‘ಕಾಟೇರ 2’ ಸಿನಿಮಾ ಬರುತ್ತಾ? ಒಂದೇ ಮಾತಿನಲ್ಲಿ ದರ್ಶನ್​ ನೇರ ಉತ್ತರ

Updated on: May 02, 2024 | 10:51 PM

ಯಾವುದೇ ಸಿನಿಮಾ ಯಶಸ್ವಿ ಆದರೆ ಅದರ ಸೀಕ್ವೆಲ್​ ಬರಬಹುದಾ ಎಂಬ ಕುತೂಹಲ ಎಲ್ಲರಲ್ಲೂ ಇರುತ್ತದೆ. ‘ಕಾಟೇರ’ ಸಿನಿಮಾ ಬಗ್ಗೆಯೂ ಅಭಿಮಾನಿಗಳಿಗೆ ಆ ರೀತಿಯ ಕೌತುಕ ಇದೆ. ಇಂದು (ಮೇ 2) ನಡೆದ ಸುದ್ದಿಗೋಷ್ಠಿಯಲ್ಲಿ ನಟ ದರ್ಶನ್​ ಅವರಿಗೆ ‘ಕಾಟೇರ 2’ ಕುರಿತು ಪ್ರಶ್ನೆ ಕೇಳಲಾಯಿತು. ಅದಕ್ಕೆ ಅವರು ಒಂದೇ ಮಾತಿನಲ್ಲಿ ಉತ್ತರ ನೀಡಿದ್ದಾರೆ. ಸೀಕ್ವೆಲ್​ ಬಗ್ಗೆ ತಮ್ಮ ನಿಲುವು ಏನು ಎಂಬುದನ್ನು ಅವರು ತಿಳಿಸಿದ್ದಾರೆ.

ತರುಣ್​ ಸುಧೀರ್​ ನಿರ್ದೇಶನದ, ರಾಕ್​ಲೈನ್​ ವೆಂಕಟೇಶ್​ ನಿರ್ಮಾಣದ ‘ಕಾಟೇರ’ ಸಿನಿಮಾ (Kaatera Movie) 100 ದಿನಗಳನ್ನು ಪೂರೈಸಿದೆ. ಇಂದು (ಮೇ 2) ಈ ಚಿತ್ರತಂಡದವರು ದಿಢೀರ್​ ಸುದ್ದಿಗೋಷ್ಠಿ ಕರೆದರು. ಹಾಗಾದರೆ ‘ಕಾಟೇರ 2’ (Kaatera 2) ಸಿನಿಮಾದ ಘೋಷಣೆ ಆಗಬಹುದಾ ಎಂದು ಕೆಲವರು ಊಹಿಸಿದ್ದುಂಟು. ಸಡನ್​ ಸುದ್ದಿಗೋಷ್ಠಿಯಲ್ಲಿ ‘ಕಾಟೇರ’ ಚಿತ್ರದ ಸೀಕ್ವೆಲ್​ ಬಗ್ಗೆ ಏನಾದರೂ ಅನೌನ್ಸ್​ಮೆಂಟ್​ ಆಗಬಹುದಾ ಎಂದು ಊಹಿಸಲಾಯಿತು. ಆದರೆ ಆ ಕುರಿತ ಪ್ರಶ್ನೆಗೆ ದರ್ಶನ್​ ಅವರು ನೇರವಾಗಿ ಉತ್ತರ ನೀಡಿದ್ದಾರೆ. ‘ಕಾಟೇರ’ ಸಿನಿಮಾದಿಂದ ದರ್ಶನ್​ ಅವರು ಭಾರಿ ಯಶಸ್ಸು ಪಡೆದುಕೊಂಡರು. ಆದರೆ ಅವರ ‘ಪಾರ್ಟ್​ 2’ ಮಾಡಲು ಅವರು ಸಿದ್ಧರಿಲ್ಲ. ‘ನಾನು ಸೀಕ್ವೆಲ್​ ಮಾಡುವುದಿಲ್ಲ. ಕಾಟೇರ ಅಲ್ಲಿಗೆ ಮುಗಿಯಿತು. ನನಗೆ ಸೀಕ್ವೆಲ್​ ಇಷ್ಟವಿಲ್ಲ. ಗೆದ್ದ ಎತ್ತಿನ ಬಾಲ ಹಿಡಿಯಬಾರದು. ಕಾಟೇರ ಕಥೆಯನ್ನು ಇನ್ನೂ ಎಳೆಯಬಾರದು’ ಎಂದು ದರ್ಶನ್​ ಹೇಳಿದ್ದಾರೆ. ನಿರ್ದೇಶಕ ತರುಣ್​ ಸುಧೀರ್​, ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​, ನಟ ದರ್ಶನ್​ (Darshan) ಅವರ ಕಾಂಬಿನೇಷನ್​ನಲ್ಲಿ ಇನ್ನೊಂದು ಸಿನಿಮಾ ಬರಲಿ ಎಂದು ಫ್ಯಾನ್ಸ್​ ನಿರೀಕ್ಷಿಸುತ್ತಿದ್ದಾರೆ. ಒಳ್ಳೆಯ ಕಥೆ ಸಿಕ್ಕರೆ ಖಂಡಿತಾ ಮಾಡಬಹುದು ಎಂದು ರಾಕ್​ಲೈನ್​ ವೆಂಕಟೇಶ್​ ಹೇಳಿದ್ದಾರೆ. ‘ಕಾಟೇರ’ ಚಿತ್ರದ ಸಂಭಾಷಣೆಕಾರ ಮಾಸ್ತಿ, ಕಥೆಗಾರ ಜಡೇಶ್​ ಕುಮಾರ್​ ಹಂಪಿ ಹಾಗೂ ನಟ ಸೂರಜ್​ ಅವರಿಗೆ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ ಅವರು ಕಾರು ಗಿಫ್ಟ್​ ನೀಡಿದ್ದಾರೆ. ಆ ಕುರಿತು ಸುದ್ದಿಗೋಷ್ಠಿ ನಡೆಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More