ಚಾಮರಾಜನಗರ ತಮಿಳುನಾಡು ಗಡಿಭಾಗದಲ್ಲಿ ಕಬ್ಬು ಸಾಗಿಸುತ್ತಿದ್ದ ಟ್ರಕ್ಕನ್ನು ಅಡ್ಡಗಟ್ಟಿ ನಿಲ್ಲಿಸಿ ಕಬ್ಬು ತಿಂದಿದ್ದು ಕಾಡಾನೆ ಮತ್ತದರ ಮರಿ
ರಸ್ತೆಯ ಎರಡೂ ಕಡೆ ವಾಹನಗಳ ಸಂಚಾರವನ್ನು ಆನೆಗಳು ಸ್ಥಗಿತಗೊಳಿಸಿವೆ. ಜನ ದೂರದಿಂದಲೇ ಅನೆಗಳ ಜೊತೆ ಸೆಲ್ಫೀ ತೆಗದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಚಾಮರಾಜನಗರ ಮತ್ತು ತಮಿಳುನಾಡು (Tamil Nadu) ಗಡಿಭಾಗದ ಆಸನೂರು ಏರಿಯಾವನ್ನು ‘ಸುಂಕದ ಕಟ್ಟೆ’ (Sunkada Katte) ಅಂತ ಕರೆದರೂ ಆದೀತು ಮಾರಾಯ್ರೇ! ಯಾಕೆ ಅಂತ ನೀವು ವಿಡಿಯೋ ನೋಡಿ ಆರ್ಥಮಾಡಿಕೊಳ್ಳಬಹುದು. ಕಬ್ಬಿನ ಲೋಡ್ (sugar cane load ) ಸಾಗಿಸುತ್ತಿರುವ ಟಕ್ಕನ್ನು ತನ್ನ ಮರಿಯೊಂದಿಗೆ ಅಡ್ಡಗಟ್ಟಿರುವ ಕಾಡಾನೆಯೊಂದು ಸುಂಕದ ರೂಪದಲ್ಲಿ ಅದರೊಳಗಿಂದ ಕಬ್ಬನ್ನು ಎಳೆದು ತಾನೂ ತಿನ್ನುತ್ತಿದೆ ಮತ್ತು ತನ್ನ ಮರಿಗೂ ತಿನ್ನಿಸುತ್ತಿದೆ. ರಸ್ತೆಯ ಎರಡೂ ಕಡೆ ವಾಹನಗಳ ಸಂಚಾರವನ್ನು ಆನೆಗಳು ಸ್ಥಗಿತಗೊಳಿಸಿವೆ. ಜನ ದೂರದಿಂದಲೇ ಅನೆಗಳ ಜೊತೆ ಸೆಲ್ಫೀ ತೆಗದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.