ಮಾವುತರ ಮಕ್ಕಳೊಂದಿಗೆ ಬೆರೆತು ಆಟವಾಡಿದ ಒಡೆಯರ್ ವಂಶದ ಕುಡಿ ಆದ್ಯವೀರ್, ಮಗನಿಗೆ ಸಾಥ್ ನೀಡಿದ ತ್ರಿಷಿಕಾ ಕುಮಾರಿ ಒಡೆಯರ್

|

Updated on: Oct 12, 2023 | 11:32 AM

ಇವರ ಮಗ ಅಂದರೆ ಒಡೆಯರ್ ವಂಶದ ಕುಡಿ ಆದ್ಯವೀರ್ ಒಡೆಯರ್ ಮಾವುತರ ಮಕ್ಕಳೊಂದಿಗೆ ಬೆರೆತು ಆಡುತ್ತಿರುವುದದನ್ನು ಇಲ್ಲಿ ನೋಡಬಹುದು. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಒಡೆಯರ್ ದಂಪತಿ ಮಾವುತರ ಮಕ್ಕಳಿಗೆ ಹಾಸಿಗೆ ಮತ್ತು ಹೊದಿಕೆಗಳನ್ನು ಹಂಚಿದ್ದಾರೆ.

ಮೈಸೂರು: ಮನಸ್ಸಿಗೆ ಮುದ ನೀಡುವ ದೃಶ್ಯಗಳಿವು. ಭಾರತದಲ್ಲಿ ಈಗ ಅರಸೊತ್ತಿಗೆಗಳು (dynasties) ಅಸ್ತಿತ್ವದಲ್ಲಿಲ್ಲ, ಅದು ಬೇರೆ ವಿಷಯ. ರಾಜಸಂಸ್ಥಾನಗಳು ಭಾರತ ಒಕ್ಕೂಟ ವ್ಯವಸ್ಥೆಯ (Federal System of India) ಭಾಗವಾಗಿ ಉಳಿದ ಭಾರತೀಯರಂತೆ ಜೀವನ ನಡೆಸುತ್ತಿದ್ದಾರೆ. ಕೆಲ ಸಂಸ್ಥಾನಗಳಲ್ಲಿ ಅರಸೊತ್ತಿಗೆಯ ರೀತಿ ರಿವಾಜುಗಳನ್ನು ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗದ ಹಾಗೆ ಪಾಲಿಸಿಕೊಂಡು ಹೋಗಲಾಗುತ್ತಿದೆ. ಮೈಸೂರು ಒಡೆಯರ್ ರಾಜಮನೆತನದ ಬಗ್ಗೆ ಕನ್ನಡಿಗರಿಗೆ ಚೆನ್ನಾಗಿ ಗೊತ್ತು. ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ ಒಡೆಯರ್ ವಂಶಸ್ಥರಾಗಿರುವ ಯದುವೀರ ಕೃಷ್ಣದತ್ತ ಒಡೆಯರ್ (Yaduveer Krishna Dutta Wodeyar) ಹಾಗೂ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ (Trishika Kumari Devi Wodeyar) ನಾವೆಲ್ಲ ಅಂದುಕೊಳ್ಳುವುದಕ್ಕಿಂತ ಸರಳವಾಗಿ ಜೀವನ ನಡೆಸುತ್ತಿದ್ದಾರೆ. ಇವರ ಮಗ ಅಂದರೆ ಒಡೆಯರ್ ವಂಶದ ಕುಡಿ ಆದ್ಯವೀರ್ ಒಡೆಯರ್ (Aadyaveer Wodeyar) ಮಾವುತರ ಮಕ್ಕಳೊಂದಿಗೆ ಬೆರೆತು ಆಡುತ್ತಿರುವುದದನ್ನು ಇಲ್ಲಿ ನೋಡಬಹುದು. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಒಡೆಯರ್ ದಂಪತಿ ಮಾವುತರ ಮಕ್ಕಳಿಗೆ ಹಾಸಿಗೆ ಮತ್ತು ಹೊದಿಕೆಗಳನ್ನು ಹಂಚಿದ್ದಾರೆ. ತ್ರಿಷಿಕಾ ಕುಮಾರಿ ಸಹ ಮಾವುತರ ಕುಟುಂಬಗಳ ಹೆಣ್ಣುಮಕ್ಕಳು ಹಾಗೂ ಮಕ್ಕಳೊಂದಿಗೆ ಆತ್ಮೀಯವಾಗಿ ಮಾತಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ