ಮಂಡ್ಯದಲ್ಲಿ ಹಿಂದೆ ನಾವು ಸೋತಾಗ ಕುಮಾರಸ್ವಾಮಿಯಂತೆ ಚಡಪಡಿಸಿರಲಿಲ್ಲ: ಎನ್ ಚಲುವರಾಯಸ್ವಾಮಿ
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ 7ರಲ್ಲಿ 6 ಗೆದ್ದು ಹಿರಿಮೆ ಸಾಧಿಸಿದೆ. ಸೋತಾಗ ನಮ್ಮಂತೆ ಬಾಯಿ ಮುಚ್ಚಿಕೊಂಡಿರುವುದನ್ನು ಬಿಟ್ಟು ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುವುದರಲ್ಲಿ, ಮಂಡ್ಯದ ನೆಮ್ಮದಿ ಹಾಳು ಮಾಡುವುದರಲ್ಲಿ ಕುಮಾರಸ್ವಾಮಿ ತಲ್ಲೀನರಾಗಿದ್ದಾರೆ ಎಂದು ಚಲುವರಾಯಸ್ವಾಮಿ ಹೇಳಿದರು.
ಮಂಡ್ಯ: ಕೃಷಿ ಸಚಿವ ಎನ್ ಚಲುವರಾಯಸ್ವಾಮಿ (N Cheluvarayaswamy) ಮತ್ತು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ನಡುವೆ ವಾಕ್ಸಮರ ನಡೆಯುತ್ತಿರುತ್ತದೆ ಅದರಲ್ಲಿ ಹೊಸತೇನೂ ಇಲ್ಲ. ಆದರೆ, ಇಂದು ನಗರದಲ್ಲಿ ಸುದ್ದಿದಾರರೊಂದಿಗೆ ಮಾತಾಡಿದ ಚಲುವರಾಯಸ್ವಾಮಿ ಕೆಲ ಇಂಟರಸ್ಟಿಂಗ್ ವಿಷಯಗಳನ್ನು ಹೇಳಿದರು. ಮಂಡ್ಯ ಜಿಲ್ಲೆಯಲ್ಲಿ (Mandya district) ಪುನಃ ತಮ್ಮ ವರ್ಚಸನ್ನು ಸ್ಥಾಪಿಸಲು ಕುಮಾರಸ್ವಾಮಿ ಹತಾಶ ಪ್ರಯತ್ನಗಳನ್ನು ಮಡುತ್ತಿದ್ದಾರೆ. ಹಿಂದೆ ನಡೆ ವಿಧಾನಸಭಾ ಚುನಾವಣೆಲ್ಲಿ ಕಾಂಗ್ರೆಸ್ ಪಕ್ಷ ಎಲ್ಲ 7 ಸ್ಥಾನಗಳನ್ನು ಸೋತು ಜೆಡಿಎಸ್ ಸಾರ್ವಭೌಮತೆ ಮೆರೆದಾಗ ತಾವ್ಯಾರೂ ಅತಿರೇಕದ ಹೇಳಿಕೆಗಳನ್ನು ನೀಡಿರಲಿಲ್ಲ, ಜನ ನೀಡಿದ ಮ್ಯಾಂಡೇಟ್ ಒಪ್ಪಿಕೊಂಡು ಮುಂದಿನ ಐದು ವರ್ಷಗಳ ಕಾಲ ಬಾಯಿ ಮುಚ್ಚಿಕೊಂಡು ಕೆಲಸ ಮಾಡಿದೆವು ಎಂದು ಸಚಿವ ಹೇಳಿದರು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ 7ರಲ್ಲಿ 6 ಗೆದ್ದು ಹಿರಿಮೆ ಸಾಧಿಸಿದೆ. ಸೋತಾಗ ನಮ್ಮಂತೆ ಬಾಯಿ ಮುಚ್ಚಿಕೊಂಡಿರುವುದನ್ನು ಬಿಟ್ಟು ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುವುದರಲ್ಲಿ, ಮಂಡ್ಯದ ನೆಮ್ಮದಿ ಹಾಳು ಮಾಡುವುದರಲ್ಲಿ ಕುಮಾರಸ್ವಾಮಿ ತಲ್ಲೀನರಾಗಿದ್ದಾರೆ ಎಂದು ಚಲುವರಾಯಸ್ವಾಮಿ ಹೇಳಿದರು. ಯಾರೇನೇ ಮಾಡಿದರೂ ತಮ್ಮ ಪಕ್ಷ ಮಂಡ್ಯದ ಅಭಿವೃದ್ಧಿಗೆ ಕಂಕಣಬದ್ಧವಾಗಿದೆ ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ