ಬಾಗಲಕೋಟೆ: ಗಂಡ ಕಾಣೆಯಾಗಿ ಒಂದೂವರೆ ತಿಂಗಳಾದರೂ ಪೊಲೀಸರು ಹುಡುಕಿಲ್ಲ ಅಂತ ಅಲೋಕ್ ಕುಮಾರ್ ಎದುರು ದೂರಿದಳು ಮಹಿಳೆ
ಪೊಲೀಸ್ ಠಾಣೆಗೆ ಹೋಗಿ ವಿಚಾರಿಸಿದಾಗೆಲ್ಲ ಯಾವುದಾದರೂ ನೆಪ ಹೇಳಿ ಸಾಗಹಾಕುತ್ತಾರೆ ಅಂತ ಮಹಿಳೆ ಅಲೋಕ್ ಕುಮಾರ ಅವರಿಗೆ ಹೇಳಿದರು.
ಬಾಗಲಕೋಟೆ: ಕರ್ನಾಟಕ ಪೊಲೀಸ್ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ (ADGP Alok Kumar) ಅವರು ಕೋಮು ಗಲಭೆಗೊಳಗಾಗಿದ್ದ (communal riots) ಬಾಗಲಕೋಟೆ ಜಿಲ್ಲೆಯ ಕೆರೂರ್ ಗೆ (Kerur) ಭೇಟಿ ನೀಡಿದ್ದರು. ಜನರಿಂದ ಅಹವಾಲು ಸ್ವೀಕರಿಸುವ ಸಂದರ್ಭದಲ್ಲಿ ಒಬ್ಬ ಮಹಿಳೆ ತನ್ನ ಗಂಡ ಕಾಣೆಯಾಗಿ ಒಂದೂವರೆ ತಿಂಗಳಾದರೂ ಪೊಲೀಸರು ಅವರನ್ನು ಹುಡುಕುವಲ್ಲಿ ವಿಫಲರಾಗಿದ್ದಾರೆಂದು ಅಳುತ್ತಾ ದೂರು ಸಲ್ಲಿಸಿದರು. ಪೊಲೀಸ್ ಠಾಣೆಗೆ ಹೋಗಿ ವಿಚಾರಿಸಿದಾಗೆಲ್ಲ ಯಾವುದಾದರೂ ನೆಪ ಹೇಳಿ ಸಾಗಹಾಕುತ್ತಾರೆ ಅಂತ ಮಹಿಳೆ ಅಲೋಕ್ ಕುಮಾರ ಅವರಿಗೆ ಹೇಳಿದರು.