Chikkaballapur News; ಕ್ಷೇತ್ರದ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್, ಸಿಎಸ್, ಐಎಎಸ್, ಕೆಎಎಸ್ ಕೋರ್ಸ್ಗಳಿಗೆ ಉಚಿತ ಕೋಚಿಂಗ್: ಪ್ರದೀಪ್ ಈಶ್ವರ್
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿರುವ ಸುಮಾರು 19,000 ಮಕ್ಕಳಿಗೆ ಗಣೇಶನ ಹಬ್ಬಕ್ಕೆ ಹೊಸಬಟ್ಟೆ ಕೊಡಿಸುವ ಯೋಚನೆ ಅವರಿಗಿದೆ
ಚಿಕ್ಕಬಳ್ಳಾಪುರ: ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ತಮ್ಮ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿಸುವ (model constituency) ಪಣತೊಟ್ಟಂತಿದೆ. ಅವರ ತಲೆಯಲ್ಲಿ ಹಲವಾರು ಯೋಜನೆಗಳಿವೆ ಮತ್ತು ಅವುಗಳನ್ನು ಜಾರಿಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ ಅಧಿಕಾರಿಗಳೊಂದಿಗೆ (officials) ಸುತ್ತಾಡಿದ ಅವರು ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ನಿವಾರಿಸಿದರು. ಇಷ್ಟರಲ್ಲೇ ಅವರು ತಮ್ಮ ಪರಿಶ್ರಮ ಅಕಾಡೆಮಿಯಲ್ಲಿ ತಮ್ಮ ಕ್ಷೇತ್ರದ ವಿದ್ಯಾರ್ಥಿಗಳಿಗೆ ಉಚಿತ ಸಿಇಟಿ, ಎನ್ ಇಇಟಿ, ಸಿಎಸ್, ಐಎಎಸ್, ಕೆಎಎಸ್ ಕೋಚಿಂಗ್ ಶುರುಮಾಡಲಿದ್ದಾರಂತೆ. ತರಬೇತಿ ಹೊಂದಲು ಬರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಉಚಿತ ತಿಂಡಿ ಮತ್ತು ಊಟದ ವ್ಯವಸ್ಥೆಯನ್ನೂ ಅವರು ಮಾಡಲಿದ್ದಾರೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿರುವ ಸುಮಾರು 19,000 ಮಕ್ಕಳಿಗೆ ಗಣೇಶನ ಹಬ್ಬಕ್ಕೆ ಹೊಸಬಟ್ಟೆ ಕೊಡಿಸುವ ಯೋಚನೆ ಅವರಿಗಿದೆ. ಅದಲ್ಲದೆ ವರಮಹಾಲಕ್ಷ್ಮೀ ಹಬ್ಬಕ್ಕೆ ಕ್ಷೇತ್ರದ ಮಹಿಳೆಯರಿಗೆ ಸೀರೆಗಳನ್ನು ಉಡುಗೊರೆಯಾಗಿ ಕೊಡಲಿದ್ದಾರೆ.
.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ