Bengaluru News; ಮಳೆಪೀಡಿತ ಜಿಲ್ಲೆಗಳಿಗೆ ಸೋಮವಾರ ಭೇಟಿ ನೀಡಿ ಜನರ ಸಮಸ್ಯೆ ಆಲಿಸುವೆ: ಸಿದ್ದರಾಮಯ್ಯ, ಮುಖ್ಯಮಂತ್ರಿ

|

Updated on: Jul 26, 2023 | 1:42 PM

ಭಾರೀ ಮಳೆಯಿಂದಾಗಿ ಆಲಮಟ್ಟಿ, ತುಂಗಭದ್ರ, ಕಬಿನಿ, ಹಾರಂಗಿ, ಹೇಮಾವತಿ ಮೊದಲಾದ ಜಲಾಶಯಗಳೆಲ್ಲ ಭರ್ತಿಯಾಗಿರುವುದು ಸಂತಸದ ಸಂಗತಿ ಎಂದು ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ರಾಜ್ಯದಲ್ಲಿ ಮಳೆ-ಬೆಳೆಗಳ ಬಗ್ಗೆ ವಿವರಣೆ ನೀಡಿದರು. ರಾಜ್ಯದ ಅನೇಕ ಭಾಗಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರೂ ಎಲ್ಲೂ ಪರಿಸ್ಥಿತಿ ವಿಕೋಪಕ್ಕೆ ಹೋಗಿಲ್ಲ. ಆದರೆ ಭಾರೀ ಮಳೆಯಿಂದಾಗಿ ಆಲಮಟ್ಟಿ, ತುಂಗಭದ್ರ, ಕಬಿನಿ, ಹಾರಂಗಿ, ಹೇಮಾವತಿ (Hemavathi reservoir) ಮೊದಲಾದ ಜಲಾಶಯಗಳೆಲ್ಲ ಭರ್ತಿಯಾಗಿರುವುದು ಸಂತಸದ ಸಂಗತಿ ಎಂದು ಸಿದ್ದರಾಮಯ್ಯ ಹೇಳಿದರು. ನಿನ್ನೆ ತಾವು ಹಾವೇರಿಗೆ (Haveri) ಭೇಟಿ ನೀಡಿದ್ದನ್ನು ತಿಳಿಸಿದ ಅವರು ಆ ಜಿಲ್ಲೆಯಲ್ಲೂ ಉತ್ತಮ ಮಳೆಯಾಗುತ್ತಿದೆ ಮತ್ತು ಜಿಲ್ಲೆಯಾದ್ಯಂತ ಶೇಕಡ 87 ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ ಎಂದರು. ಅತಿಹೆಚ್ಚು ಮಳೆಯಾಗುತ್ತಿರುವ ಉಡುಪಿ, ದಕ್ಷಿಣ ಕನ್ನಡ (Dakshina Kannada), ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಸೋಮವಾರ ಪ್ರವಾಸ ತೆರಳಿ ಜನ ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸುವುದಾಗಿ ಸಿದ್ದರಾಮಯ್ಯ ಹೇಳಿದರು.
.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on