Karnataka Budget 2024; ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಒಂದು ರೂ. ಕೂಡ ನೀಡದ ಬೋಗಸ್ ಬಜೆಟ್: ಬಸನಗೌಡ ಪಾಟೀಲ್ ಯತ್ನಾಳ್

|

Updated on: Feb 16, 2024 | 2:23 PM

Karnataka Budget 2024: ಯಾವುದೇ ಹೊಸ ಯೋಜನೆ ಘೋಷಿಸುವುದು ಅವರಿಗೆ ಸಾಧ್ಯವಾಗಿಲ್ಲ, ಬೊಕ್ಕಸದಲ್ಲಿ ಹಣವೇ ಇಲ್ಲದಾಗ ಹೊಸ ಯೋಜನಗಳ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳೋದು ಹುಚ್ಚತನ ಎಂದರು. ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಹಣ ತೆಗೆದಿರಿಸಿಲ್ಲ, ಕೃಷ್ಣಾ ಮೇಲ್ದಂಡೆ ಯೋಜನೆಗೆ 10,000 ಕೋಟಿ ರೂ. ಕೊಡುತ್ತೇನೆಂದು ಕೃಷ್ಣನ ಮೇಲೆ ಆಣೆ ಮಾಡಿ ಹೇಳಿದ್ದರು, ಅದು ಮುಖ್ಯಮಂತ್ರಿಯವರಿಗೆ ಮರೆತು ಹೋಗಿದೆ ಎಂದು ಯತ್ನಾಳ್ ಹೇಳಿದರು.

ಬೆಂಗಳೂರು: ರಾಜ್ಯದ ಯಾವುದೇ ಭಾಗಕ್ಕೆ ಪ್ರಯೋಜನ ಒದಗಿಸದ ಬೋಗಸ್ ಬಜೆಟ್ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮಂಡಿಸಿದ್ದಾರೆ ಎಂದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹೇಳಿದರು. ವಿಧಾನ ಸೌಧ ಅವರಣದಲ್ಲಿ ಟಿವಿ9 ಕನ್ನಡ ಪ್ರತಿನಿಧಿಯೊಂದಿಗೆ ಮಾತಾಡಿದ ಯತ್ನಾಳ್, ಪುಸ್ತಕದದಲ್ಲಿ ಬರೆದಿದ್ದನ್ನು ಓದುವ ಕೆಲಸ ಮುಖ್ಯಮಂತ್ರಿ ಮಾಡಿದ್ದಾರೆ, ತಮ್ಮ ಭಾಷಣದಲ್ಲಿ ಅವರು ಕೇಂದ್ರ ಸರ್ಕಾರ (Union Government) ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಟೀಕಿಸುವುದು ಬಿಟ್ಟರೆ ಬೇರೇನೂ ಮಾಡಿಲ್ಲ ಎಂದು ಯತ್ನಾಳ್ ಹೇಳಿದರು. ಮುಖ್ಯಮಂತ್ರಿಯವರೇ ಹೇಳಿದಂತೆ ಇದು 29,000 ಕೋಟಿ ರೂ. ಕೊರತೆಯ ಬಜೆಟ್, ಕೇವಲ 6 ತಿಂಗಳಿಗೆ ಹೀಗಾದರೆ ಮುಂದಿನ ವರ್ಷ ಇದು ಒಂದು ಲಕ್ಷ ಕೋಟಿ ರೂ. ಕೊರತೆ ಬಜೆಟ್ ಅಗಲಿದೆ ಎಂದು ಯತ್ನಾಳ್ ಹೇಳಿದರು. ಯಾವುದೇ ಹೊಸ ಯೋಜನೆ ಘೋಷಿಸುವುದು ಅವರಿಗೆ ಸಾಧ್ಯವಾಗಿಲ್ಲ, ಬೊಕ್ಕಸದಲ್ಲಿ ಹಣವೇ ಇಲ್ಲದಾಗ ಹೊಸ ಯೋಜನಗಳ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳೋದು ಹುಚ್ಚತನ ಎಂದರು. ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಹಣ ತೆಗೆದಿರಿಸಿಲ್ಲ, ಕೃಷ್ಣಾ ಮೇಲ್ದಂಡೆ ಯೋಜನೆಗೆ 10,000 ಕೋಟಿ ರೂ. ಕೊಡುತ್ತೇನೆಂದು ಕೃಷ್ಣನ ಮೇಲೆ ಆಣೆ ಮಾಡಿ ಹೇಳಿದ್ದರು, ಅದು ಮುಖ್ಯಮಂತ್ರಿಯವರಿಗೆ ಮರೆತು ಹೋಗಿದೆ ಎಂದು ಯತ್ನಾಳ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ