ಹೆಣ್ಮಕ್ಕಳು ಬಳೆಗಳನ್ನು ಧರಿಸುವುದೇಕೆ? ಬಳೆಗಳ ಧಾರಣೆಯ ಮಹತ್ವವೇನು?

| Updated By: ಆಯೇಷಾ ಬಾನು

Updated on: Feb 22, 2024 | 6:56 AM

ಸುಮಂಗಳೆಯರ ಲಕ್ಷಣಗಳಲ್ಲಿ ಬಳೆ ಹಾಕುವುದು ಕೂಡ ಒಂದು. ಮಹಿಳೆಯರು ಹಾಕುವ ಬಳೆಗಳ ಹಿಂದೆ ಅನೇಕ ಧಾರ್ಮಿಕ ಹಾಗೂ ವೈಜ್ಞಾನಿಕ ಅನುಕೂಲಗಳಿವೆ. ಅದರಲ್ಲೂ ಗಾಜಿನ ಹಸಿರು, ಕೆಂಪು, ಕಪ್ಪುಗಳು ತನ್ನದೇ ಮಹತ್ವವನ್ನು ಹೊಂದಿವೆ. ಈ ವಿಡಿಯೋದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಬಳೆ ಧರಿಸುವ ಮಹತ್ವದ ಬಗ್ಗೆ ವಿವರಿಸಿದ್ದಾರೆ.

ಹಿಂದೂ ಧರ್ಮದಲ್ಲಿ, ಕುಂಕುಮ ಹಚ್ಚುವುದಕ್ಕೂ, ಮೂಗುತ್ತಿ ಹಾಕುವುದಕ್ಕೂ, ಕಿವಿ ಓಲೆ ಹಾಕಿಕೊಳ್ಳುವುದಕ್ಕೂ ಸೇರಿದಂತೆ ಪ್ರತಿಯೊಂದಕ್ಕೂ ಅದರದೇ ಆದ ಮಹತ್ವವಿದೆ. ಮಹಿಳೆಯ ಸೌಂದರ್ಯ ಹಾಗೂ ಘನತೆಯನ್ನು ಹೆಚ್ಚಿಸುವ ಬಳೆಯು ಸಾಕಷ್ಟು ಸಾಂಪ್ರದಾಯಿಕ ಹಾಗೂ ವೈಜ್ಞಾನಿಕ ಹಿನ್ನೆಲೆಯನ್ನು ಒಳಗೊಂಡಿದೆ. ಮಹಿಳೆಯರು ಏಕೆ ಬಳೆಯನ್ನು ತೊಡಬೇಕು? ಅದರ ಹಿನ್ನೆಲೆ ಹಾಗೂ ಮಹತ್ವದ ಬಗ್ಗೆ ಸಾಕಷ್ಟು ವಿಚಾರಗಳಿವೆ. ಮಹಿಳೆಯರು ಪುರುಷರಿಗಿಂತ ದೈಹಿಕವಾಗಿ ದುರ್ಬಲರಾಗಿರುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಪುರುಷರೊಂದಿಗೆ ಹೋಲಿಸಿದರೆ ಮಹಿಳೆಯ ಮೂಳೆಗಳು ದುರ್ಬಲವಾಗಿರುತ್ತವೆ ಮತ್ತು ನಾಜೂಕಾಗಿರುತ್ತವೆ. ಬಳೆಗಳನ್ನು ಧರಿಸುವುದರಿಂದ ಮೂಳೆಗಳಿಗೆ ಶಕ್ತಿಯು ಒದಗುತ್ತದೆ ಮತ್ತು ಅದು ಮಹಿಳೆಯರ ಉತ್ತಮ ಆರೋಗ್ಯವನ್ನು ಕಾಪಾಡುತ್ತದೆ ಎಂದು ನಂಬಲಾಗಿದೆ. ಮತ್ತಷ್ಟು ಬಳೆಯ ಮಹತ್ವವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಈ ವಿಡಿಯೋದಲ್ಲಿ ನೀಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ