ಬಂಧಿತರಾಗುವ ಸಾಮಾನ್ಯ ಕೈದಿಗಳಿಗೆ ಕೈಕೋಳ ಹಾಕಬಾರದು: ಧಾರವಾಡ ಹೈಕೋರ್ಟ್​​

ಬಂಧಿತರಾಗುವ ಸಾಮಾನ್ಯ ಕೈದಿಗಳಿಗೆ ಕೈಕೋಳ ಹಾಕಬಾರದು. ಅತ್ಯಗತ್ಯ ಸಂದರ್ಭಗಳಲ್ಲಿ ಮಾತ್ರ ಕೈಕೋಳ ಹಾಕಬೇಕು ಎಂದು ಧಾರವಾಡ ಹೈಕೋರ್ಟ್​​ನ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ತೀರ್ಪು ನೀಡಿದೆ.

ಬಂಧಿತರಾಗುವ ಸಾಮಾನ್ಯ ಕೈದಿಗಳಿಗೆ ಕೈಕೋಳ ಹಾಕಬಾರದು: ಧಾರವಾಡ ಹೈಕೋರ್ಟ್​​
ಕೈಕೋಳ ಸಾಂಧರ್ಬಿಕ ಚಿತ್ರ
Follow us
| Updated By: ವಿವೇಕ ಬಿರಾದಾರ

Updated on: Jun 29, 2022 | 5:28 PM

ಧಾರವಾಡ: ಬಂಧಿತರಾಗುವ ಸಾಮಾನ್ಯ ಕೈದಿಗಳಿಗೆ (Accused) ಕೈಕೋಳ (Handcuffs) ಹಾಕಬಾರದು. ಅತ್ಯಗತ್ಯ ಸಂದರ್ಭಗಳಲ್ಲಿ ಮಾತ್ರ ಕೈಕೋಳ ಹಾಕಬೇಕು ಎಂದು ಧಾರವಾಡ (Dharwad) ಹೈಕೋರ್ಟ್​​ನ (Highcourt) ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ತೀರ್ಪು ನೀಡಿದೆ. ಕಾನೂನು ವಿದ್ಯಾರ್ಥಿ (Law Student) ಸುಪ್ರೀತ್ ಈಶ್ವರ್ ದಿವಾಟೆ  ಅವರಿಗೆ ಕೈಕೋಳ ಹಾಕಲಾಗಿತ್ತು. ಈ ಸಂಬಂಧ ವಿದ್ಯಾರ್ಥಿ ಸುಪ್ರೀತ್ ಈಶ್ವರ್ ದಿವಾಟೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದೆ ನ್ಯಾಯಾಲಯ ತೀರ್ಪು ನೀಡಿ, ಕೈಕೋಳ ಹಾಕಲಾಗಿದ್ದ ಕಾನೂನು ವಿದ್ಯಾರ್ಥಿಗೆ 2 ಲಕ್ಷ ಪರಿಹಾರ ನೀಡುವಂತೆ ಸೂಚಿಸಿದೆ.

ಇದನ್ನು ಓದಿ: ಬೀದಿ ನಾಯಿಗಳಿಂದ ನಾಗರಿಕರಿಗೆ ರಕ್ಷಣೆ ಒದಗಿಸುವುದು ಸ್ಥಳೀಯ ಆಡಳಿತ ಸಂಸ್ಥೆಗಳ ಕರ್ತವ್ಯ: ಹೈಕೋರ್ಟ್​

ಕೈದಿ ತಪ್ಪಿಸಿಕೊಳ್ಳುವ ಅಥವಾ ತೊಂದರೆ ಮಾಡುವಂತಿದ್ದರೆ ಮಾತ್ರ ಕೈಕೋಳ ಹಾಕಬೇಕು.  ಕೈದಿಗೆ ಕೈಕೋಳ ಹಾಕಲು ಕೇಸ್ ಡೈರಿಯಲ್ಲಿ ಕಾರಣ ಬರೆಯಬೇಕು. ಕೋರ್ಟ್​ಗೆ ಹಾಜರುಪಡಿಸುವ ಕೈದಿಯನ್ನು ಜಡ್ಜ್​ ಕೈಕೋಳ ಹಾಕಲಾಗಿತ್ತೇ ಎಂಬುದನ್ನು ವಿಚಾರಿಸಬೇಕು. ಕೈಕೋಳ ಹಾಕಿದ್ದರೆ ಅದಕ್ಕೆ ಅಧಿಕಾರಿಗಳು ಕಾರಣ ನೀಡಬೇಕು. ಸಾಧ್ಯವಾದಷ್ಟು ವಿಡಿಯೊ ಕಾನ್ಫರೆನ್ಸ್​ನಲ್ಲೇ ಕೈದಿಗಳನ್ನು ಹಾಜರುಪಡಿಸಬೇಕು. ಆದಷ್ಟೂ ಕೈಕೋಳ ಹಾಕಲು ಕೋರ್ಟ್​ನಿಂದಲೇ ಆದೇಶ ಪಡೆಯಬೇಕು. ಇಲ್ಲವಾದರೆ ಅಧಿಕಾರಿಗೆ ತೊಂದರೆ ಎದುರಾಗಬಹುದು ಎಂದು ಎಚ್ಚರಿಕೆ ನೀಡಿದೆ.

ಇದನ್ನು ಓದಿ: ಕೇವಲ ಡಾಕ್ಯುಮೆಂಟ್ ಗೋಸ್ಕರ ವಾಹನ ತಡೆಯೋದು ಬೇಡ; 10 ಜನಕ್ಕಾಗಿ 100 ಜನರಿಗೆ ಸಮಸ್ಯೆ‌ ಆಗ‌ಬಾರದು – ಡಿಜಿ & ಐಜಿಪಿ ಪ್ರವೀಣ್ ಸೂದ್ ಪುನರುಚ್ಚಾರ

ಪೊಲೀಸ್ ಠಾಣೆಗಳಲ್ಲಿ ಖಾಲಿ ಹುದ್ದೆ ಭರ್ತಿ ಮಾಡಬೇಕು. ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಬಾಡಿ ಕ್ಯಾಮರಾ ನೀಡಬೇಕು. ಬಾಡಿ ಕ್ಯಾಮರಾಗಳಲ್ಲಿ ಮೈಕ್ರೋ ಫೋನ್ ವ್ಯವಸ್ಥೆ ಇರಬೇಕು. ಆ ರೆಕಾರ್ಡಿಂಗ್​ಗಳನ್ನು ಒಂದು ವರ್ಷ ಸಂರಕ್ಷಿಸಿಡಬೇಕು. ಪೊಲೀಸ್ ಸಿಬ್ಬಂದಿಗೆ ಮಾರ್ಗಸೂಚಿ ನಿಗದಿಪಡಿಸಬೇಕು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಹೈಕೋರ್ಟ್ ಸೂಚನೆ ನೀಡಿದೆ.