ರೈತರ ಬೃಹತ್ ಪ್ರತಿಭಟನೆ: ನಮ್ಮ ಸಂಕಷ್ಟ ಸರ್ಕಾರಕ್ಕೆ ಯಾಕೆ ಅರ್ಥವಾಗಲ್ಲ ಅಂತ ಸಚಿವನ ಮುಂದೆ ಕಣ್ಣೀರಿಟ್ಟ ರೈತ ಮತ್ತು ರೈತ ಮಹಿಳೆಯರು
ಭೀಕರ ಬರಗಾಲದಿಂದ ತತ್ತರಿಸಿರುವ ರೈತರಿಗೆ ಬೆಳೆಗಾಗಿ ತಾವು ಮಾಡಿಕೊಂಡಿರುವ ಸಾಲ ಶೂಲವಾಗಿ ಬಾಧಿಸುತ್ತಿದೆ. ಸಾಲ ಮರುಪಾವತಿ ಮಾಡಲು ಬ್ಯಾಂಕ್ ಸಿಬ್ಬಂದಿ ರೈತರ ಮನಗಳಿಗೆ ಪ್ರತಿದಿನ ಎಡತಾಕುತ್ತಿದ್ದಾರೆ ಮತ್ತು ಅವರ ಬದುಕನ್ನು ಅಕ್ಷರಶಃ ನರಕ ಮಾಡಿದ್ದಾರೆ. ಸಚಿವರ ಜೊತೆ ಮಾತಾಡಿದ ರೈತ ಮಹಿಳೆಯೊಬ್ಬರು ಒಬ್ಬ ವಿಧವೆ ರೈತ ಮಹಿಳೆಯ ಸಂಕಷ್ಟ ಹೇಳಿದರು.
ಬೆಂಗಳೂರು: ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ರಾಜ್ಯದ ರೈತರು (farmers) ಮತ್ತು ರೈತ ಮಹಿಳೆಯರು ಇಂದು ನಗರದ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ (massive protest) ನಡೆಸಿದರು. ತಮ್ಮ ಸಮಸ್ಯೆಗಳನ್ನು ಕೇಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಳಕ್ಕೆ ಬರಲೇಬೇಕೆಂದು ರೈತರು ಹಟ ಹಿಡಿದಿದ್ದರು. ಅದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಮಂಗಳೂರಿಗೆ ಹೋಗಿದ್ದರಿಂದ ಅವರ ಪರವಾಗಿ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ (N Cheluvarayaswamy) ಸ್ಥಳಕ್ಕೆ ಅಗಮಿಸಿ ರೈತರ ಅಹವಾಲು ಕೇಳಿದರು. ಸಚಿವರ ಎದುರು ತಮ್ಮ ಕಷ್ಟ ಹೇಳಿಕೊಳ್ಳುವಾಗ ರೈತ ಮತ್ತು ರೈತ ಮಹಿಳೆಯರು ಕಣ್ಣೀರು ಸುರಿಸಿದರು. ಭೀಕರ ಬರಗಾಲದಿಂದ ತತ್ತರಿಸಿರುವ ರೈತರಿಗೆ ಬೆಳೆಗಾಗಿ ತಾವು ಮಾಡಿಕೊಂಡಿರುವ ಸಾಲ ಶೂಲವಾಗಿ ಬಾಧಿಸುತ್ತಿದೆ.
ಸಾಲ ಮರುಪಾವತಿ ಮಾಡಲು ಬ್ಯಾಂಕ್ ಸಿಬ್ಬಂದಿ ರೈತರ ಮನಗಳಿಗೆ ಪ್ರತಿದಿನ ಎಡತಾಕುತ್ತಿದ್ದಾರೆ ಮತ್ತು ಅವರ ಬದುಕನ್ನು ಅಕ್ಷರಶಃ ನರಕ ಮಾಡಿದ್ದಾರೆ. ಸಚಿವರ ಜೊತೆ ಮಾತಾಡಿದ ರೈತ ಮಹಿಳೆಯೊಬ್ಬರು ಒಬ್ಬ ವಿಧವೆ ರೈತ ಮಹಿಳೆಯ ಸಂಕಷ್ಟ ಹೇಳಿದರು. ಬ್ಯಾಂಕ್ ನವರು ಆ ಅಸಹಾಯಕ ಮಹಿಳೆಗೆ ಸಾಲ ವಾಪಸ್ಸು ಮಾಡುವಂತೆ ಹಿಂಸೆ ಮಾಡುತ್ತಿದ್ದಾರಂತೆ. ವಿಧವೆ ಕಷ್ಟ ತನ್ನಂಥ ಜನಸಾಮಾನ್ಯಳಿಗೆ ಆರ್ಥವಾಗುತ್ತೆ, ಸರ್ಕಾರಕ್ಕೆ ಯಾಕೆ ಅರ್ಥವಾಗಲ್ಲ ಎಂದು ರೈತ ಮಹಿಳೆ ಕಣ್ಣೀರು ಸುರಿಸುತ್ತಾ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ