ಕೋಲಾರದಲ್ಲಿ ಸಂಸದ ಮತ್ತು ಕೆಜಿಎಫ್ ಎಸ್ಪಿ ನಡುವೆ ವಾಗ್ವಾದ
ವಿ.ಕೋಟೆ-ಬಂಗಾರಪೇಟೆ ಮುಖ್ಯರಸ್ತೆ ಒತ್ತುವರಿ ತೆರವು ಮಾಡುವ ವೇಳೆ ಪೊಲೀಸ್ ಇಲಾಖೆ ಮಾಹಿತಿ ನೀಡದೆ ಅಗಲೀಕರಣ ಕೆಲಸ ಮಾಡಿದ್ದಕ್ಕೆ ಎಸ್ಪಿ ವಿರೋಧ ವ್ಯಕ್ತಪಡಿಸಿದರು. ಕಾಮಗಾರಿ ವಿಳಂಭವಾಗುತ್ತಿದ್ದು ಸರ್ಕಾರಿ ರಸ್ತೆ ಒತ್ತುವರಿ ತೆರವು ಮಾಡಲಾಗುತ್ತಿದೆ ಎಂದು ಸಂಸದ ಮುನಿಸ್ವಾಮಿ ಎಂದರು.
ಕೋಲಾರ: ಕೋಲಾರದಲ್ಲಿ ಸಂಸದ ಮತ್ತು ಕೆಜಿಎಫ್ ಎಸ್ಪಿ ನಡುವೆ ವಾಗ್ವಾದ ನಡೆದಿದೆ. ಕೋಲಾರ ಜಿಲ್ಲೆ ಕೆಜಿಎಫ್ನ ಬೆಮೆಲ್ ನಗರ ಬಳಿ ರಸ್ತೆ ಅಗಲೀಕರಣ ಕಾಮಗಾರಿ ವಿಚಾರವಾಗಿ ಕೆಜಿಎಫ್ ಎಸ್ಪಿ ಧರಣಿದೇವಿ ಹಾಗೂ ಸಂಸದ ಮುನಿಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದರು. ವಿ.ಕೋಟೆ-ಬಂಗಾರಪೇಟೆ ಮುಖ್ಯರಸ್ತೆ ಒತ್ತುವರಿ ತೆರವು ಮಾಡುವ ವೇಳೆ ಪೊಲೀಸ್ ಇಲಾಖೆ ಮಾಹಿತಿ ನೀಡದೆ ಅಗಲೀಕರಣ ಕೆಲಸ ಮಾಡಿದ್ದಕ್ಕೆ ಎಸ್ಪಿ ವಿರೋಧ ವ್ಯಕ್ತಪಡಿಸಿದರು. ಕಾಮಗಾರಿ ವಿಳಂಬವಾಗುತ್ತಿದ್ದು ಸರ್ಕಾರಿ ರಸ್ತೆ ಒತ್ತುವರಿ ತೆರವು ಮಾಡಲಾಗುತ್ತಿದೆ ಎಂದು ಸಂಸದ ಮುನಿಸ್ವಾಮಿ, ಸರ್ಕಾರಿ ಜಾಗದಲ್ಲಿರುವ ಒತ್ತುವರಿ ತೆರವಿಗೆ ಯಾವ ನೋಟೀಸ್ ಕೊಡೋದಿಲ್ಲ ಯಾರ ವಿರೋಧವೂ ಇಲ್ಲ ಎಂದು ಗರಂ ಆದ್ರು. ನೋಟೀಸ್ ನೀಡಿ ಕೆಲಸ ಮಾಡಿ ಎಂದು ಹೇಳಿ ಎಸ್ಪಿ ಧರಣಿದೇವಿ ಸ್ಥಳದಿಂದ ಹೊರಟಿದ್ದಾರೆ. ತೆರವು ಕಾರ್ಯಾಚರಣೆ ಹಿನ್ನೆಲೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

