ಭ್ರಷ್ಟ ಸರ್ಕಾರಿ ನೌಕರರ ವಿರುದ್ಧ ರಾಜ್ಯ ಸರ್ಕಾರಗಳು ಕಠಿಣ ಕ್ರಮ ಯಾಕೆ ತೆಗೆದುಕೊಳ್ಳಲ್ಲ?
ಭ್ರಷ್ಟ ಅಧಿಕಾರಿಗಳ ವಿರುದ್ಧ ಸರ್ಕಾರ ತಳೆಯುವ ಮೃದು ಧೋರಣೆ ಕನ್ನಡಿಗರಿಗೆ ಅರ್ಥವಾಗುತ್ತಿಲ್ಲ. ಅವರು ಭ್ರಷ್ಟರೆಂದು ಗೊತ್ತಾದ ಬಳಿಕವೂ ಹೇಗೆ ಮತ್ತು ಯಾಕೆ ಸೇವೆಯಲ್ಲಿ ಮುಂದುವರಿಸಲಾಗುತ್ತದೆ? ಲೋಕಾಯುಕ್ತ ದಾಳಿ ನಡೆದ ಕೆಲವೇ ವಾರಗಳ ಬಳಿಕ ಅವರು ತಮ್ಮ ಕಚೇರಿಗಳಲ್ಲಿ ಠಳಾಯಿಸುತ್ತಾರೆ, ಹೆಚ್ಚೆಂದರೆ ಅವರ ವರ್ಗಾವಣೆಯಾಗುತ್ತದೆ!
ಬೆಳಗಾವಿ: ಹಲವಾರು ಭ್ರಷ್ಟ ಅಧಿಕಾರಿಗಳು ತಮ್ಮ ತಮ್ಮ ಮನೆಗಳಲ್ಲೇ ತಣ್ಣಗೆ ಬೆವರುತ್ತಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಗುರುವಾರ ಬೆಳ್ಳಂಬೆಳಗ್ಗೆಯೇ ಐವತ್ತಕ್ಕೂ ಹೆಚ್ಚು ಭ್ರಷ್ಟ ರಾಜ್ಯ ಸರ್ಕಾರಿ ನೌಕರರ ಮನೆಗಳ ಮೇಲೆ ದಾಳಿ ನಡೆಸಿ ಅವರ ಅಕ್ರಮ ಸಂಪಾದನೆಯನ್ನು ಜಪ್ತಿ ಮಾಡುತ್ತಿದ್ದಾರೆ. ನೌಕರರ ಮನೆಯಲ್ಲಿ ಪತ್ತೆಯಾಗುತ್ತಿರುವ ಚಿನ್ನಾಭರಣ, ಆಸ್ತಿಪಾಸ್ತಿಗಳ ಕಾಗದ ಪತ್ರ ಮತ್ತು ಹಣ ಗಮನಿಸುತ್ತಿದ್ದರೆ ಸರ್ಕಾರಿ ನೌಕರರು ಯಾವ ಮಟ್ಟಿನ ಲಂಚಕೋರರು ಅನ್ನೋದು ಗೊತ್ತಾಗುತ್ತದೆ. ನಿಮಗೆ ದೃಶ್ಯಗಳಲ್ಲಿ ಕಾಣುತ್ತಿರೋದು ಜಿಲ್ಲೆಯ ಖಾನಾಪುರದ ಪಂಚಾಯತ್ ರಾಜ್ ಇಲಾಖೆಯಲ್ಲಿ ಅಸಿಸ್ಟಂಟ್ ಎಕ್ಸಿಕ್ಯುಟಿವ್ ಇಂಜಿನೀಯರ್ ಅಗಿ ಕೆಲಸ ಮಾಡುವ ಮಹಾದೇವ ಬನ್ನೂರ ಮನೆ. ಮಹಾದೇವರದ್ದು ಭ್ರಷ್ಟಾಚಾರದ ಇತಿಹಾಸವಿದೆ. ಮಾರ್ಚ್ 26 ರಂದು ಅವರು ಗ್ರಾಮ ಪಂಚಾಯತ್ ಸದಸ್ಯನೊಬ್ಬನ ಬಳಿ ಹಣಕ್ಕಾಗಿ ಬೇಡಿಕೆಯಿಡುವಾಗ ಟ್ರ್ಯಾಪ್ ಆಗಿದ್ದರು. ಈಗ ಲೋಕಾಯುಕ್ತ ದಾಳಿಯಲ್ಲಿ ಅವರ ಮನೆಯಲ್ಲಿ ಆದಾಯಕ್ಕೆ ಮೀರಿದ ಅಸ್ತಿಪಾಸ್ತಿ, ಒಡವೆ ಮತ್ತು ನಗದು ಪತ್ತೆಯಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Lokayukta Raid: ಕರ್ನಾಟಕದಾದ್ಯಂತ ಬೆಳ್ಳಂಬೆಳಗ್ಗೆಯೇ 56 ಕಡೆ ಲೋಕಾಯುಕ್ತ ದಾಳಿ