ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾದ್ರೆ ಪರವಾಗಿಲ್ವಾ? ಹಾಲಿನ ಬೆಲೆ ಹೆಚ್ಚಿಸಿದ್ರೆ ವಿರೋಧವೇಕೆ; ಕೃಷ್ಣಬೈರೇಗೌಡ ಪ್ರಶ್ನೆ
ನಂದಿನಿ ಹಾಲಿನ ದರ ಲೀಟರ್‌ಗೆ 8 ರೂಪಾಯಿ ಏರಿಕೆಯಾಗಿದೆ. ಇದರಲ್ಲಿ 7 ರೂ. ಹಾಲು ಉತ್ಪಾದಕರಿಗೆ ಮತ್ತು 1 ರೂಪಾಯಿ ಕೆಎಂಎಫ್‌ಗೆ ಸಿಗಲಿದೆ. ಡೀಸೆಲ್, ಪೆಟ್ರೋಲ್, ಪ್ಲಾಸ್ಟಿಕ್ ಪ್ಯಾಕಿಂಗ್ ಮತ್ತು ಸಾರಿಗೆ ವೆಚ್ಚಗಳು ಹೆಚ್ಚಳವಾಗಿರುವ ಕಾರಣ ಒಕ್ಕೂಟಗಳು ದರ ಏರಿಕೆಗೆ ಮನವಿ ಮಾಡಿದ್ದವು. ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಬೆಂಗಳೂರು, ಅಕ್ಟೋಬರ್ 29: ‘ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ಹೆಚ್ಚಾದಾಗ, ನಾವು ಅದಕ್ಕೆ ಹೊಂದಿಕೊಳ್ಳುತ್ತೇವೆ. ಕುಡಿಯುವ ನೀರಿಗೂ ಬಾಟಲಿಗೆ ಹೆಚ್ಚು ಹಣ ನೀಡುತ್ತೇವೆ. ಆದರೆ, ರೈತರು ಕಷ್ಟಪಟ್ಟು ಉತ್ಪಾದಿಸುವ ಹಾಲಿಗೆ ಬೆಲೆ ಹೆಚ್ಚಳ ಮಾಡುವಾಗ ಜನ ವಿರೋಧಿಸುತ್ತಾರೆ’ ಎಂದು ಸಚಿವ ಕೃಷ್ಣಬೈರೇಗೌಡ ಪ್ರಶ್ನಿಸಿದರು. ನಂದಿನ ಹಾಲಿನ ದರ ಹೆಚ್ಚಳ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಡೀಸೆಲ್, ಪೆಟ್ರೋಲ್, ಪ್ಲಾಸ್ಟಿಕ್ ಪ್ಯಾಕಿಂಗ್ ಹಾಗೂ ಸಾರಿಗೆ ವೆಚ್ಚಗಳ ಹೆಚ್ಚಳವನ್ನು ಗಣನೆಗೆ ತೆಗೆದುಕೊಂಡು, ಕೆಎಂಎಫ್‌ಗೆ ಕೇವಲ ಒಂದು ರೂ ಮತ್ತು ರೈತರಿಗೆ 7 ರೂ ಹೆಚ್ಚುವರಿ ಹಣ ನೀಡಲು ನಿರ್ಧರಿಸಲಾಗಿದೆ. ರೈತರು ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಪಡೆಯಬೇಕಾಗಿದೆ. ಕರ್ನಾಟಕ ಸರ್ಕಾರ ರೈತರ ಪರವಾಗಿದ್ದು, ಈ ನಿರ್ಧಾರ ಅವರ ಹಿತದೃಷ್ಟಿಯಿಂದಲೇ ತೆಗೆದುಕೊಳ್ಳಲಾಗಿದೆ’ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
