ಬೀದಿ ನಾಯಿಗಳಿಂದ ನಾಗರಿಕರಿಗೆ ರಕ್ಷಣೆ ಒದಗಿಸುವುದು ಸ್ಥಳೀಯ ಆಡಳಿತ ಸಂಸ್ಥೆಗಳ ಕರ್ತವ್ಯ: ಹೈಕೋರ್ಟ್
ಬೀದಿ ನಾಯಿಗಳಿಂದ ನಾಗರಿಕರಿಗೆ ರಕ್ಷಣೆ ಒದಗಿಸುವುದು ಸ್ಥಳೀಯ ಆಡಳಿತ ಸಂಸ್ಥೆಗಳ ಕರ್ತವ್ಯವೆಂದು ಹೈಕೋರ್ಟ್ ಆದೇಶ ನೀಡಿದೆ.
ಬೆಂಗಳೂರು: ಬೀದಿ ನಾಯಿಗಳಿಂದ (Dogs) ನಾಗರಿಕರಿಗೆ (People) ರಕ್ಷಣೆ ಒದಗಿಸುವುದು ಸ್ಥಳೀಯ ಆಡಳಿತ ಸಂಸ್ಥೆಗಳ (Local governing body) ಕರ್ತವ್ಯವೆಂದು ಹೈಕೋರ್ಟ್ (Highcourt) ಆದೇಶ ನೀಡಿದೆ. 2018ರ ನವೆಂಬರ್ 29ರಂದು ಬೀದಿನಾಯಿ ದಾಳಿಯಿಂದ ಯೂಸುಬ್ ಎಂಬುವರ 22 ತಿಂಗಳ ಮಗು ಸಾವನ್ನಪ್ಪಿತ್ತು. ಈ ಸಂಬಂಧ ತೀರ್ಪು ನೀಡಿದ ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಮೃತ ಮಗುವಿನ ಕುಟುಂಬಸ್ಥರಿಗೆ 10 ಲಕ್ಷ ಪರಿಹಾರ ನೀಡಬೇಕು. ಮತ್ತು 20 ಸಾವಿರ ಕಾನೂನು ಹೋರಾಟದ ವೆಚ್ಚ ಭರಿಸುವಂತೆ ಬೆಳಗಾವಿ (Belagavi) ಜಿಲ್ಲಾ ಪಂಚಾಯಿತಿಗೆ (Zilla Panchayat) ಹೈಕೋರ್ಟ್ ನಿರ್ದೇಶಿಸಿದೆ.
ಇದನ್ನು ಓದಿ: ಸರ್ಕಾರಿ ಪಿಯು ಕಾಲೇಜುಗಳಿಗೆ ಸೇರುವ ವಿದ್ಯಾರ್ಥಿನಿಯರು ಪಾವತಿಸುವ ಶುಲ್ಕಕ್ಕೆ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ
ಸ್ಥಳೀಯ ಸಂಸ್ಥೆಗಳು ಬೀದಿ ನಾಯಿಗಳಿಗೆ ಲಸಿಕೆ ಹಾಕಬೇಕು. ಬೀದಿ ನಾಯಿಗಳ ಜನನ ನಿಯಂತ್ರಣ ನಿಯಮ ಪಾಲಿಸಬೇಕು. ರೋಗಪೀಡಿತ ನಾಯಿಗಳಿಗೆ ಮತ್ತು ರೇಬಿಸ್ ಪೀಡಿತ ನಾಯಿಗಳಿಗೂ ದಯಾಮರಣ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಸಾರ್ವಜನಿಕರಿಗೆ, ಮಕ್ಕಳಿಗೆ ಕಚ್ಚುವ ನಾಯಿಗಳ ಉಪಟಳ ನಿವಾರಿಸಬೇಕು.
ಇದನ್ನು ಓದಿ: Vice President Elections Date ಆಗಸ್ಟ್ 6ರಂದು ಉಪರಾಷ್ಟ್ರಪತಿ ಚುನಾವಣೆ
ಸ್ಥಳೀಯ ಆಡಳಿತಗಳು ಜನರ ದೂರು ಸ್ವೀಕರಿಸಲು ವ್ಯವಸ್ಥೆ ಕಲ್ಪಿಸಬೇಕು. ಘನ ತ್ಯಾಜ್ಯ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು. ಬೀದಿನಾಯಿ ದಾಳಿಯ ಸಂತ್ರಸ್ತರಿಗೆ ಪರಿಹಾರ ನೀಡಬೇಕು. ಸಾಕು ನಾಯಿಗಳಿಗೆ ಮಾಲೀಕರು ಸರಪಳಿ ಹಾಕಿರಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ.
Published On - 4:51 pm, Wed, 29 June 22