ಪುನೀತ್ಗೆ ಮೊದಲು ಅಪ್ಪು ಅಂತ ಕರೆದಿದ್ದು ಯಾರು? ಈ ಹೆಸರೆಂದರೆ ಹೇಳಲಾಗದಷ್ಟು ಸೆಂಟಿಮೆಂಟ್
Puneeth Rajkumar: ಪುನೀತ್ ರಾಜ್ಕುಮಾರ್ ಅವರಿಗೆ ‘ಅಪ್ಪು ಅಣ್ಣ, ಅಪ್ಪು ಬಾಸ್’ ಎಂದು ಅಭಿಮಾನಿಗಳು ಜೈಕಾರ ಕೂಗುತ್ತಾರೆ. ಅಪ್ಪು ಅಂಕಲ್, ಅಪ್ಪು ಮಾಮ ಎಂದು ಮಕ್ಕಳು ಪ್ರೀತಿಯಿಂದ ಕರೆಯುತ್ತಾರೆ.
ಪುನೀತ್ ರಾಜ್ಕುಮಾರ್ ಬಾಲನಟ ಆಗಿದ್ದಾಗಿನಿಂದಲೂ ಪ್ರೇಕ್ಷಕರ ಮನ ಗೆದ್ದಿದ್ದರು. ಆ ದಿನಗಳಲ್ಲಿ ಅವರನ್ನು ಲೋಹಿತ್ ಎಂದು ಕರೆಯಲಾಗುತ್ತಿತ್ತು. ಮನೆಯಲ್ಲಿ ಪ್ರೀತಿಯಿಂದ ಅಪ್ಪು ಎಂದು ಕರೆಯುತ್ತಿದ್ದರು. ಬಳಿಕ ಪುನೀತ್ ರಾಜ್ಕುಮಾರ್ ಎಂಬ ಹೆಸರಿನಿಂದ ದೇಶಾದ್ಯಂತ ಖ್ಯಾತಿ ಗಳಿಸಿದರು. ಅವರನ್ನು ಅಪ್ಪು ಎಂದು ಕರೆಯುವುದರಲ್ಲಿ ಏನೋ ಒಂದು ರೀತಿಯ ಸೆಂಟಿಮೆಂಟ್ ಇದೆ. ಅಪ್ಪು ಅಣ್ಣ, ಅಪ್ಪು ಬಾಸ್ ಎಂದು ಅಭಿಮಾನಿಗಳು ಜೈಕಾರ ಕೂಗುತ್ತಾರೆ. ಅಪ್ಪು ಅಂಕಲ್, ಅಪ್ಪು ಮಾಮ ಎಂದು ಮಕ್ಕಳು ಪ್ರೀತಿಯಿಂದ ಕರೆಯುತ್ತಾರೆ.
ಮೊದಲ ಬಾರಿಗೆ ಪುನೀತ್ ರಾಜ್ಕುಮಾರ್ ಅವರನ್ನು ಅಪ್ಪು ಎಂದು ಕರೆದಿದ್ದು ಅವರ ಅಜ್ಜಿ. ರಾಜ್ಕುಮಾರ್ ಅವರ ತಾಯಿ ಲಕ್ಷ್ಮಮ್ಮ ಅವರಿಗೆ ಪುನೀತ್ ಎಂದರೆ ಎಲ್ಲಿಲ್ಲದ ಪ್ರೀತಿ. ಹಾಗಾಗಿ ಅವರು ಮೊಮ್ಮಗನನ್ನು ಅಪ್ಪು ಅಂತ ಕರೆಯುತ್ತಿದ್ದರು. ಮನೆಮಂದಿಗೆಲ್ಲ ಆ ಪ್ರೀತಿಯ ಹೆಸರು ಅಚ್ಚುಮೆಚ್ಚಾಗಿತ್ತು. ಪುನೀತ್ ಎಷ್ಟೇ ಎತ್ತರಕ್ಕೆ ಬೆಳೆದುನಿಂತರೂ ಆ ಪೆಟ್ ನೇಮ್ ಹೋಗಲೇ ಇಲ್ಲ. ಅವರು ಹೀರೋ ಆಗಿ ನಟಿಸಿದ ಮೊದಲ ಸಿನಿಮಾ ಹೆಸರು ಕೂಡ ‘ಅಪ್ಪು’. ಆದರೆ ಇಂದು ಆ ಹೆಸರಿನಿಂದ ಕರೆಸಿಕೊಳ್ಳಲು ಅವರೇ ನಮ್ಮೊಂದಿಗಿಲ್ಲ.
ಇದನ್ನೂ ಓದಿ:
ವಿದೇಶಿ ನ್ಯೂಸ್ ಚಾನೆಲ್ಗಳಲ್ಲಿ ಪುನೀತ್ ನಿಧನದ ಸುದ್ದಿ; ಸೌತ್ ಕೊರಿಯಾದಲ್ಲೂ ಅಭಿಮಾನದ ಹೊಳೆ
Puneeth Rajkumar Funeral: ಅಪ್ಪನ ಸಮಾಧಿಗೆ ಪುನೀತ್ ಪುತ್ರಿಯರಿಂದ ಪೂಜೆ; ಕಂಠೀರವ ಸ್ಟುಡಿಯೋದಲ್ಲಿ ಕಣ್ಣೀರ ವಿದಾಯ
Published on: Oct 31, 2021 04:00 PM
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್ಲೈನ್ ಫಿಕ್ಸ್

