ಪಿಎಸ್ ಐ ನೇಮಕಾತಿ ಹಗರಣ: ಸುಳ್ಳು ಹೇಳಿ ಸದನದ ದಾರಿ ತಪ್ಪಿಸಿದ ಜ್ಞಾನೇಂದ್ರರನ್ನು ಸಿ ಎಮ್ ಇನ್ನೂ ಯಾಕೆ ವಜಾ ಮಾಡಿಲ್ಲ? ಸಿದ್ದರಾಮಯ್ಯ

ಸರ್ಕಾರದ ವಿರುದ್ಧ ಬೆಂಕಿಯುಗುಳಿದ ಸಿದ್ದರಾಮಯ್ಯ, ಹಗರಣದಲ್ಲಿ ಯಾವುದೇ ಹಿರಿಯ ಆಧಿಕಾರಿ ಭಾಗಿಯಾಗಿಲ್ಲ ಎಂದು ಸದನಕ್ಕೆ ಸುಳ್ಳು ಹೇಳಿದ ಗೃಹಸಚಿವ ಆರಗ ಜ್ಞಾನೇಂದ್ರ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಇನ್ನೂ ಯಾಕೆ ಸಂಪುಟದಿಂದ ವಜಾ ಮಾಡಿಲ್ಲ ಎಂದು ಗುಡುಗಿದರು.

TV9kannada Web Team

| Edited By: Arun Belly

Jul 06, 2022 | 2:12 PM

Bengaluru: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಪತ್ರಕರ್ತರ ಮೇಲೆ ರೇಗುವುದು ಹೊಸದೇನಲ್ಲ. ಬುಧವಾರ ಬೆಂಗಳೂರಲ್ಲಿ ಅಂಥದೊಂದು ಪ್ರಸಂಗ ನಡೆಯಿತು. ಪಿಎಸ್ಐ ಅಕ್ರಮ ನೇಮಕಾತಿ (PSI Recruitment Scam) ಪ್ರಕರಣದಲ್ಲಿ ಹಿರಿಯ ಪೊಲೀಸ್ ಆಧಿಕಾರಿಯೊಬ್ಬರನ್ನು ಸಿಐಡಿ ವಶಕ್ಕೆ ಪಡೆದಿರುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಕೇಳಿದಾಗ ಸರ್ಕಾರದ ವಿರುದ್ಧ ಬೆಂಕಿಯುಗುಳಿದ ಸಿದ್ದರಾಮಯ್ಯ, ಹಗರಣದಲ್ಲಿ ಯಾವುದೇ ಹಿರಿಯ ಆಧಿಕಾರಿ ಭಾಗಿಯಾಗಿಲ್ಲ ಎಂದು ಸದನಕ್ಕೆ ಸುಳ್ಳು ಹೇಳಿದ ಗೃಹಸಚಿವ ಆರಗ ಜ್ಞಾನೇಂದ್ರ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಇನ್ನೂ ಯಾಕೆ ಸಂಪುಟದಿಂದ ವಜಾ ಮಾಡಿಲ್ಲ ಎಂದು ಗುಡುಗಿದರು.

ಇದನ್ನೂ ಓದಿ:  Viral Video: ಬ್ಯಾಡ್ಮಿಂಟನ್ ಆಡಿ ಖುಷಿಪಟ್ಟ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್

Follow us on

Click on your DTH Provider to Add TV9 Kannada