ಟೇಲರ್ ಕನ್ಹಯ್ಯಾ ಹತ್ಯೆ ಪ್ರಕರಣ: ದಿನೇಶ್​ ಗುಂಡುರಾವ್​​ಗೆ ತಿರುಗೇಟು ನೀಡಿದ ಬಿಜೆಪಿ ಎಂಎಲ್ಸಿ ತೇಜಸ್ವಿನಿ ಗೌಡ

ಉದಯಪುರದಲ್ಲಿ ನಡೆದ ಟೇಲರ್ ಕನ್ಹಯ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಎಂಎಲ್ಸಿ ತೇಜಸ್ವಿನಿಗೌಡ ಮಾತನಾಡಿ ಹಿಂದು ಸಮಾಜ ಹೇಡಿ ಸಮಾಜ ಅಲ್ಲಾ. ನಮ್ಮ ಹೆಣ್ಣು ಮಕ್ಕಳು ಆತ್ಮರಕ್ಷಣೆ ಮಾಡಿಕೊಳ್ಳಲು  ಚಾಕು ಇಟ್ಕೊಂಡು, ಚೂರಿ ಇಟ್ಕೊಂಡು ಚೂರಿ ಚಿಕ್ಕಣ್ಣಂತೆ ಬೀದಿ ಬೀದಿಯಲ್ಲಿ ತಿರುಗಾಡಲು ಪ್ರಾರಂಭಿಸಿದರೆ ಕರ ಕರ ಅಂತ ತರಕಾರಿ ಹೆಚ್ಚುವ ಹಾಗೆ ಹರಿಯುತ್ತಾರೆ.  ಆ ಸ್ಥಿತಿ ಬರದೆ ಇರಲಿ ಎಂದು ಗದಗನಲ್ಲಿ ಹೇಳಿದ್ದಾರೆ.

ಟೇಲರ್ ಕನ್ಹಯ್ಯಾ ಹತ್ಯೆ ಪ್ರಕರಣ: ದಿನೇಶ್​ ಗುಂಡುರಾವ್​​ಗೆ ತಿರುಗೇಟು ನೀಡಿದ ಬಿಜೆಪಿ ಎಂಎಲ್ಸಿ ತೇಜಸ್ವಿನಿ ಗೌಡ
ಬಿಜೆಪಿ ಎಂಎಲ್​​ಸಿ ತೇಜಸ್ವಿನಿ ಗೌಡ
TV9kannada Web Team

| Edited By: Vivek Biradar

Jun 29, 2022 | 6:34 PM

ಗದಗ: ಉದಯಪುರದಲ್ಲಿ (Udaypur) ನಡೆದ ಟೇಲರ್ ಕನ್ಹಯ್ಯಾ ಹತ್ಯೆ (Tailor Kanhaiya Murder) ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ (BJP) ಎಂಎಲ್ಸಿ (MLC) ತೇಜಸ್ವಿನಿಗೌಡ (Tejaswini gowda) ಮಾತನಾಡಿ ಹಿಂದೂ (Hindu) ಸಮಾಜ ಹೇಡಿ ಸಮಾಜ ಅಲ್ಲಾ. ನಮ್ಮ ಹೆಣ್ಣು ಮಕ್ಕಳು ಆತ್ಮರಕ್ಷಣೆ ಮಾಡಿಕೊಳ್ಳಲು  ಚಾಕು ಇಟ್ಕೊಂಡು, ಚೂರಿ ಇಟ್ಕೊಂಡು ಚೂರಿ ಚಿಕ್ಕಣ್ಣಂತೆ ಬೀದಿ ಬೀದಿಯಲ್ಲಿ ತಿರುಗಾಡಲು ಪ್ರಾರಂಭಿಸಿದರೆ ಕರ ಕರ ಅಂತ ತರಕಾರಿ ಹೆಚ್ಚುವ ಹಾಗೆ ಹರಿಯುತ್ತಾರೆ.  ಆ ಸ್ಥಿತಿ ಬರದೆ ಇರಲಿ ಎಂದು ಗದಗನಲ್ಲಿ ಹೇಳಿದ್ದಾರೆ. ಘೋರ ಶಿಕ್ಷೆಗೆ  ಘೋರ ಶಿಕ್ಷೆನೇ ಆಗಬೇಕು, ಅದನ್ನು ನ್ಯಾಯಾಲಯ ಕೊಡಬೇಕು. ಹಂತಕರು ಎತ್ತಿದ ಕತ್ತಿ, ಕೈಯನ್ನು ನಿಯಂತ್ರಣ ಮಾಡಬೇಕು. ಆತನಿಗೆ ನ್ಯಾಯಾಲಯ ವ್ಯವಸ್ಥೆಯಲ್ಲಿ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಇದನ್ನು ಓದಿ: ಬಂಧಿತರಾಗುವ ಸಾಮಾನ್ಯ ಕೈದಿಗಳಿಗೆ ಕೈಕೋಳ ಹಾಕಬಾರದು: ಧಾರವಾಡ ಹೈಕೋರ್ಟ್

ಹಿಂದೂ ಸಮಾಜ ಸಂಯಮದಿಂದ ಕಾಯುತ್ತಿದೆ. ನಾವು ಹೇಡಿಗಳಲ್ಲಾ, ನಾವು, ಹಿಂದೂ ಸಮಾಜ ಕಾನೂನು ಕೈಗೆ ಎತ್ತಿಕೊಳ್ಳಲ್ಲಾ. ಮೊದಲು ಸಮರ್ಥನೆ ಮಾಡಿಕೊಳ್ಳೋವದನ್ನು ಬಿಡಲಿ. ಇವರು ಜಜನರ ಕೆಲಸ, ದೇಶದ ಕೆಲಸ ಮಾಡಿದರೆ ಬುಟ್ಟಿಗೆ ವೋಟ್ ಬೀಳುತ್ತವೆ. ಇವರು ಮಲ್ಕೊಂಡು ಚುನಾವಣೆ ದಿನ ಓಡಿ ಬಂದರೆ ಎಲ್ಲಿ ವೋಟ್ ಬೀಳುತ್ತವೆ ಎಂದು ಕಾಂಗ್ರೆಸ್ ವಿರುದ್ಧ ತೇಜ್ವಸ್ವಿನಿಗೌಡ ವಾಗ್ದಾಳಿ ನಡೆಸಿದ್ದಾರೆ.

ಇದನ್ನು ಓದಿ: India Post Recruitment 2022: PUC ಪಾಸಾದವರಿಗೆ ಅಂಚೆ ಇಲಾಖೆಯಲ್ಲಿದೆ ಉದ್ಯೋಗಾವಕಾಶ: ವೇತನ 81 ಸಾವಿರ ರೂ.

ದಿನಾ ಒಬ್ಬರನ್ನು ಕತ್ತು ಕುಯ್ಯಲು ರಾಜಕೀಯಕ್ಕೆ ಒಂದಿಷ್ಟು ಕೋಟಾ ಇಡಲಿ. ಹತ್ಯೆ ಮಾಡಲು ಮಂದಿನ ಕೋಟಾ ಇಡುತ್ತಾರೆ ಅವರನ್ನು ಕೇಳಿ. ಅವರಿಗೆ ಮನುಷ್ಯತ್ವದ ಬಗ್ಗೆ ಸಂಬಂಧ ಇದೆಯಾ.? ನೂಪುರ ಶರ್ಮಾ ಅವರನ್ನು ವಕ್ತಾರ ಸ್ಥಾನದಿಂದ ತೆಗೆದು ಹಾಕಲಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ಇಬ್ಬರು ಹೋಗಿ ಕೋಳಿ ಕುಯ್ಯದಂಗ ಕತ್ತು ಮನುಷ್ಯನ ಕತ್ತು ಕುಯ್ಯತಾರೆ ಏನ್ ರೀ ? ದುರಬಿನ ಹಾಕಿಕೊಂಡು ದಿನೇಶ್ ಗುಂಡೂರಾವ್ ಅವರನ್ನು ಹುಡುಕಬೇಕು. ಇವರಿಗೆ ಜಜನರು ಉತ್ತರ ಕೊಡುತ್ತಾರೆ. ಹಿಂದೂಗಳನ್ನು ವಿರೋಧ ಮಾಡಬೇಕು ಎಂದರೆ ಈ ರೀತಿನಾ..? ವೋಟ್ ಗಾಗಿ ಈ ರೀತಿ ಪ್ಲೇಜ್ ಮಾಡಬೇಕಾ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಟ್ವಿಟ್​​ಗೆ ತೇಜಸ್ವಿನಿಗೌಡ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada