ಸುಧಾಕರ್ ಕೇವಲ ಒಂದು ವೋಟಿನಿಂದ ಗೆದ್ದರೂ ರಾಜಕೀಯ ಸನ್ಯಾಸ ತಗೊಳ್ಳುವೆ: ಪ್ರದೀಪ್ ಈಶ್ವರ್

|

Updated on: Apr 13, 2024 | 2:09 PM

ಒಂದು ಪಕ್ಷ ಸುಧಾಕರ್ ಚುನಾವಣೆಯಲ್ಲಿ ಒಂದೇ ಒಂದು ವೋಟು ಲೀಡ್ ಪಡೆದರೆ ರಾಜಕೀಯದಿಂದ ನಿವೃತ್ತನಾಗುತ್ತೇನೆ, ಸುಧಾಕರ್ ಸೋತರೆ ತಮ್ಮ ಎಲ್ಲ ವ್ಯಾಪಾರ ವಹಿವಾಟುಗಳನ್ನು ಬಿಟ್ಟು ಕೊಡಬೇಕು, ಸವಾಲನ್ನು ಸ್ವೀಕರಿಸುವುದಾದರೆ ಇಬ್ಬರೂ ಹೋಗಿ ನಂದಿಕೇಶ್ವರ ದೇವಸ್ಥಾನಲ್ಲಿ ಪ್ರಮಾಣ ಮಾಡೋಣ ಎಂದು ಪ್ರದೀಪ್ ಹೇಳುತ್ತಾರೆ.

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಮತ್ತು ಅಲ್ಲಿನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್ (Dr K Sudhakar) ನಡುವಿನ ಜಗಳ ಕನ್ನಡಿಗರಿಗೆ ಹೊಸದೇನಲ್ಲ. ಇವತ್ತು ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ (Raksha Ramaiah) ಪರ ಪ್ರಚಾರ ಮಾಡುವಾಗ ಟಿವಿ9 ವರದಿಗಾರನೊಂದಿಗೆ ಮಾತಾಡಿದ ಪ್ರದೀಪ್ ಈಶ್ವರ್, ಸುಧಾಕರ್ ಅವರಿಗೆ ಸವಾಲು ಹಾಕಿದರು. ಸವಾಲಿನ ತಿರುಳು ಏನೆಂದರೆ, ಈ ಲೋಕಸಭಾ ಚುನಾವಣೆಯಲ್ಲಿ ಪ್ರದೀಪ್ ಅವರು ಸುಧಾಕರ್ ಅವರನ್ನು ನಿಶ್ಚಯವಾಗಿ ಸೋಲಿಸುತ್ತಾರಂತೆ. ಅವರನ್ನು ಸಂಸತ್ತಿನ ಮೆಟ್ಟಿಲು ಹತ್ತಲು ಬಿಡಲ್ಲ ಎಂದು ಅವರು ಹೇಳುತ್ತಾರೆ. ಒಂದು ಪಕ್ಷ ಸುಧಾಕರ್ ಚುನಾವಣೆಯಲ್ಲಿ ಒಂದೇ ಒಂದು ವೋಟು ಲೀಡ್ ಪಡೆದರೆ ರಾಜಕೀಯದಿಂದ ನಿವೃತ್ತನಾಗುತ್ತೇನೆ, ಸುಧಾಕರ್ ಸೋತರೆ ತಮ್ಮ ಎಲ್ಲ ವ್ಯಾಪಾರ ವಹಿವಾಟುಗಳನ್ನು ಬಿಟ್ಟು ಕೊಡಬೇಕು, ಸವಾಲನ್ನು ಸ್ವೀಕರಿಸುವುದಾದರೆ ಇಬ್ಬರೂ ಹೋಗಿ ನಂದಿಕೇಶ್ವರ ದೇವಸ್ಥಾನಲ್ಲಿ ಪ್ರಮಾಣ ಮಾಡೋಣ ಎಂದು ಪ್ರದೀಪ್ ಹೇಳುತ್ತಾರೆ. ಅವರಲ್ಲಿ ದಮ್ಮು, ತಾಕತ್ತು, ಕಲೇಜಾ ಇದ್ದರೆ ತನ್ನ ಸವಾಲು ಸ್ವೀಕರಿಸಲಿ ಎಂದು ಶಾಸಕ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಡಾ ಕೆ ಸುಧಾಕರ್ ವಿರುದ್ಧ ಹೆಚ್ಚಿದ ವಿರೋಧ, ನೆಲಮಂಗಲ ಮತ್ತು ಯಲಹಂಕದಲ್ಲಿ ಗೋ ಬ್ಯಾಕ್ ಸುಧಾಕರ್ ಅಭಿಯಾನ

Follow us on