ರಾಜ ಮನೆತನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸರಳತೆಗೆ ಅಪಾರ ಮೆಚ್ಚುಗೆ, ಫೋಟೋ ವೈರಲ್

ಗುರುಗಳ ಸಮಾನವಾಗಿ ಕುರ್ಚಿಯಲ್ಲಿ ಕುಳಿತುಕೊಳ್ಳದೆ ನೆಲದ ಮೇಲೆ ಕುಳಿತು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್(Yaduveer Krishnadatta Chamaraja Wadiyar) ತಮ್ಮ ಸರಳತೆಯನ್ನು ಪ್ರದರ್ಶಿಸಿದ್ದಾರೆ.

ರಾಜ ಮನೆತನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸರಳತೆಗೆ ಅಪಾರ ಮೆಚ್ಚುಗೆ, ಫೋಟೋ ವೈರಲ್
ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್
Follow us
TV9 Web
| Updated By: ಆಯೇಷಾ ಬಾನು

Updated on:Apr 03, 2022 | 2:29 PM

ಮೈಸೂರು: ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ದೇವರು ಹಾಗೂ ಗುರುಗಳ ಮುಂದೆ ಮಂಡಿಯೂರಲೇಬೇಕು. ಗುರುಭಕ್ತಿಯನ್ನು ಮಾಡಲೇಬೆಕು ಎನ್ನುವುದಕ್ಕೆ ಮೈಸೂರು ರಾಜ ಮನೆತನದ ಯದುವಂಶದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಾಕ್ಷಿಯಾಗಿದ್ದಾರೆ. ಗುರುಗಳ ಸಮಾನವಾಗಿ ಕುರ್ಚಿಯಲ್ಲಿ ಕುಳಿತುಕೊಳ್ಳದೆ ನೆಲದ ಮೇಲೆ ಕುಳಿತು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್(Yaduveer Krishnadatta Chamaraja Wadiyar) ತಮ್ಮ ಸರಳತೆಯನ್ನು ಪ್ರದರ್ಶಿಸಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಯದುವೀರರ ಸರಳತೆಗೆ ಜನ ಕೊಂಡಾಡಿದ್ದಾರೆ.

ರಾಜರು ಯಾವತ್ತಿದ್ದರೂ ರಾಜರೇ. ಅದರಲ್ಲೂ ಮೈಸೂರು ಅರಸರೆಂದರೇ ವಿಶೇಷ ಗೌರವ ಇದರಲ್ಲಿ ಎರಡು‌ ಮಾತಿಲ್ಲ. ರಾಜರ ಆ ಪರಂಪರೆಯನ್ನು ಮುಂದುವರಿಸಿದ್ದು ಸ್ವರ್ಗಸ್ಥರಾದ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್. ಇದಕ್ಕೆ ಶಕ್ತಿಯಾಗಿ ಬೆನ್ನೆಲುಬಾಗಿದ್ದು ಶ್ರೀಮತಿ ಪ್ರಮೋದಾದೇವಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಇದರಲ್ಲಿ ಎರಡು ಮಾತಿಲ್ಲ. ಇದೀಗ ಆ ಸಾಲಿಗೆ ಮತ್ತೊಂದು ಸೇರ್ಪಡೆ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್.

ತುಂಬಿದ ಕೊಡ ಖಂಡಿತಾ ತುಳುಕುವುದಿಲ್ಲ. ಈ ಮಾತನ್ನು ಸಾಕಷ್ಟು ಬಾರಿ ನಾನು ಕೇಳಿದ್ದೆ, ಸಾಕಷ್ಟು ಬಾರಿ ಕಣ್ಣಾರೆಯೂ ಕಂಡಿದ್ದೆ. ಆದ್ರೆ ಅದು ಮನಮುಟ್ಟುವಂತೆ ಮನದಟ್ಟುಗಿದ್ದು ನಮ್ಮ ಮೈಸೂರಿನ ಹೆಮ್ಮೆ ಗೌರವದ ಪ್ರತೀಕ ಯದುವಂಶದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಅಂದರೂ ತಪ್ಪಾಗಲಾರದು. ಅವರು ನಮ್ಮ ಸಂಸ್ಕೃತಿ ಪರಂಪರೆಯ ಕಾರ್ಯಕ್ರಮವೊಂದರಲ್ಲಿ ನಡೆದುಕೊಂಡ ರೀತಿ ಅದ್ಬುತ, ಅಮೋಘ ಅದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ.

ಗುರು ಗೌರವ ನಾಡಿಗೆ ಅರಸನಾದರೂ ಹೆತ್ತಮ್ಮನಿಗೆ ಮಗನೇ, ಊರನ್ನೇ ಆಳಿದರೂ ಗುರುವಿಗೆ ಶಿಷ್ಯನೇ ಅನ್ನೋ ನಾಣ್ಣುಡಿಯನ್ನು ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ನಿಜವಾಗಿದ್ದಾರೆ. ಅವತ್ತು ಶುಕ್ರವಾರ ಯುಗಾದಿ ಹಬ್ಬದ ಹಿಂದಿನ ದಿನ ಮೈಸೂರಿನ ಅಗ್ರಹಾರದಲ್ಲಿರುವ ಉತ್ತರಾಧಿಮಠದಲ್ಲಿ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜಗದ್ಗುರು ಶ್ರೀಮನ್ ಮಧ್ವಾಚಾರ್ಯರ ಮೂಲ ಮಹಾಸಂಸ್ಥಾನದ ಶ್ರೀಮದುತ್ತರಾಧಿ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪರಮಪೂಜ್ಯ ಶ್ರೀಗಳಿಗಾಗಿ ವೇದಿಕೆಯ ಮಧ್ಯಭಾಗದಲ್ಲಿ ಬೃಹತ್ ಆಸನವನ್ನು ಹಾಕಲಾಗಿತ್ತು. ಶ್ರೀಗಳ ನಿಗದಿತ ಸಮಯಕ್ಕೆ ಆಗಮಿಸಿ ತಮ್ಮ ಆಸನದಲ್ಲಿ ವಿರಾಜಮಾನರಾದರೂ. ಇನ್ನು ಆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದವರು ಯದುವಂಶದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್. ಅವರಿಗೆ ಶ್ರೀಗಳ ಪಕ್ಕದಲ್ಲೇ ಒಂದು ಆಸನವನ್ನು ಹಾಕಲಾಗಿತ್ತು. ಆದ್ರೆ ಯದುವೀರರು ಆ ಆಸನದಲ್ಲಿ ಕೂರಲು ಸುತಾರಾಂ ಒಪ್ಪಲಿಲ್ಲ. ಗುರುಗಳ ಸರಿ ಸಮಾನವಾಗಿ ನಾನು ಕೂರುವುದಿಲ್ಲ ಅಂತಾ ಹೇಳಿದ ಯದುವೀರರು ವೇದಿಕೆಯಲ್ಲಿ ಗುರುಗಳ ಆಸನದ ಪಕ್ಕದಲ್ಲೇ ಪದ್ಮಾಸನ ಹಾಕಿಕೊಂಡು ಕುಳಿತರು. ಅಷ್ಟೇ ಅಲ್ಲ ಗುರುಗಳ‌ ಪ್ರವಚನ ಮುಗಿಯುವವರೆಗೂ ಅಲ್ಲಾಡದೆ ಕುಳಿತಿದ್ದರು.

ಮೈಸೂರಿನ ರಾಜಮನೆತನಕ್ಕೂ ಹಾಗೂ ಉತ್ತರಾದಿಮಠಕ್ಕೂ ಆತ್ಮೀಯವಾದ ಸಂಬಂಧ ಹಿಂದಿನಿಂದಲೂ ಮೈಸೂರು ರಾಜಮನೆತನ ಹಾಗೂ ಉತ್ತರಾಧಿಮಠದ ನಡುವಿನ ಸಂಬಂಧ ಅತ್ಯಂತ ಆತ್ಮೀಯವಾಗಿದೆ. ಅದರಲ್ಲಿ ಪ್ರಮುಖವಾದ್ದು. – ಶ್ರೀವೇದವ್ಯಾಸತೀರ್ಥರು ಆಗಿನ ಮೈಸೂರಿನ ಅರಸರಿಗೆ ಕೆಲವು ಅನಾರೋಗ್ಯಗಳನ್ನು ತಮ್ಮ ತಪಃಶಕ್ತಿಯಿಂದ ಪರಿಹಾರ ಮಾಡಿದದ್ದರಂತೆ. ಅದರಿಂದ ಸಂತುಷ್ಟರಾದ ಅರಸರು ಅವರಿಗೆ ಅನೇಕ ಗ್ರಾಮಗಳನ್ನು ಗೌರವಪೂರ್ವಕವಾಗಿ ನೀಡಿದ್ದಾರೆ. ಹೇಮಾವತೀ ನದೀತೀರದ ಹೊಳೆ ನರಸೀಪುರ ಕ್ಷೇತ್ರದಲ್ಲಿ ದೊಡ್ಡದಾದ ಮಠವನ್ನೂ ರಾಜರು ಕಟ್ಟಿಸಿಕೊಟ್ಟಿದ್ದಾರೆ. – ಶ್ರೀವಿದ್ಯಾಧೀಶತೀರ್ಥರಿಗೆ ಶ್ರೀಕೃಷ್ಣರಾಜ ಅರಸರು ವಿಶೇಷ ಆದರ ಉಪಚಾರಗಳನ್ನು ಮಾಡಿ ಅವರಿಗೂ ಗ್ರಾಮಗಳನ್ನು ನೀಡಿದ್ದಾರೆ. – ಶ್ರೀಸತ್ಯಧರ್ಮತೀರ್ಥರಿಗೆ ಮೈಸೂರಿನ ರಾಜಮನೆತದವರ ಅತ್ಯಂತ ಪ್ರೀತಿಯ ಬಾಂಧವ್ಯ ಇತ್ತು. – ಶ್ರೀಸತ್ಯಸಂಕಲ್ಪ ತೀರ್ಥರು ಹಾಗೂ ಶ್ರೀಸತ್ಯಸಂತುಷ್ಪ ತೀರ್ಥರು ರಾಜರ ಅಪೇಕ್ಷೆಯಂತೆ ಮೈಸೂರಿನಲ್ಲಿಯೇ ಅನೇಕ ವರ್ಷಗಳ ಕಾಲ ವಾಸ್ತವ್ಯ ಮಾಡಿದ್ದರು. ರಾಜಮನೆತನಕ್ಕೆ ಮಾರ್ಗದರ್ಶಕರಾಗಿ ಇದ್ದರು. – ಶ್ರೀಸತ್ಯಧ್ಯಾನತೀರ್ಥರು ಅನೇಕ ತಿಂಗಳುಗಳ ಕಾಲ ಮೈಸೂರಿನಲ್ಲಿ ವಾಸ್ತವ್ಯ ಮಾಡಿದ್ದರು. ಅರಮನೆಯಲ್ಲಿಯೇ ವೈಭವದ ಸಂಸ್ಥಾನ ಪೂಜೆಯನ್ನು ನೆರವೇರಿಸಿ ರಾಜರಿಗೆ ಅನುಗ್ರಹಿಸಿದ್ದರು. – ಶ್ರೀಸತ್ಯಪ್ರಮೋದತೀರ್ಥರು ಮೈಸೂರಿಗೆ ಆಗಮಿಸಿ ಶ್ರೀಸತ್ಯಧ್ಯಾನತೀರ್ಥರ ಜನ್ಮಶತಮಾನೋತ್ಸವನ್ನು ಆಚರಿಸಿದರು. ಆ ಸಂದರ್ಭದಲ್ಲಿ ಶ್ರೀಯುತ ಮಾನ್ಯ ಜಯ ಚಾಮರಾಜೇಂದ್ರ ಒಡೆಯರ್ ಕಾರ್ಯಕ್ರಮಕ್ಕೆ ಉಪಸ್ಥಿತರಿದ್ದರು. ಅಷ್ಟೇ ಅಲ್ಲ ರಾಜ ಗೌರವದೊಂದಿಗೆ ಭವ್ಯವವಾದ ಮೆರವಣಿಗೆಯನ್ನೂ ಮಾಡಲಾಯಿತು ಆನೆ ಅಂಬಾರಿ, ಕುದುರೆ, ನಿಶಾನಿ, ವಾದ್ಯ ಎಲ್ಲವನ್ನೂ ಅರಮನೆಯಿಂದ ಕಳುಹಿಸಲಾಗಿತ್ತು.

ಪರಂಪರೆ ಮುಂದುವರಿಸಿದ ಯದುವೀರರು ಮೈಸೂರು ಅರಸರು ಪಾಲಿಸಿಕೊಂಡ ಪರಂಪರೆಯನ್ನು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಹಾ‌ ಮುಂದುವರಿಸಿದ್ದಾರೆ. ಮಠ ಹಾಗೂ ರಾಜಮನೆತನದ ಗೌರವಕ್ಕೆ ಕಿಂಚಿತ್ತು ಧಕ್ಕೆಯಾಗದಂತೆ ನೋಡಿಕೊಂಡಿದ್ದಾರೆ. ಈ ಮೂಲಕ ತಮ್ಮ ಪೂರ್ವಜರು ಹಾಕಿಕೊಟ್ಟ ಫಥದಲ್ಲಿ ಇವರು ಸಾಗಿ ಮೈಸೂರು ರಾಜಮನೆತನದ ಗೌರವವನ್ನು ಇಮ್ಮಡಿಗೊಳಿಸಿದ್ದಾರೆ. ಯದುವೀರರ ಈ ನಡವಳಿಕೆ ಸಭೆಯಲ್ಲಿ ಭಾಗಿಯಾಗಿದ್ದ ಇತರ ಅತಿಥಿಗಳು, ಮಠದ ಭಕ್ತರು ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲ ಸಾಮಾಜಿಕ‌ ಜಾಲತಾಣದಲ್ಲಿ ಯದುವೀರರ ಬಗ್ಗೆ ಉತ್ತಮವಾದ ಅಭಿಪ್ರಾಯ ವ್ಯಕ್ತವಾಗಿದೆ.

ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಮಾದರಿ ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳು ತಾವು ಜನಪ್ರತಿನಿಧಿಗಳು , ಜನರ ಸೇವಕರು, ಜನರ ಕೆಲಸ ಮಾಡುವುದಕ್ಕಾಗಿಯೇ ತಮಗೆ ಅಧಿಕಾರ ಸಿಕ್ಕಿರುವುದು ಎಂಬ ಸತ್ಯವನ್ನು ಮರೆತು ವರ್ತಿಸುವುದನ್ನು ನೋಡಿದ್ದೇವೆ. ಅದರಲ್ಲೂ ಅಧಿಕಾರ ಸಿಕ್ಕರಂತೂ ಕೇಳುವುದೇ ಬೇಡ. ಇನ್ನು ಇತ್ತೀಚೆಗೆ ನಮ್ಮ ರಾಜ್ಯ ನಾಯಕರಿಂದ ಹಿಡಿದು ಕೇಂದ್ರದ ನಾಯಕರವರೆಗೆ, ಮಾಜಿ ಸಿಎಂ ಗಳು ಹಾಲಿ ಮಂತ್ರಿಗಳು ರಾಜ್ಯದ ಪ್ರಮುಖ ಶ್ರೀಗಳ ಜೊತೆ ಕುಳಿತ ಪೋಟೋಗಳು, ಅವರ ಜೊತೆ ನಡೆದುಕೊಂಡ ಸಾಕಷ್ಟು ವಿಚಾರಗಳು ವೈರಲ್ ಆಗಿದ್ದವು. ಇನ್ನು ಅಧಿಕಾರಿಗಳು ಸಹಾ ಇದಕ್ಕಿಂತ ಹೊರತಾಗಿಲ್ಲ. ಅವರದ್ದು ಅದೇ ಕಥೆ. ಜನರ ಕೆಲಸ ದೇವರ ಕೆಲಸ ಎಂಬುದು ಕೇವಲ ಗೋಡೆ ಬರಹಕ್ಕೆ, ಘೋಷಣೆಗೆ ಮಾತ್ರ ಸೀಮಿತವಾಗುವಂತೆ ಮಾಡಿದ್ದಾರೆ. ಇಂತವರ ಮಧ್ಯೆ ರಾಜಮನೆತನದ ಪರಂಪರೆಯ ಭಾಗವಾಗಿ, ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವ ಹಾಗೂ ಯಾವುದೇ ಅಧಿಕಾರವಿಲ್ಲದಿದ್ದರು ಜನರು‌ ಸ್ವಯಂಪ್ರೇರಿತರಾಗಿ ಕೈ ಎತ್ತಿ ಮುಗಿದು ಗೌರವ ಸಲ್ಲಿಸಿ ಪ್ರತ್ಯಕ್ಷ ದೇವರಂತೆ ಕಾಣುವ ಯದುವೀರರ ನಡವಳಿಕೆಗೆ ನಮದೊಂದು ಹ್ಯಾಟ್ಸ್ ಆಫ್.

ವರದಿ: ರಾಮ್, ಟಿವಿ9 ಮೈಸೂರು

ಇದನ್ನೂ ಓದಿ: ಕೃತಜ್ಞತೆ ಎನ್ನುವುದು ಬಿಜೆಪಿಯವರಿಗೆ ಆಗಿಬಾರದ ಪದ; ‘ಹಿಂದುತ್ವ ವಿನಾಶಕ ಬಿಜೆಪಿ’ ಎಂದು ಟ್ವೀಟ್ ಮೂಲಕ ಜೆಡಿಎಸ್ ತಿರುಗೇಟು

ರಾಧಿಕಾ ಪಂಡಿತ್ ಮನೆಯಲ್ಲಿ ಯುಗಾದಿ ಸಂಭ್ರಮ; ಹೋಳಿಗೆ ಊಟ ಸವಿದ ಯಶ್​ ಕುಟುಂಬ

Published On - 8:03 pm, Sat, 2 April 22

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ