5 ಕೋಟಿ ಕಳೆದುಕೊಂಡ ಬಳಿಕ ಎಲೆಕ್ಷನ್​ನಲ್ಲಿ ಸ್ಪರ್ಧಿಸ್ತಾರಾ ಉದ್ಯಮಿ ಗೋವಿಂದ ಬಾಬು ಪೂಜಾರಿ? ಇಲ್ಲಿದೆ ವಿಡಿಯೋ

Edited By: ಕಿರಣ್ ಹನುಮಂತ್​ ಮಾದಾರ್

Updated on: Oct 04, 2023 | 8:13 PM

ಉದ್ಯಮಿ ಗೋವಿಂದ ಬಾಬು ಪೂಜಾರಿ(Govind Babu Poojari) ಗೆ 5 ಕೋಟಿ ವಂಚನೆ ಪ್ರಕರಣ ಚೈತ್ರಾ, ಅಭಿನವ ಹಾಲಶ್ರೀ ಸ್ವಾಮೀಜಿ ಹಣ ಪಡೆದ ಅಸಲಿ ಕಥೆಯನ್ನು ಉದ್ಯಮಿ ಗೋವಿಂದಬಾಬು ಬಿಚ್ಚಿಟ್ಟಿದ್ದಾರೆ. ಜೊತೆಗೆ ಅವರ ಮುಂದಿನ ರಾಜಕೀಯ ನಡೆ ಬಗ್ಗೆ ಈ ಕುರಿತು ಹೇಳಿದ್ದಾರೆ.

ಬೆಂಗಳೂರು, ಅ.04: ಉದ್ಯಮಿ ಗೋವಿಂದ ಬಾಬು ಪೂಜಾರಿ(Govind Babu Poojari) ಗೆ 5 ಕೋಟಿ ವಂಚನೆ ಪ್ರಕರಣ ಚೈತ್ರಾ, ಅಭಿನವ ಹಾಲಶ್ರೀ ಸ್ವಾಮೀಜಿ ಹಣ ಪಡೆದ ಅಸಲಿ ಕಥೆಯನ್ನು ಉದ್ಯಮಿ ಗೋವಿಂದಬಾಬು ಬಿಚ್ಚಿಟ್ಟಿದ್ದಾರೆ. ಈ ಕುರಿತು ಮಾತನಾಡಿದ ಅವರು ‘ಚೈತ್ರಾ ರಾಜಕೀಯ ಪ್ರಭಾವಿಯಂತೆ ನನಗೆ ದುಡ್ಡು ಕೊಡಲು ಒತ್ತಾಯಿಸಿದರು. ಹಣ ಪಡೆಯಲು ಎಲ್ಲಾ ರೀತಿಯ ಪ್ಲ್ಯಾನ್​ ಮಾಡಿದ್ದೇ ಚೈತ್ರಾ. ಜೊತೆಗೆ ಆಕೆಯೇ ಸ್ವಾಮೀಜಿ ಸೇರಿದಂತೆ ಇತರರನ್ನು ಪರಿಚಯಸಿದರು ಎಂದು ಹೇಳಿದ್ದಾರೆ. ಇದೇ ವೇಳೆ ಅವರ ಮುಂದಿನ ರಾಜಕೀಯ ನಡೆ ಬಗ್ಗೆ ‘ ನಾನು ಮೊದಲಿನಿಂದಲೂ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಮುಂದೆಯೂ ಕೂಡ ಮಾಡುತ್ತಿರುತ್ತೇನೆ. ಯಾವುದೇ ಎಂಎಲ್​ಎ  ಆಗುವ ಆಸೆ ಇಲ್ಲ. ನನ್ನ ಸಮಾಜ ಸೇವೆ ಕೆಲಸ ಕೂಡ ನಡೆಯುತ್ತಿರುತ್ತೆ. ಅದನ್ನೇ ಮುಂದುವರೆಸಿಕೊಂಡು ಹೋಗುತ್ತೇನೆ ಎಂದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Follow Us
ರಾಚಪ್ಪಾಜಿ ನಾಯ್ಕ್

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More