Video: ಹುಳುಕು ಹಲ್ಲಿನ ಬದಲು ಸರಿ ಇದ್ದ ಹಲ್ಲು ಕಿತ್ತ ವೈದ್ಯ
ಅಜ್ಮೀರ್ನ ಜವಾಹರಲಾಲ್ ನೆಹರು ಆಸ್ಪತ್ರೆಯ ದಂತ ವಿಭಾಗದಲ್ಲಿ ಶುಕ್ರವಾರ ವೈದ್ಯರ ನಿರ್ಲಕ್ಷ್ಯದಿಂದಾಗಿ ರೋಗಿಯೊಬ್ಬರ ತಪ್ಪು ಹಲ್ಲು ಹೊರತೆಗೆದ ಘಟನೆ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಶಬಾನಾ ಖಾನ್ ಕಳೆದ ಎರಡು ತಿಂಗಳಿನಿಂದ ತೀವ್ರ ಹಲ್ಲು ನೋವಿನಿಂದ ಬಳಲುತ್ತಿದ್ದರು. ಆಸ್ಪತ್ರೆಯ ವೈದ್ಯರು ಅವರ ಒಂದು ಹಲ್ಲು ಹುಳುಕಾಗಿದ್ದು, ಅದನ್ನು ತೆಗೆಯಬೇಕೆಂದು ಸಲಹೆ ನೀಡಿದ್ದರು. ಅದರಂತೆ ಶುಕ್ರವಾರ ಶಬಾನಾ ತಮ್ಮ ಪತಿಯೊಂದಿಗೆ ಚಿಕಿತ್ಸೆಗೆ ಬಂದಿದ್ದರು. ಆದರೆ, ವೈದ್ಯರು ನೋವಿದ್ದ ಹಲ್ಲಿನ ಬದಲಿಗೆ ಪಕ್ಕದಲ್ಲಿದ್ದ ಆರೋಗ್ಯಕರ ಹಲ್ಲನ್ನು ಹೊರತೆಗೆದಿದ್ದಾರೆ ಎಂದು ಶಬಾನಾ ಆರೋಪಿಸಿದ್ದಾರೆ.
ಅಜ್ಮೀರ್, ಮೇ 25: ಅಜ್ಮೀರ್ನ ಜವಾಹರಲಾಲ್ ನೆಹರು ಆಸ್ಪತ್ರೆಯ ದಂತ ವಿಭಾಗದಲ್ಲಿ ಶುಕ್ರವಾರ ವೈದ್ಯರ ನಿರ್ಲಕ್ಷ್ಯದಿಂದಾಗಿ ರೋಗಿಯೊಬ್ಬರ ತಪ್ಪು ಹಲ್ಲು ಹೊರತೆಗೆದ ಘಟನೆ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಶಬಾನಾ ಖಾನ್ ಕಳೆದ ಎರಡು ತಿಂಗಳಿನಿಂದ ತೀವ್ರ ಹಲ್ಲು ನೋವಿನಿಂದ ಬಳಲುತ್ತಿದ್ದರು. ಆಸ್ಪತ್ರೆಯ ವೈದ್ಯರು ಅವರ ಒಂದು ಹಲ್ಲು ಹುಳುಕಾಗಿದ್ದು, ಅದನ್ನು ತೆಗೆಯಬೇಕೆಂದು ಸಲಹೆ ನೀಡಿದ್ದರು. ಅದರಂತೆ ಶುಕ್ರವಾರ ಶಬಾನಾ ತಮ್ಮ ಪತಿಯೊಂದಿಗೆ ಚಿಕಿತ್ಸೆಗೆ ಬಂದಿದ್ದರು. ಆದರೆ, ವೈದ್ಯರು ನೋವಿದ್ದ ಹಲ್ಲಿನ ಬದಲಿಗೆ ಪಕ್ಕದಲ್ಲಿದ್ದ ಆರೋಗ್ಯಕರ ಹಲ್ಲನ್ನು ಹೊರತೆಗೆದಿದ್ದಾರೆ ಎಂದು ಶಬಾನಾ ಆರೋಪಿಸಿದ್ದಾರೆ.
ಶಸ್ತ್ರಚಿಕಿತ್ಸೆಯ ಸಮಯದಲ್ಲಿ ತನಗೆ ತೀವ್ರ ನೋವಾಗುತ್ತಿದ್ದು, ತಪ್ಪು ಹಲ್ಲು ತೆಗೆಯಲಾಗುತ್ತಿದೆ ಎಂದು ವೈದ್ಯರಿಗೆ ಪದೇ ಪದೇ ಹೇಳಿದರೂ ಅವರು ಕೇಳಲಿಲ್ಲ. ವೈದ್ಯರು ತಮ್ಮ ಸಹೋದ್ಯೋಗಿಗಳೊಂದಿಗೆ ಮಾತನಾಡುವುದರಲ್ಲಿ ನಿರತರಾಗಿದ್ದರಿಂದಲೇ ಈ ನಿರ್ಲಕ್ಷ್ಯ ನಡೆದಿದೆ ಎಂದು ಶಬಾನಾ ದೂರಿನಲ್ಲಿ ತಿಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಿದ್ದು, ಸಿಬ್ಬಂದಿ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದರಿಂದ ಆವರಣದಲ್ಲಿ ತೀವ್ರ ಘರ್ಷಣೆ ಮತ್ತು ಗದ್ದಲ ಉಂಟಾಯಿತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ