ಬೆಂಗಳೂರಿನ ಹೊರವಲಯಗಳಲ್ಲಿ ಪುಂಡರ ವ್ಹೀಲಿಂಗ್ ಸ್ಟಂಟ್ ಅವ್ಯಾಹತವಾಗಿ ಮುಂದುವರಿದಿದೆ

ಪೊಲೀಸರು ಅವರ ಪುಂಡಾಟ, ಅಟ್ಟಹಾಸವನ್ನು ಕಂಡೂ ಕಾಣದ ಹಾಗೆ ಸುಮ್ಮನಿದ್ದಾರೆ. ಅರಿಗೇನಾದರೂ ಪುಂಡರ ಭಯವೇ ಎಂದು ಸ್ಥಳೀಯ ನಾಗರಿಕರು ಪ್ರಶ್ನಿಸುತ್ತಿದ್ದಾರೆ.

TV9kannada Web Team

| Edited By: Arun Belly

Jun 08, 2022 | 10:41 AM

Bengaluru: ಬೈಕ್ ಓಡಿಸುವಾಗ ವ್ಹೀಲಿಂಗ್ (wheeling) ಮಾಡುತ್ತಾ ರಸ್ತೆ ಮೇಲೆ ಓಡಾಡುವ ಬೇರೆ ಜನರ ಪ್ರಾಣಗಳಿಗೆ ಕಂಟಕವಾಗುತ್ತಿರುವ ಪುಂಡ ಬೈಕರ್​ಗಳ ಪೀಡೆ ಕೊನೆಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಬೆಂಗಳೂರು ಹೊರವಲಯದ (outskirts) ಎಮ್ ಎಸ್ ಪಾಳ್ಯ (MS Palya) ಮತ್ತು ದಾಸರಹಳ್ಳಿ (Dasarahalli) ಏರಿಯಾಗಳಲ್ಲಿ ಈ ವಿಡಿಯೋನಲ್ಲಿ ಕಾಣುತ್ತಿರುವ ಹಾಗೆ ವ್ಹೀಲಿಂಗ್ ಮಾಡುವ ಯುವಕರು ಪ್ರತಿನಿತ್ಯ ಕಾಣುತ್ತಾರೆ. ಪೊಲೀಸರು ಅವರ ಪುಂಡಾಟ, ಅಟ್ಟಹಾಸವನ್ನು ಕಂಡೂ ಕಾಣದ ಹಾಗೆ ಸುಮ್ಮನಿದ್ದಾರೆ. ಅರಿಗೇನಾದರೂ ಪುಂಡರ ಭಯವೇ ಎಂದು ಸ್ಥಳೀಯ ನಾಗರಿಕರು ಪ್ರಶ್ನಿಸುತ್ತಿದ್ದಾರೆ.

ಬೆಂಗಳೂರಿನ ಹೊಸ ಪೊಲೀಸ್ ಕಮೀಶನರ್ ಅವರು ವ್ಹೀಲಿಂಗ್ ಪೀಡೆಯನ್ನು ತೊಡೆದು ಹಾಕಲು ತಮ್ಮ ಸಿಬ್ಬಂದಿಗೆ ಸೂಚನೆ ನೀಡಬೇಕು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow us on

Click on your DTH Provider to Add TV9 Kannada