ಇಷ್ಟು ಫೇಮ್ ಸಿಕ್ಕರೂ ಸಿನಿಮಾಗಳಲ್ಲಿ ಏಕೆ ನಟಿಸಲ್ಲ? ಕಾರಣ ತಿಳಿಸಿದ ಹನುಮಂತ
ಬಿಗ್ ಬಾಸ್ ಮೂಲಕ ಫೇಮಸ್ ಆದ ಹನುಮಂತ ಅವರು ಈಗ ಊರಲ್ಲಿ ಸೆಟಲ್ ಆಗಿದ್ದಾರೆ. ಏನಾದರೂ ಕೆಲಸ ಇದ್ದರೆ ಮಾತ್ರ ಬೆಂಗಳೂರಿಗೆ ಬರುತ್ತಾರೆ. ಅವರಿಗೆ ಇಷ್ಟು ಫೇಮ್ ಸಿಕ್ಕ ಹೊರತಾಗಿಯೂ ಸಿನಿಮಾ ಮಾಡುವ ಆಲೋಚನೆ ಇಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ನಮ್ಮ ಸಿನಿಮಾಗಳನ್ನು ಜನರು ನೋಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಸಾಕಷ್ಟು ಫೇಮ್ ಸಿಕ್ಕ ಹೊರತಾಗಿಯೂ ಹನುಮಂತ ಅವರು ಸಿನಿಮಾ ಮಾಡುತ್ತಿಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ಕಡ್ಡಿ ಮುರಿದಂತೆ ಹೇಳಿದ್ದಾರೆ. ‘ದೊಡ್ಡ ದೊಡ್ಡ ಹೀರೋಗಳ ಸಿನಿಮಾಗಳೇ ಓಡುತ್ತಿಲ್ಲ. ಹೀಗಿರುವಾಗ ನಮ್ಮ ಸಿನಿಮಾಗಳನ್ನು ಯಾರು ನೋಡುತ್ತಾರೆ? ಚೆನ್ನಾಗಿರುವ ಆಫರ್ಗಳೇ ಬಂದಿದ್ದವು. ಆದರೆ, ನಾನು ಒಪ್ಪಿಕೊಂಡಿಲ್ಲ. ನನ್ನ ಬದಲು ಇನ್ಯಾರೋ ಮಾಡ್ತಾರೆ. ಅವರಿಗೂ ಚಾನ್ಸ್ ಸಿಕ್ಕಂತೆ ಆಗುತ್ತದೆ. ನಾನು ಊರಲ್ಲಿ ಇದ್ದೆ. ಮನೆ ಕಟ್ಟಿಸುತ್ತಾ ಇದ್ದೇನೆ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
