ಚಾಮರಾಜನಗರ: ಹಳ್ಳದ ನೀರಿನಲ್ಲಿ ಗಜಪಡೆ ಜಲಕ್ರೀಡೆ, ವಿಡಿಯೋ ವೈರಲ್

Edited By:

Updated on: Apr 03, 2025 | 8:07 AM

ಬಿಸಿಲಿನ ಬೇಗೆಯಿಂದ ರಕ್ಷಣೆ ಪಡೆಯಲು ಹಳ್ಳದ ನೀರಿನಲ್ಲಿ ಗಜಪಡೆ ಮಿಂದೆದ್ದ ವಿಡಿಯೋ ಈಗ ವೈರಲ್ ಆಗುತ್ತಿದೆ. ನಾಲ್ಕು ಕಾಡಾನೆಗಳು ಹಳ್ಳದ ನೀರಿನಲ್ಲಿ ಆಟವಾಡುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದು ಎಲ್ಲಿಯದ್ದು ಎಂಬ ಮಾಹಿತಿ ಹಾಗೂ ವಿಡಿಯೋ ಇಲ್ಲಿದೆ.

ಚಾಮರಾಜನಗರ, ಏಪ್ರಿಲ್ 3: ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ವಡಕ್ಕೆ ಹಳ್ಳ ಮಾರ್ಗದಲ್ಲಿ ರಸ್ತೆ ಬಳಿ ಇರುವ ಹಳ್ಳದ ನೀರಿನಲ್ಲಿ ಕಾಡಾನೆಗಳು ಆಟವಾಡುತ್ತಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ. ಕಾಡಾನೆಗಳು ಹಳ್ಳದ ನೀರಿನಲ್ಲಿ ಬಿಸಿಲಿನ ಬೇಗೆಯಿಂದ ರಕ್ಷಣೆ ಪಡೆಯುತ್ತಿರುವುದು ವಾಹನ ಸವಾರರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋ ಇಲ್ಲಿದೆ.