ಚಾಮರಾಜನಗರ ತಮಿಳುನಾಡು ಗಡಿ ದಿಂಬಂ ಘಾಟ್​ನಲ್ಲಿ ಕಾಡಾನೆ ಉಪಟಳ: ವಿಡಿಯೋ ವೈರಲ್

Updated By: Ganapathi Sharma

Updated on: Nov 01, 2025 | 11:18 AM

ನಂಗೆ ಕೊಡ್ಬೇಕಾದ ಮಾಮೂಲಿ ಕೊಟ್ಟು ಹೋಗು, ಇಲ್ಲಾಂದ್ರೆ ಬಿಡಲ್ಲ! ಕರ್ನಾಟಕ ತಮಿಳುನಾಡು ಗಡಿ ಭಾಗದ ದಿಂಬಂ ಘಾಟ್​​ನಲ್ಲಿ ಕಾಡಾನೆ ಉಪಟಳ ಮತ್ತೆ ಜೋರಾಗಿದೆ. ತಿಂಗಳ ಹಿಂದಷ್ಟೇ ಈ ಘಾಟ್ ರಸ್ತೆಯಲ್ಲಿ ಲಾರಿಗಳು, ವಾಹನಗಳಿಗೆ ಉಪಟಳ ಕೊಡುತ್ತಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ದಟ್ಟಾರಣ್ಯಕ್ಕೆ ಅಟ್ಟಿದ್ದರು. ಆದರೆ, ಅದೀಗ ಕಬ್ಬು ಹಾಗೂ ಬಾಳೆಗಾಗಿ ಮತ್ತೆ ರಸ್ತೆಗೆ ಬಂದಿದೆ.

ಚಾಮರಾಜನಗರ, ನವೆಂಬರ್ 1: ತಮಿಳುನಾಡಿನ ದಿಂಬಂ ಘಾಟ್​​ನಲ್ಲಿ ಕಾಡಾನೆ ಉಪಟಳ ಮತ್ತೆ ಮುಂದುವರೆದಿದೆ. ಕಬ್ಬು ಹಾಗೂ ಬಾಳೆಗಾಗಿ ಗಜಪಡೆ ಕಾಡಿನಿಂದ ನಾಡಿಗೆ ಮತ್ತೆ ಎಂಟ್ರಿಕೊಟ್ಟಿದೆ. ನಸುಕಿನಲ್ಲಿ ಮತ್ತೆ ಕಾಡಿನಿಂದ ನಾಡಿಗೆ ಬಂದ ಕಾಡಾನೆ ನಡು ರಸ್ತೆಯಲ್ಲೇ ಲಾರಿ ಹಾಗೂ ಗೂಡ್ಸ್ ವಾಹನ ಅಡ್ಡಗಟ್ಟಿದೆ. ಕಳೆದೊಂದು ತಿಂಗಳ ಹಿಂದೆ ಅರಣ್ಯ ಸಿಬ್ಬಂದಿ ಸ್ಪೆಷಲ್ ಡ್ರೈವ್ ಮಾಡಿ ಆನೆಯನ್ನು ಕಾಡಿಗಟ್ಟಿದ್ದರು. ಸತ್ಯಮಂಗಲ ಟೈಗರ್ ರಿಸರ್ವ್ ಫಾರೆಸ್ಟ್ ಸಿಬ್ಬಂದಿ ವಿಶೇಷ ಕಾರ್ಯಾಚರಣೆ ನಡೆಸಿದ್ದರು. ಆದರೆ, ಕಾಡಾನೆ ಮತ್ತೆ ರಸ್ತೆಗೆ ಬಂದಿದ್ದು, ಲಾರಿಗಳನ್ನು ಅಡ್ಡಗಟ್ಟುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Nov 01, 2025 11:18 AM