ಹಂತಕರೇ ಕೊಲೆ ಮಾಡಿರುವುದನ್ನು ಒಪ್ಪಿಕೊಂಡ ಬಳಿಕ ವಿಚಾರಣೆ ನಡೆಸುವುದರಲ್ಲಿ ಏನರ್ಥವಿದೆ? ಕೆ ಎಸ್ ಈಶ್ವರಪ್ಪ

| Updated By: ರಶ್ಮಿ ಕಲ್ಲಕಟ್ಟ

Updated on: Jun 29, 2022 | 8:32 PM

ಆದರೆ ಭಾರತದ ಸಂವಿಧಾನದ ಪ್ರಕಾರ ಹಾಗೆ ಮಾಡಲು ಅವಕಾಶವಿಲ್ಲದ ಕಾರಣ ರಾಜದ್ರೋಹ ಸಂಬಂಧವಾಗಿ ಇರುವ ಕಾಯ್ದೆಯನ್ನು ಕೂಡಲೇ ತಿದ್ದುಪಡಿ ಮಾಡಬೇಕು ಎಂದರು

Shivamogga:  ಮಾಜಿ ಸಚಿವ ಕೆ ಎಸ್ ಈಶ್ವರಪ್ಪ (KS Eshwarappa) ಅವರು ಬುಧವಾರ ಶಿವಮೊಗ್ಗದಲ್ಲಿ ಪತ್ರಿಕಾ ಗೋಷ್ಟಿಯೊಂದನ್ನು ನೂಪುರ್ ಶರ್ಮ (Nupur Sharma) ಅವರು ಪ್ರವಾದಿ ಕುರಿತು ಹೇಳಿದ್ದನ್ನು ಸಮರ್ಥಿಸಿದ ರಾಜಸ್ತಾನ (Rajasthan) ಟೇಲರೊಬ್ಬರನ್ನು ಕೊಂದಿದ್ದೂ ಅಲ್ಲದೆ ಪ್ರಧಾನ ಮಂತ್ರಿ ಯವರಿಗೂ ಇದೇ ಗತಿಯನ್ನುಂಟು ಮಾಡುತ್ತೇವೆ ಎಂದಿರುವ ರಾಷ್ಟ್ರದ್ರೋಹಿ ಹಂತಕರು ತಮ್ಮ ಅಪರಾಧವನ್ನು ಅಂಗೀಕರಿಸಿರುವುದರಿಂದ ಅವರನ್ನು ಗುಂಡಿಟ್ಟು ಕೊಲ್ಲಬೇಕು ಇಲ್ಲವೇ ನೇಣಿಗೇರಿಸಬೇಕು ಅಂತ ಹೇಳಿದರು.

ಆದರೆ ಭಾರತದ ಸಂವಿಧಾನದ ಪ್ರಕಾರ ಹಾಗೆ ಮಾಡಲು ಅವಕಾಶವಿಲ್ಲದ ಕಾರಣ ರಾಜದ್ರೋಹ ಸಂಬಂಧವಾಗಿ ಇರುವ ಕಾಯ್ದೆಯನ್ನು ಕೂಡಲೇ ತಿದ್ದುಪಡಿ ಮಾಡಬೇಕು ಎಂದರು. ಹಂತಕರು ಖುದ್ದು ತಾವಾಗೇ ಕೊಲೆ ಮಾಡಿರುವುದನ್ನು ಒಪ್ಪಿಕೊಂಡ ಬಳಿಕ ವಿಚಾರಣೆ ನಡೆಸುವುದರಲ್ಲಿ ಏನರ್ಥ ಎಂದು ಈಶ್ವರಪ್ಪ ಪ್ರಶ್ನಿಸಿದರು.

ಇದನ್ನೂಓದಿ:    ಟೇಲರ್ ಕನ್ಹಯ್ಯಾ ಹತ್ಯೆ ಪ್ರಕರಣ: ದಿನೇಶ್​ ಗುಂಡುರಾವ್​​ಗೆ ತಿರುಗೇಟು ನೀಡಿದ ಬಿಜೆಪಿ ಎಂಎಲ್ಸಿ ತೇಜಸ್ವಿನಿ ಗೌಡ

Published on: Jun 29, 2022 07:44 PM