Marriage: ಮದುವೆ ಯಾಕೆ ಬೇಕು? ಬಾಳ ಸಂಗಾತಿಯ ಆಯ್ಕೆ ಹೇಗಿರಬೇಕು? ಇಲ್ಲಿದೆ ವಿವರಣೆ
ಪ್ರಾತಿನಿಧಿಕ ಚಿತ್ರ

Marriage: ಮದುವೆ ಯಾಕೆ ಬೇಕು? ಬಾಳ ಸಂಗಾತಿಯ ಆಯ್ಕೆ ಹೇಗಿರಬೇಕು? ಇಲ್ಲಿದೆ ವಿವರಣೆ

| Updated By: ganapathi bhat

Updated on: Feb 20, 2022 | 8:17 AM

ಮದುವೆ ಅನ್ನೋದು ಜೀವನದ ಒಂದು ಮುಖ್ಯವಾದ ಘಟ್ಟ. ಯಾಕೆ ಮದುವೆ ಬೇಕು? ನಿಜವಾಗಿಯೂ ಮದುವೆ ಬೇಕಾ? ನಾನು ಖುಷಿಯಾಗೇ ಇದ್ದೀನಿ ಅನ್ನೋದು ಈಗಿನ ಯುವಜನತೆ ಹೆಚ್ಚಾಗಿ ಕೇಳೋ ಪ್ರಶ್ನೆ. ಎಲ್ಲಕ್ಕೂ ಉತ್ತರ ಇಲ್ಲಿದೆ.

ಮದುವೆ ಅನ್ನೋದು ಜೀವನದ ಒಂದು ಮುಖ್ಯವಾದ ಘಟ್ಟ. ಯಾಕೆ ಮದುವೆ ಬೇಕು? ನಿಜವಾಗಿಯೂ ಮದುವೆ ಬೇಕಾ? ನಾನು ಖುಷಿಯಾಗೇ ಇದ್ದೀನಿ ಅನ್ನೋದು ಈಗಿನ ಯುವಜನತೆ ಹೆಚ್ಚಾಗಿ ಕೇಳೋ ಪ್ರಶ್ನೆ. ಹಾಗಾದರೆ, ಮದುವೆ ಯಾಕೆ ಬೇಕು ಎಂದು ಡಾ. ಸೌಜನ್ಯ ವಸಿಷ್ಠ ಅವರು ತಿಳಿಸಿಕೊಟ್ಟಿದ್ದಾರೆ. ಜೀವನದ ಮುಕ್ಕಾಲು ಭಾಗವನ್ನು ಬಾಳಸಂಗಾತಿಯೊಂದಿಗೆ ನಾವು ಕಳೆಯುತ್ತೇವೆ. ಹಾಗೇ ಸುಮಾರು ಶೇ. 70 ರಷ್ಟು ಸಮಸ್ಯೆಗಳು ಮದುವೆ ಆದಮೇಲೆ ಮಾಯವಾಗುತ್ತೆ ಎಂದೂ ಹೇಳ್ತಾರೆ. ಹೀಗಿದ್ದರೂ, ಕೆಲವು ಬಾರಿ ಮದುವೆ ಆದಮೇಲೆ ಗಂಡ, ಹೆಂಡತಿ ಬದಲಾಗಿಬಿಡ್ತಾರೆ. ಇದೆಲ್ಲಾ ಕಾರಣಕ್ಕೆ, ಮದುವೆ ಎಂಬ ನಿರ್ಧಾರಕ್ಕೆ ಬರಬೇಕಾದ್ರೆ ಕೆಲವು ಅಂಶಗಳನ್ನು ಪರಿಗಣಿಸಬೇಕು.

ಮದುವೆ ಆಗಬೇಕಾದ ಜೋಡಿಯಲ್ಲಿ ಗಮನಿಸಬೇಕಾದ ಅಂಶಗಳೇನು? ಎಂಬ ಪ್ರಶ್ನೆ ಬಂದಾಗ, ಒಳ್ಳೆ ಕೆಲಸ, ಒಳ್ಳೆ ಸಂಬಳ, ಆಸ್ತಿ ಇದೆಯಾ ಇಷ್ಟೇ ನೋಡೋದಲ್ಲ. ಬದಲಾಗಿ, ಮನುಷ್ಯನಿಗೆ ಗುರಿ ಇರಬೇಕು. ಆರೋಗ್ಯದ ಬಗ್ಗೆ ಕಾಳಜಿ ಇರಬೇಕು. ಹವ್ಯಾಸ ಇರಬೇಕು. ಬಾಂಧವ್ಯ ಹೇಗಿದೆ ಕುಟುಂಬದಲ್ಲಿ. ಭಾವನಾತ್ಮಕ ಸಂಬಂಧ ಬೇಕು. ಸಮಾಜದ ಜೊತೆಗೆ ಹೇಗಿರ್ತಾರೆ ಎಂಬುದನ್ನೆಲ್ಲಾ ಗಮನಿಸಬೇಕು. ಈ ಬಗ್ಗೆ, ‘ಬಾಳಸಂಗಾತಿ ಆಯ್ಕೆ ಹೇಗಿರಬೇಕು?’ ಎಂಬ ಪ್ರಶ್ನೆಗೆ ಡಾ. ಸೌಜನ್ಯ ವಸಿಷ್ಠ ವಿವರಣೆ ನೀಡಿದ್ದಾರೆ. ಸಂಪೂರ್ಣ ವಿಡಿಯೋ ನೋಡಿ.

ಇದನ್ನೂ ಓದಿ: ಎರಡನೇ ಮದುವೆ ಮಾಡಿಕೊಂಡ ಫರ್ಹಾನ್​ ಅಖ್ತರ್​; ಪ್ರೇಯಸಿ ಶಿಬಾನಿ​ ಜತೆ ಸಿಂಪಲ್​ ವಿವಾಹ

ಇದನ್ನೂ ಓದಿ: Carrot Seed Oil: ಕ್ಯಾರೆಟ್ ಬೀಜದ ಎಣ್ಣೆ ಕೂದಲು ಮತ್ತು ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ

Published on: Feb 20, 2022 08:16 AM