಸ್ನೇಹಿತರೊಂದಿಗೆ ಕಲಬುರಗಿಗೆ ಆಟೋದಲ್ಲಿ ದರ್ಗಾ ದರ್ಶನಕ್ಕೆ ಬಂದಿದ್ದರು. ದರ್ಶನ ಮುಗಿಸಿ ಎಲ್ಲರೂ ಕಂಠಪೂರ್ತಿ ಕುಡಿದಿದ್ದರು. ಜೊತೆಗೆ ಗಾಂಜಾ ಸೇವನೆ ಬಗ್ಗೆ ಅನುಮಾನವಿದ್ದು, ಎಲ್ಲ ಆಯಾಮದಲ್ಲಿ ತನೀಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ