ಕ್ಯಾಮೆರಾ ಕೆಲಸ ನೋಡಿಕೋ ಅಂತ ಪಾರ್ವತಮ್ಮ ಹೇಳಿದ್ದಕ್ಕೆ ದರ್ಶನ್ಗೆ ಬೇಸರ
‘ವಜ್ರೇಶ್ವರಿ ಕಂಬೈನ್ಸ್’ ನಿರ್ಮಾಣದ ಸಿನಿಮಾದಲ್ಲಿ ದರ್ಶನ್ ಅವರು ಕ್ಯಾಮೆರಾ ಅಸಿಸ್ಟೆಂಟ್ ಆಗಿದ್ದರು. ಆದ್ದರಿಂದ ದರ್ಶನ್ಗೆ ಪಾರ್ವತಮ್ಮ ರಾಜ್ಕುಮಾರ್ ಅವರು ಒಂದು ಹೊಸ ಜವಾಬ್ದಾರಿ ನೀಡಲು ನಿರ್ಧರಿಸಿದ್ದರು. ಅದು ದರ್ಶನ್ಗೆ ಇಷ್ಟ ಆಗಲಿಲ್ಲ. ಆ ಘಟನೆಯ ಬಗ್ಗೆ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಅವರು ‘ಟಿವಿ9 ಕನ್ನಡ’ದ ಜೊತೆ ಮಾತನಾಡಿದ್ದಾರೆ.
ನಟ ದರ್ಶನ್ (Darshan) ಅವರು ಆರಂಭದಲ್ಲಿ ಕ್ಯಾಮೆರಾ ಸಹಾಯಕನಾಗಿ ಚಿತ್ರರಂಗದಲ್ಲಿ ಕೆಲಸ ಶುರು ಮಾಡಿದರು. ನಂತರ ಹೀರೋ ಆದರು. ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆಯ ಸಿನಿಮಾಗೆ ದರ್ಶನ್ ಕ್ಯಾಮೆರಾ ಅಸಿಸ್ಟೆಂಟ್ ಆಗಿದ್ದಾಗ ಅವರಿಗೆ ಹೊಸ ಜವಾಬ್ದಾರಿ ನೀಡಲು ಪಾರ್ವತಮ್ಮ ರಾಜ್ಕುಮಾರ್ (Parvathamma Rajkumar) ನಿರ್ಧರಿಸಿದ್ದರು. ಆದರೆ ಅದನ್ನು ದರ್ಶನ್ ಒಪ್ಪಲಿಲ್ಲ. ಅಲ್ಲದೇ ಪಾರ್ವತಮ್ಮ ಹೇಳಿದ್ದನ್ನು ಅವರು ಅವರು ಬೇರೆ ರೀತಿಯಲ್ಲಿ ಅರ್ಥೈಸಿಕೊಂಡರು. ಆ ಬಗ್ಗೆ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಮಾತನಾಡಿದ್ದಾರೆ. ‘ದರ್ಶನ್ಗೆ ಆರಂಭದ ದಿನಗಳಲ್ಲಿ ಈ ವಿಚಾರ ಹರ್ಟ್ ಆಗಿತ್ತು. ರಕ್ಷಿತಾ ಅವರ ತಂದೆ ಗೌರಿಶಂಕರ್ ಜೊತೆ ದರ್ಶನ್ ಕ್ಯಾಮೆರಾ ಅಸಿಸ್ಟೆಂಟ್ ಆಗಿದ್ದರು. ಪಾರ್ವತಮ್ಮ ರಾಜ್ಕುಮಾರ್ ಒಂದು ಹೊಸ ಕ್ಯಾಮೆರಾ ತರಿಸಿದ್ದರು. ನೀನು ಅದನ್ನು ನೋಡಿಕೋ ಎಂದು ದರ್ಶನ್ಗೆ ಅವರು ಹೇಳಿದ್ದರು. ಅದು ದರ್ಶನ್ಗೆ ಸಮಸ್ಯೆ ಆಯಿತು. ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಪ್ರಮೋಟ್ ಮಾಡುವ ಸಲುವಾಗಿ ನನ್ನನ್ನು ಟಿಕ್ನಿಕಲ್ ವಿಭಾಗಕ್ಕೆ ಕಳಿಸುತ್ತಿದ್ದಾರೆ ಅಂತ ದರ್ಶನ್ಗೆ ಬೇಸರವಾಯಿತು. ನನ್ನ ವಿರುದ್ಧ ಯಾರನ್ನೋ ಎತ್ತಿಕಟ್ಟುತ್ತಿದ್ದಾರೆ ಎನ್ನುವ ಭಾವನೆ ದರ್ಶನ್ಗೆ ಬಂದಿದ್ದೇ ಅಲ್ಲಿಂದ’ ಎಂದು ಗಣೇಶ್ ಕಾಸರಗೋಡು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.