ಚಿರತೆಗಳ ಜೊತೆ ಕಾದಾಡಿ ಜೀವ ಉಳಿಸಿಕೊಂಡ ಕಾಡುಹಂದಿ: ವಿಡಿಯೋ ವೈರಲ್​​

Edited By:

Updated on: Feb 11, 2026 | 12:32 PM

ಚಿರತೆಗಳು ಬೇಟೆಗೆ ಹೊಂಚು ಹಾಕಿ ಕುಳಿತರೆ ಮುಗೀತು. ಅವು ಎಂತಹ ಸಂದರ್ಭದಲ್ಲೂ ಗುರಿ ತಪ್ಪುವ ಸಾಧ್ಯತೆ ಬಹಳ ಕಡಿಮೆ. ಆದ್ರೆ ಹೀಗೆ ಬೇಟೆಗೆ ಕಾದು ಕುಳಿತಿದ್ದ ಚಿರತೆಗಳಿಗೆ ಕಾಡು ಹಂದಿಯೊಂದು ಚಳ್ಳೆಹಣ್ಣು ತಿನ್ನಿಸಿದೆ. ಚಿರತೆಗೇ ಗುದ್ದಿ, ಹಂದಿ ಎಸ್ಕೇಪ್​​ ಆಗಿದ್ದು ಘಟನೆಯ ದೃಶ್ಯ ಸಫಾರಿಗೆ ತೆರಳಿದ್ದ ಪ್ರವಾಸಿಗರ ಮೊಬೈಲ್​​ ಕ್ಯಾಮರಾದಲ್ಲಿ ಸೆರೆಯಾಗಿದೆ.

ಚಿಕ್ಕಮಗಳೂರು, ಫೆಬ್ರವರಿ 11: ಬೇಟೆಗೆ ಹೊಂಚು ಹಾಕಿದ್ದ ಚಿರತೆಗಳಿಗೆ ಚಳ್ಳೆಹಣ್ಣು ತಿನ್ನಿಸಿ ಕಾಡುಹಂದಿ ಎಸ್ಕೇಪ್​​ ಆಗಿರುವ ಪ್ರಸಂಗ ಭದ್ರಾ ಅಭಯಾರಣ್ಯ ವ್ಯಾಪ್ತಿಯ ಲಕ್ಕವಳ್ಳಿ ವಿಭಾಗದಲ್ಲಿ ನಡೆದಿದ್ದು, ಘಟನೆಯ ದೃಶ್ಯ ಸಫಾರಿಗೆ ತೆರಳಿದ್ದ ಪ್ರವಾಸಿಗರ ಮೊಬೈಲ್​​ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾಡು ಹಂದಿ ಬೇಟೆಗೆ ಎರಡು ಚಿರತೆಗಳು ಹೊಂಚುಹಾಕಿ ಕುಳಿತಿದ್ದವು. ಒಂದು ಚಿರತೆ ಮರವೇರಿದ್ದರೆ ಮತ್ತೊಂದು ಕೆಳಭಾಗದಿಂದಲೇ ಅಟ್ಯಾಕ್​​ಗೆ ರೆಡಿ ಆಗಿತ್ತು. ಆದರೆ ಚಿರತೆಗೇ ಗುದ್ದಿ ಕಾಡುಹಂದಿ ಎಸ್ಕೇಪ್​​ ಆಗಿದೆ. ಹಂದಿ ಮತ್ತು ಚಿರತೆ ಕಾದಾಟದ ದೃಶ್ಯವೀಗ ವೈರಲ್​​ ಆಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡಿನ ಮಾವಿನಗುಣಿ ಗ್ರಾಮದಿಂದ ಬೆಂಗಳೂರಿಗೆ ಬಂದು ಪತ್ರಿಕೋದ್ಯಮ ವೃತ್ತಿ ಆರಂಭಿಸಿ, ಹಾಯ್ ಬೆಂಗಳೂರು, ಜನಶ್ರೀ, ಕಸ್ತೂರಿ, ಟೈಮ್ಸ್ ನೌ ನಲ್ಲಿ ಕೆಲಸ ಮಾಡಿದ್ದು. ಸದ್ಯ ಟಿವಿ9 ಕನ್ನಡದಲ್ಲಿ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದು. 8 ವರ್ಷಗಳ ಕಾಲ ರಾಜಕೀಯ, ಕ್ರೈಮ್ ಸೇರಿದಂತೆ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು. ಉತ್ತಮ ಸಮಾಜಕ್ಕಾಗಿ ಟಿವಿ9 ಜೊತೆ ವೃತ್ತಿ ಜೀವನ ಸಾಗಿದೆ.

Read More