ಕಾವೇರಿ ವಿವಾದ; ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳಿಗೆ ಹಿಂದಿನಂತೆಯೇ ಸಹಕಾರ ನೀಡುತ್ತೇನೆ: ಹೆಚ್ ಡಿ ದೇವೇಗೌಡ, ಮಾಜಿ ಪ್ರಧಾನಿ

|

Updated on: Sep 22, 2023 | 12:48 PM

ದೆಹಲಿಯ ಖ್ಯಾತ ಹೋಟೆಲೊಂದರಲ್ಲಿ ಆಯೋಜಿಸಲಾಗಿದ್ದ ಸಂಸದರ ಜೊತೆ ಬ್ರೇಕ್ ಫಾಸ್ಟ್ ಮೀಟಿಂಗ್ ನಲ್ಲಿ ಪಾಲ್ಗೊಳ್ಳುವಂತೆಯೂ ಸಿದ್ದರಾಮಯ್ಯ ಪತ್ರ ಕಳಿಸಿದ್ದರು ಎಂದ ಅವರು ಅದೇ ಮಂಡಿ ನೋವಿನ ಕಾರಣದಿಂದಾಗಿ ಬರಲಾಗಲ್ಲ ಎಂದಿದ್ದೆ ಮತ್ತು ಆ ಸಭೆಯಲ್ಲಿ ಪ್ರಜ್ವಲ್ ರೇವಣ್ಣ ಭಾಗವಹಿಸಿದ್ದರು ಎಂದು ಹೇಳಿದರು.

ದೆಹಲಿ: ಕಾವೇರಿ ನದಿ ನೀರು ಹಂಚಿಕೆ ಸಂಬಂಧಿಸಿದಂತೆ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ಕೇಳಿದ ಪ್ರಶ್ನೆಗೆ ಜೆಡಿಎಸ್ ಪಕ್ಷದ ವರಿಷ್ಠ ಹೆಚ್ ಡಿ ದೇವೇಗೌಡ (HD Devegowda) ಅವರು ಸಿದ್ದರಾಮಯ್ಯ ಸರ್ಕಾರ (Siddaramaiah government) ತೆಗೆದುಕೊಳ್ಳುವ ನಿರ್ಧಾರಗಳಿಗೆ ಸಹಕಾರ ನೀಡುವುದಾಗಿ ಹೇಳಿದರು. ದೆಹಲ್ಲಿಯಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಕಾವೇರಿ ವಿವಾದದ (Cauvery water dispute) ಬಗ್ಗೆ ವಿಧಾನ ಸೌಧದಲ್ಲಿ ನಡೆದ ಸರ್ವಪಕ್ಷಗಳ ಸಬೆಯಲ್ಲಿ ಭಾಗವಹಿಸುವಂತೆ ಕೋರಲು ಸಿದ್ದರಾಮಯ್ಯ ಕೋಲಾರದ ಒಬ್ಬ ಎಮ್ ಎಲ್ ಸಿಯನ್ನು ತನ್ನಲ್ಲಿಗೆ ಕಳುಹಿಸಿದ್ದರು ಆದರೆ ಮಂಡಿನೋವಿನ ಕಾರಣ ಬರಲಾಗದು ಅಂತ ಹೇಳಿದ್ದೆ ಎಂದರು. ದೆಹಲಿಯ ಖ್ಯಾತ ಹೋಟೆಲೊಂದರಲ್ಲಿ ಆಯೋಜಿಸಲಾಗಿದ್ದ ಸಂಸದರ ಜೊತೆ ಬ್ರೇಕ್ ಫಾಸ್ಟ್ ಮೀಟಿಂಗ್ ನಲ್ಲಿ ಪಾಲ್ಗೊಳ್ಳುವಂತೆಯೂ ಸಿದ್ದರಾಮಯ್ಯ ಪತ್ರ ಕಳಿಸಿದ್ದರು ಎಂದ ಅವರು ಅದೇ ಮಂಡಿ ನೋವಿನ ಕಾರಣದಿಂದಾಗಿ ಬರಲಾಗಲ್ಲ ಎಂದಿದ್ದೆ ಮತ್ತು ಆ ಸಭೆಯಲ್ಲಿ ಪ್ರಜ್ವಲ್ ರೇವಣ್ಣ ಭಾಗವಹಿಸಿದ್ದರು ಎಂದು ಹೇಳಿದರು. ಸರ್ಕಾರ ತೆಗೆದುಕೊಳ್ಳುವ ನಿರ್ಣಯಗಳಿಗೆ ತಮ್ಮ ಭಿನ್ನಾಭಿಪ್ರಯಾವೇನೂ ಇರಲ್ಲ ಎಂದು ಮಾಜಿ ಪ್ರಧಾನಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on