ವಿಭೀಷಣ ಶ್ರೀರಂಗದಲ್ಲಿ ರಂಗನಾಥ ಸ್ವಾಮಿಯ ಪ್ರತಿಷ್ಠಾಪನೆ ಮಾಡಿದರೆ, ಸಪ್ತಋಷಿಗಳು ಚಿಕ್ಕಬಳ್ಳಾಪುರದ ರಂಗಸ್ಥಳದಲ್ಲಿ ಮಾಡಿದರು!

ರಂಗನಾಥ ಸ್ವಾಮಿಯ ಪಾದದ ಬಳಿ ಒಂದು ಚಿಕ್ಕ ಕಿಂಡಿಯಿದ್ದು ಮಕರ ಸಂಕ್ರಮಣ ಹಬ್ಬದಂದು ಸೂರ್ಯನ ಕಿರಣವು ಸ್ವಾಮಿಯ ಪಾದದ ಮೇಲೆ ಹಾದು ಹೋಗುತ್ತದೆ.

ನಮ್ಮ ಸುತ್ತಮುತ್ತಲಿನ ಅನೇಕ ಭಾಗಗಳಲ್ಲಿರುವ ದೇವಸ್ಥಾನಗಳ ಬಗ್ಗೆ ನಮಗೆ ಗೊತ್ತೇ ಇರೋದಿಲ್ಲ. ಯಾರಿಂದಾದರೂ ಕೇಳಿದ ಬಳಿಕ ಇಲ್ಲವೇ ವಿದ್ಯನ್ಮಾನ ಮಾಧ್ಯಮಗಳಲ್ಲಿ ನೋಡಿದ ನಂತರ ಅವುಗಳ ಬಗ್ಗೆ ನಮಗೆ ಗೊತ್ತಾಗುತ್ತದೆ. ನಮ್ಮ ನಾಡಿನಲ್ಲಿರುವ ಗುಡಿಗಳಿಗೆಲ್ಲ ಪೌರಾಣಿಕ ಹಿನ್ನೆಲೆ ಇರೋದು ಸಹಜವೇ. ಓಕೆ ಇದನ್ನ ಯಾಕೆ ಹೇಳಬೇಕಾಗಿದೆಯೆಂದರೆ, ಚಿಕ್ಕಬಳ್ಳಾಪುರ ತಾಲ್ಲೂಕಿನ ರಂಗಸ್ಥಳದಲ್ಲಿ ಶ್ರೀ ರಂಗನಾಥ ಸ್ವಾಮಿ ದೇವಾಲಯವಿದ್ದು ಇದಕ್ಕೂ ಪೌರಾಣಿಕ ಹಿನ್ನೆಲೆಯಿದೆ. ಸಾಲಿಗ್ರಾಮ ಶಿಲೆಯಲ್ಲಿ ಕೆತ್ತಲಾಗಿರುವ ರಂಗನಾಥನ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಸಪ್ತ ಋಷಿಗಳು ರಂಗನಾಥನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ ಎಂದು ಹೇಳಲಾಗುತ್ತದೆ.

ರಾಮಾಯಣದ ಪ್ರಕಾರ, ರಾಮನ ಪಟ್ಟಾಭೀಷೇಕ ಆಗುತ್ತಿದ್ದ ಸಮಯದಲ್ಲಿ ವಿಭೀಷಣ ಈಗ ತಮಿಳುನಾಡಿನಲ್ಲಿರುವ ಶ್ರೀರಂಗದಲ್ಲಿ ರಂಗನಾಥ ಸ್ವಾಮಿಯನ್ನು ಪ್ರತಿಷ್ಠಾಪಿಸಿದನಂತೆ. ಅದೇ ಸಂದರ್ಭದ ನಾಮಕಾರ್ಥವಾಗಿ ಸಪ್ತಋಷಿಗಳು ಚಿಕ್ಕಬಳ್ಳಾಪುರನಲ್ಲಿ ರಂಗನಾಥ ಸ್ವಾಮಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದರಂತೆ. ಗರ್ಭಗುಡಿಯಲ್ಲಿ ಬಿದಿರು ಬುಟ್ಟಿಯ ಆಕಾರದಲ್ಲಿ ರಂಗನಾಥ ಸ್ವಾಮಿ ವೈಕುಂಠದಲ್ಲಿ ಪವಡಿಸಿರುವ ಹಾಗೆ ವಿಗ್ರಹವನ್ನು ಕೆತ್ತಲಾಗಿದೆ.

ಈ ದೇವಸ್ಥಾನದ ಮತ್ತೊಂದು ವಿಶೇಷವೇನು ಗೊತ್ತಾ? ರಂಗನಾಥ ಸ್ವಾಮಿಯ ಪಾದದ ಬಳಿ ಒಂದು ಚಿಕ್ಕ ಕಿಂಡಿಯಿದ್ದು ಮಕರ ಸಂಕ್ರಮಣ ಹಬ್ಬದಂದು ಸೂರ್ಯನ ಕಿರಣವು ಸ್ವಾಮಿಯ ಪಾದದ ಮೇಲೆ ಹಾದು ಹೋಗುತ್ತದೆ.

ರಂಗನಾಥ ಸ್ವಾಮಿಯ ದೇವಾಲಯವನ್ನು ಹೊಯ್ಸಳರ ಕಾಲದಲ್ಲಿ ಕಟ್ಟಲಾಗಿದೆಯಾದರೂ ಅದರ ಜೀರ್ಣೋದ್ದಾರ ಕಾರ್ಯ ಮತ್ತು ಗೋಪುರದ ನಿರ್ಮಾಣವನ್ನು ವಿಜಯನಗರದ ಅರಸರು ಮಾಡಿದ್ದಾರೆ. ಗೋಪುರ ನಿರ್ಮಾಣಗೊಂಡಿರುವ ಶೈಲಿ ನೋಡಿದರೆ ಈ ಅಂಶ ವೇದ್ಯವಾಗುತ್ತದೆ. ಬಹಳಷ್ಟು ದೇವಸ್ಥಾನಗಳ ಜಾತ್ರೆಯಾಗುವಂತೆ ರಂಗಸ್ಥಳದ ರಂಗನಾಥ ಸ್ವಾಮಿ ದೇವಸ್ಥಾನದ ಜಾತ್ರೆಯೂ ವರ್ಷಕ್ಕೊಮ್ಮೆ ಅಗುತ್ತದೆ.

ಇದನ್ನೂ ಓದಿ:  Viral Video: ಒಂದೇ ಕಾಲಿನಲ್ಲಿ ಸೈಕಲ್ ತುಳಿಯುತ್ತಾ ಸಾಗಿದ ವ್ಯಕ್ತಿ; ಹೃದಯಸ್ಪರ್ಶಿ ವಿಡಿಯೋ ನೋಡಿ ಸೆಲ್ಯೂಟ್ ಎಂದ ನೆಟ್ಟಿಗರು

Click on your DTH Provider to Add TV9 Kannada