KPSC ನೇಮಕಾತಿ ಹಗರಣದಲ್ಲಿ ತೇಲಿಬಂದ ದುಗ್ಗಪ್ಪ ಯಾರು? ಸಾಹುಕಾರ್ ಪಿಎ ಜತೆಗಿನ ಗುಟ್ಟು ರಟ್ಟು
ಮುಖ್ಯಾಂಶಗಳು
- KPSCಯಿಂದ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಹಗರಣ
- ಶಿವಶಂಕರಪ್ಪ ಸಾಹುಕಾರ್ ಪಿಎ ಜೊತೆ ದುಗ್ಗಪ್ಪ ಚಾಟಿಂಗ್
- ಕಾಂಗ್ರೆಸ್ ಅವಧಿಯಲ್ಲಿ ಕೆಪಿಎಸ್ಸಿ ಸದಸ್ಯರಾಗಿದ್ದ ದುಗ್ಗಪ್ಪ
ಕೆಪಿಎಸ್ಸಿಯಿಂದ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಹಗರಣ ಪ್ರಕರಣದಲ್ಲಿ ಮತ್ತೊಂದು ಹೊಸ ಹೆಸರು ಸೇರ್ಪಡೆ ಆಗಿದೆ. ದುಗ್ಗಪ್ಪ ಎಂಬ ಹೆಸರು ಸೇರ್ಪಡೆಯಾಗಿದ್ದು, ಶಿವಶಂಕರಪ್ಪ ಸಾಹುಕಾರ್ ಪಿಎ ಜೊತೆ ದುಗ್ಗಪ್ಪ ಚಾಟಿಂಗ್ ಮಾಡಿರುವುದು, ಹಲವು ಅಭ್ಯರ್ಥಿಗಳ ನೋಂದಣಿ ಸಂಖ್ಯೆಗಳು, ಹಾಲ್ ಟಿಕೆಟ್ ಫೋಟೋಗಳು ಸೇರಿದಂತೆ ಪ್ರಮುಖ ವಿವರಗಳು ಪತ್ತೆಯಾಗಿವೆ.
ದಾವಣಗೆರೆ, ಅಕ್ಟೋಬರ್ 09: ಕೆಪಿಎಸ್ಸಿಯಿಂದ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಹಗರಣ ಪ್ರಕರಣದಲ್ಲಿ ಮತ್ತೊಂದು ಹೊಸ ಹೆಸರು ಸೇರ್ಪಡೆ ಆಗಿದೆ. ದುಗ್ಗಪ್ಪ ಎಂಬ ಹೆಸರು ಸೇರ್ಪಡೆಯಾಗಿದ್ದು, ಶಿವಶಂಕರಪ್ಪ ಸಾಹುಕಾರ್ ಪಿಎ ಜೊತೆ ದುಗ್ಗಪ್ಪ ಚಾಟಿಂಗ್ ಮಾಡಿರುವುದು, ಹಲವು ಅಭ್ಯರ್ಥಿಗಳ ನೋಂದಣಿ ಸಂಖ್ಯೆಗಳು, ಹಾಲ್ ಟಿಕೆಟ್ ಫೋಟೋಗಳು ಸೇರಿದಂತೆ ಪ್ರಮುಖ ವಿವರಗಳು ಪತ್ತೆಯಾಗಿವೆ. ಹಾಗಾದರೆ ಈ ದುಗ್ಗಪ್ಪ ಯಾರು ಅಂತಾ ನೋಡುವುದಾದರೆ, ದಾವಣಗೆರೆ ಮೂಲದವರಾದ ದುಗ್ಗಪ್ಪ, ಸಬ್ ಇನ್ಸ್ಪೆಕ್ಟರ್, ಟ್ರಾಫಿಕ್ ಸರ್ಕಲ್ ಇನ್ಸ್ಪೆಕ್ಟಕ್ ಮತ್ತು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಡಿವೈಎಸ್ಪಿ ಆಗಿ ಸೇವೆ ಸಲ್ಲಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಕೆಪಿಎಸ್ಸಿ ಸದಸ್ಯರಾಗಿದ್ದ ದುಗ್ಗಪ್ಪ ಹೆಚ್ಆಂಜನೇಯ ಕೃಪಾಕಟಾಕ್ಷದಿಂದ ಕೆಪಿಎಸ್ಸಿ ಸದಸ್ಯರಾಗಿದ್ದರು. ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

