ನನ್ನ ಫೋಟೋ ನೋಡಿದ್ರೆ ಪೊಲೀಸರೂ ಹೆದರ್ತಾರೆ; ಬಸ್ಸಲ್ಲಿ ಕಂಡಕ್ಟರ್​​ಗೆ ಯುವತಿ ಅವಾಜ್

Updated on: Oct 16, 2025 | 9:47 PM

ಜಗ್ಗಯ್ಯಪೇಟೆ ಡಿಪೋದಲ್ಲಿ ಬಸ್ಸಿನಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಗಲಾಟೆ ಎಬ್ಬಿಸಿದ್ದರು. ವಿಜಯವಾಡ-ಪೆನುಗಂಚಿಪ್ರೋಲ್ ಮಾರ್ಗದ ಬಸ್ಸಿನಲ್ಲಿ ಆಕೆಯ ಗಲಾಟೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಬಸ್ ಚಾಲಕ ಮತ್ತು ಕಂಡಕ್ಟರ್ ಸೂಚನೆಗಳನ್ನು ನಿರ್ಲಕ್ಷಿಸಿ ಆಕೆ ಅವರಿಗೆ ಎಚ್ಚರಿಕೆ ನೀಡಿದ್ದರು. ಈ ವಿಡಿಯೋ ವೈರಲ್ ಆಗಿದೆ.

ಹೈದರಾಬಾದ್, ಅಕ್ಟೋಬರ್ 16: ಆಂಧ್ರಪ್ರದೇಶದ ಜಗ್ಗಯ್ಯಪೇಟೆ ಡಿಪೋಗೆ ಸೇರಿದ ಪಲ್ಲೆವೇಲುಗು ಬಸ್‌ನಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಗಲಾಟೆ ಎಬ್ಬಿಸಿದ್ದಾರೆ. ವಿಜಯವಾಡದಿಂದ (Vijawada) ಪೆನುಗಂಚಿಪ್ರೋಲ್‌ಗೆ ಹೋಗುತ್ತಿದ್ದ ಬಸ್‌ನಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಗಲಾಟೆ ಮಾಡಿರುವ ಘಟನೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗುತ್ತಿದೆ. ವಿಜಯವಾಡ ಬಸ್ ನಿಲ್ದಾಣದಿಂದ ಹೊರಟಿದ್ದ ಬಸ್‌ಗೆ ಪರಿಟಾಲ ಗ್ರಾಮದ ಮಹಿಳೆಯೊಬ್ಬರು ಹತ್ತಿದರು. ಬಸ್ ಚಾಲಕ ಆಕೆಗೆ ಒಳಗೆ ಬರಲು ಸೂಚಿಸಿದರೂ ಆಕೆ ಫುಟ್‌ಬೋರ್ಡ್‌ನಲ್ಲಿ ನಿಂತಿದ್ದಳು. ಇದರಿಂದ ಆಕೆಗೆ ಗದರಿದ ಆತನಿಗೆ ಆಕೆ ಅವಾಜ್ ಹಾಕಿದಳು. ಕೂಡಲೆ ಆತ ಫೋನ್​ನಲ್ಲಿ ಆಕೆಯ ಫೋಟೋ ತೆಗೆದುಕೊಂಡ.

ಇದನ್ನು ನೋಡಿದ ಆಕೆ ನಾನು ಯಾರೆಂದು ನಿನಗೆ ಗೊತ್ತಾ? ನನ್ನ ಫೋಟೋ ತೆಗೆದುಕೊಂಡು ವಿಜಯವಾಡ, ಚಿಲ್ಲಕಲ್ಲು ಮತ್ತು ಕಂಚಿಕಚೆರ್ಲಾ ಪೊಲೀಸ್ ಠಾಣೆಗಳಲ್ಲಿ ತೋರಿಸಿ. ನನ್ನ ಫೋಟೋ ತೋರಿಸಿ ನಾನು ಯಾರೆಂದು ಕೇಳಿ. ಪೊಲೀಸರು ನನ್ನ ಫೋಟೋ ನೋಡಿ ಭಯಪಡುತ್ತಾರೆ ಎಂದು ಅವಳು ಸಿನಿಮಾ ಶೈಲಿಯಲ್ಲಿ ಎಚ್ಚರಿಸಿದ್ದಾಳೆ. ಸೀಟಿನಲ್ಲಿ ಕೂರದಿದ್ದರೆ ಕೆಳಗೆ ಬೀಳುತ್ತಿ ಎಂದರೂ ಆಕೆ ಕೇಳಲಿಲ್ಲ. ಕೊನೆಗೆ ಬಸ್ ಅನ್ನು ನೇರವಾಗಿ ಕಂಚಿಕಚೆರ್ಲಾ ಪೊಲೀಸ್ ಠಾಣೆಗೆ ತಿರುಗಿಸಿ, ಪೊಲೀಸರಿಗೆ ದೂರು ನೀಡಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ