ದೇವರಾಜ ಅರಸು ರಾಜ್ಯದ ಮುಖ್ಯಮಂತ್ರಿಯಾದಾಗ ವಿಧಾನಸಭಾ ಸದಸ್ಯ ಕೂಡ ಆಗಿರಲಿಲ್ಲ: ಕೆಎನ್ ರಾಜಣ್ಣ, ಸಚಿವ

ಅರುಣ್​ ಕುಮಾರ್​ ಬೆಳ್ಳಿ

Updated on: Feb 15, 2025 | 4:08 PM

ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರಿಲ್ಲದೆ ಕಾಂಗ್ರೆಸ್ ಇಲ್ಲ ಅಂತ ಮಾಧ್ಯಮದವರು ವರದಿ ಮಾಡುವ ಹಾಗಿದ್ದರೆ ತಾನೇನೂ ಹೇಳಲ್ಲ ಎಂದು ರಾಜಣ್ಣ ಹೇಳುತ್ತಾರೆ. ರಾಜ್ಯದಲ್ಲಿ ಬಿಜೆಪಿಗೆ ಬಿಎಸ್ ಯಡಿಯೂರಪ್ಪ ಮತ್ತು ಕಂಪನಿ ಜೀವಾಳ, ಜೆಡಿಎಸ್ ಪಕ್ಷಕ್ಕೆ ಹೆಚ್ ಡಿ ದೇವೆಗೌಡ ಮತ್ತು ಕಂಪನಿ ಆಧಾರ ಹಾಗೆಯೇ, ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯ ಮತ್ತು ಕಂಪನಿಯೇ ಊರುಗೋಲು ಎಂದು ರಾಜಣ್ಣ ಹೇಳುತ್ತಾರೆ.

ತುಮಕೂರು: ಡಿ ದೇವರಾಜು ಅರಸು ಅವರು ಮುಖ್ಯಮಂತ್ರಿಯಾದ ಸಂದರ್ಭದ ಬಗ್ಗೆ ಸಚಿವ ಕೆಎನ್ ರಾಜಣ್ಣ ವಿವರಣೆ ನೀಡಿದರು. 1982 ರಲ್ಲಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ವಿಧಾನ ಸಭೆಯ ಸದಸ್ಯ ಕೂಡ ಆಗಿರಲಿಲ್ಲ. ಪಾರ್ಟಿ ಮೀಟಿಂಗ್ ಗೆ ಉಮಾಶಂಕರ್ ದೀಕ್ಷಿತ್ ದೆಹಲಿಯಿಂದ ವೀಕ್ಷಕರಾಗಿ ಬಂದಿರುತ್ತಾರೆ. ಆಗ ಸಿದ್ದವೀರಪ್ಪ, ಮೈಸೂರಿನ ಚನ್ನವೀರಪ್ಪ ಮತ್ತು ಅಜೀಜ್ ಸೇಟ್, ಹೆಚ್ ಕೆ ಪಾಟೀಲ್ ಅವರ ತಂದೆ ಕೆಹೆಚ್ ಪಾಟೀಲ್ ಮೊದಲಾದವರೆಲ್ಲ ಪ್ರಬಲ ನಾಯಕರು ಮತ್ತು ಸಿಎಂ ಆಕಾಂಕ್ಷಿಗಳಾಗಿದ್ದರು. ಅದರೆ ಶಾಸಕರು ದೇವರಾಜ ಅರಸು ಪರ ಒಲವು ತೋರಿದಾಗ ದೀಕ್ಷಿತ್ ಅವರ ಆಗ ಢಾಕಾದಲ್ಲಿದ್ದ ಪ್ರಧಾನಿ ಇಂದಿರಾಗಾಂಧಿಯವರಿಗೆ ಫೋನಾಯಿಸಿ ವಿಷಯ ತಿಳಿಸುತ್ತಾರೆ. ಇಂದಿರಾಗಾಂಧಿಯವರು ಅರಸು ಅವರ ಹೆಸರಲ್ಲೇ ಘೋಷಣೆ ಮಾಡಿ ಅಂದಾಗ ಅವರು ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂದು ರಾಜಣ್ಣ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಬಿಜೆಪಿಯಂತೆ ಕಾಂಗ್ರೆಸ್ ಪಕ್ಷದಲ್ಲಿ ಅಶಿಸ್ತು, ಬಣ ಬಡಿದಾಟ ಇಲ್ಲ, ಭಿನ್ನಮತವಿದೆ: ಕೆಎನ್ ರಾಜಣ್ಣ, ಸಚಿವ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.