ಕೇವಲ ಡಾಕ್ಯುಮೆಂಟ್ ಗೋಸ್ಕರ ವಾಹನ ತಡೆಯೋದು ಬೇಡ; 10 ಜನಕ್ಕಾಗಿ 100 ಜನರಿಗೆ ಸಮಸ್ಯೆ‌ ಆಗ‌ಬಾರದು – ಡಿಜಿ & ಐಜಿಪಿ ಪ್ರವೀಣ್ ಸೂದ್ ಪುನರುಚ್ಚಾರ

ಅನವಶ್ಯಕವಾಗಿ ವಾಹನ ತಡೆದು ಡಾಕ್ಯುಮೆಂಟ್ ಚೆಕ್ ಮಾಡೋದು ಬೇಡ. ಕಣ್ಣಿಗೆ ಕಾಣುವಂತೆ ರೂಲ್ಸ್ ಬ್ರೇಕ್ ಮಾಡಿದ್ರೆ ತಡೆದು ನಿಲ್ಲಿಸಿ. 100ರಲ್ಲಿ 10 ಜನರ ಬಳಿ ಡಾಕ್ಯುಮೆಂಟ್ ಇರಲ್ಲ ನಿಜ ಆದರೆ 10 ಜನಕ್ಕಾಗಿ 100 ಜನರಿಗೆ ಸಮಸ್ಯೆ‌ ಆಗ‌ಬಾರದು.

ಕೇವಲ ಡಾಕ್ಯುಮೆಂಟ್ ಗೋಸ್ಕರ ವಾಹನ ತಡೆಯೋದು ಬೇಡ; 10 ಜನಕ್ಕಾಗಿ 100 ಜನರಿಗೆ ಸಮಸ್ಯೆ‌ ಆಗ‌ಬಾರದು - ಡಿಜಿ & ಐಜಿಪಿ ಪ್ರವೀಣ್ ಸೂದ್ ಪುನರುಚ್ಚಾರ
ಪ್ರವೀಣ್ ಸೂದ್
TV9kannada Web Team

| Edited By: Ayesha Banu

Jun 29, 2022 | 5:17 PM

ಬೆಂಗಳೂರು: ಬೆಂಗಳೂರಿನಲ್ಲಿ ಟ್ರಾಫಿಕ್ ಕಂಟ್ರೋಲ್ಗೆ(Traffic Control) ಪ್ರಧಾನಿ ಸೂಚನೆ ಹಿನ್ನೆಲೆ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಡಿಜಿ & ಐಜಿಪಿ ಪ್ರವೀಣ್ ಸೂದ್(Praveen Sood) ನೇತೃತ್ವದಲ್ಲಿ ಸಭೆ ನಡೆದಿದೆ. ನಗರ ಪೊಲೀಸ್ ಆಯುಕ್ತರು ಸೇರಿ 8 ಅಧಿಕಾರಿಗಳ ಜೊತೆ ಟ್ರಾಫಿಕ್ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಲಾಗಿದೆ. ಸಭೆಯಲ್ಲಿ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆದಿದೆ. ಸಭೆ ಬಳಿಕ ಪ್ರವೀಣ್ ಸೂದ್ ಸಭೆಯಲ್ಲಿ ನಡೆದ ಚರ್ಚೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಕೇವಲ ಡಾಕ್ಯುಮೆಂಟ್ ಗೋಸ್ಕರ ವಾಹನ ತಡೆಯೋದು ಬೇಡ ಅನವಶ್ಯಕವಾಗಿ ವಾಹನ ತಡೆದು ಡಾಕ್ಯುಮೆಂಟ್ ಚೆಕ್ ಮಾಡೋದು ಬೇಡ. ಕಣ್ಣಿಗೆ ಕಾಣುವಂತೆ ರೂಲ್ಸ್ ಬ್ರೇಕ್ ಮಾಡಿದ್ರೆ ತಡೆದು ನಿಲ್ಲಿಸಿ. 100ರಲ್ಲಿ 10 ಜನರ ಬಳಿ ಡಾಕ್ಯುಮೆಂಟ್ ಇರಲ್ಲ ನಿಜ ಆದರೆ 10 ಜನಕ್ಕಾಗಿ 100 ಜನರಿಗೆ ಸಮಸ್ಯೆ‌ ಆಗ‌ಬಾರದು. ನನ್ನ ಆದೇಶ ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ವೆಹಿಕಲ್ ತಡೆಯಲೇ ಬೇಡಿ ಅಂತ‌ ಹೇಳಿಲ್ಲ. ಕೇವಲ ಡಾಕ್ಯುಮೆಂಟ್ ಗೋಸ್ಕರ ತಡೆಯೋದು ಬೇಡ ಅಂತ ಹೇಳಲಾಗಿದೆ‌ ಎಂದು ಸಭೆಯಲ್ಲಿ ನಡೆದ ಚರ್ಚೆಗಳ ಬಗ್ಗೆ ಪ್ರವೀಣ್ ಸೂದ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬೋಲ್ಡ್ ಫೋಟೋ ಹಂಚಿಕೊಂಡು ಪಡ್ಡೆಗಳ ನಿದ್ದೆ ಕದ್ದ ನಟಿ ರಶ್ಮಿಕಾ ಮಂದಣ್ಣ; ಫ್ಯಾನ್ಸ್ ಹೇಳಿದ್ದೇನು?

ಇನ್ನು ಟೋಯಿಂಗ್ ಕುರಿತು DG & IGP ಸಭೆಯಲ್ಲಿ ಚರ್ಚೆ ನಡೆದಿದ್ದು ಸದ್ಯಕ್ಕೆ ಟೋಯಿಂಗ್ ಜಾರಿ ಮಾಡೊ ಆಲೋಚನೆ ಇಲ್ಲ. ಟೋಯಿಂಗ್ ನಲ್ಲೂ ಹಲವು ಲೂಪ್‌ ಹೋಲ್ಸ್ ಇದೆ. ಟೋಯಿಂಗ್ ನಲ್ಲಿ ಸ್ವಲ್ಪ ಅವ್ಯವಹಾರ ಕೂಡ ನಡೆದಿರೊ‌ ಮಾಹಿತಿ ಇದೆ‌. ಟೋಯಿಂಗ್ ಖಾಸಗಿ ಅವ್ರಿಗೆ ಕೊಡಲಾಗುವುದು. ಸಿಬ್ಬಂದಿ ಕೊರತೆಯಿಂದ ಪೊಲೀಸರೆ ನಿರ್ವಹಿಸೋದು ಕಷ್ಟ. ಮುಂದೆ ಅವಲೋಕನ ಮಾಡಿ ಟೋಯಿಂಗ್ ತರಲು ಚಿಂತನೆ ನಡೆದಿದೆ. ಆದ್ರೆ ಸದ್ಯ ಟೋಯಿಂಗ್ ಮಾಡೊಬಗ್ಗೆ ಯಾವುದೇ ಚಿಂತನೆ ಇಲ್ಲ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada