ಸರ್ಕಾರಿ ಬಸ್ಸಿನ ಕಿಟಕಿಯಲ್ಲಿ ಮಹಿಳೆಯ ತಲೆ ಲಾಕ್! ವಿಡಿಯೋ ನೊಡಿ
ಕೆಎಸ್ಆರ್ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಕಿಟಕಿ ಮೂಲಕ ತಲೆಯನ್ನು ಹೊರಹಾಕಿದಾಗ ಅವರ ತಲೆ ಕಿಟಕಿಗೆ ಸಿಕ್ಕಿಹಾಕಿಕೊಂಡು ಪರದಾಡಿದ್ದಾರೆ. ಬಸ್ ಪ್ರಯಾಣದ ವೇಳೆ ಉಗಳುವ ಭರದಲ್ಲಿ ಕಿಟಕಿಯ ಸಣ್ಣ ಸಂದಿಯಿಂದಲೇ ತಲೆ ಹೊರ ಹಾಕಿದಾಗ ಮಹಿಳೆಯ ತಲೆ ಕಿಟಕಿಯಲ್ಲಿ ಲಾಕ್ ಆಗಿದೆ.
ಬೆಂಗಳೂರು: ಕೆಎಸ್ಆರ್ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಕಿಟಕಿ ಮೂಲಕ ತಲೆಯನ್ನು ಹೊರಹಾಕಿದಾಗ ಅವರ ತಲೆ ಕಿಟಕಿಗೆ ಸಿಕ್ಕಿಹಾಕಿಕೊಂಡು ಪರದಾಡಿದ್ದಾರೆ. ಬಸ್ ಪ್ರಯಾಣದ ವೇಳೆ ಉಗಳುವ ಭರದಲ್ಲಿ ಕಿಟಕಿಯ ಸಣ್ಣ ಸಂದಿಯಿಂದಲೇ ತಲೆ ಹೊರ ಹಾಕಿದಾಗ ಮಹಿಳೆಯ ತಲೆ ಕಿಟಕಿಯಲ್ಲಿ ಲಾಕ್ ಆಗಿದೆ. ಹಾಗೆ ಹೊರ ಹಾಕಿದ ತಲೆ ವಾಪಸ್ ಒಳಗೆ ಬಾರದೇ ಅಲ್ಲೆ ಲಾಕ್ ಆಗಿಬಿಟ್ಟಿದೆ. ಕಿಟಕಿಯಲ್ಲಿ ಸಣ್ಣ ಜಾಗವಿದ್ದ ಕಾರಣ ಅರ್ಧ ಗಂಟೆಗೂ ಹೆಚ್ಚು ಕಾಲ ತಲೆ ಲಾಕ್ ಆಗಿತ್ತು.
ಈ ವೇಳೆ ಮಹಿಳೆಯ ತಲೆ ಗಮನಿಸಿದ KSRTC ಬಸ್ ನ ಚಾಲಕ, ನಿರ್ವಾಹಕ ಲಾಕ್ ಆಗಿದ್ದ ಮಹಿಳೆಯ ಪರದಾಟ ಕಂಡು ಬಸ್ ನಿಲ್ಲಿಸಿದ್ದಾರೆ. ಬಳಿಕ ಅತ್ಯಂತ ಜಾಗರೂಕತೆಯಿಂದ ಮಹಿಳೆಯ ರಕ್ಷಣೆ ಮಾಡಿದ್ದಾರೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆಗೆ ಯಾಕ್ ಬೇಕಿತ್ತು ಈ ಅವಾಂತರ ಎಂದು ನೆಟ್ಟಿಗರು ಕಮೆಂಟ್ ಮೇಲೆ ಕಮೆಂಟ್ ಮಾಡ್ತಿದಾರೆ.
ಇದನ್ನೂ ಓದಿ: ದೇವರೇ! ನಾಳೆ ಮ್ಯಾಚ್ ಗೆಲ್ಸಪ್ಪಾ: ಆರ್ಸಿಬಿ ಅಭಿಮಾನಿಗಳಿಂದ ದೊಡ್ಡಗಣಪತಿ ದೇವಸ್ಥಾನದಲ್ಲಿ ಪೂಜೆ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: May 17, 2024 01:02 PM
ಎಲ್ಎಸಿಯಲ್ಲಿ ಸೈನ್ಯದ ಗಸ್ತು ಮಾದರಿ ಬದಲಾವಣೆ; ಚೀನಾ ನಡೆಗೆ ಭಾರತ ಆಕ್ಷೇಪ
ಕಣ್ಣು ಆಪರೇಷನ್ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್ಗೆ ಸಂಕಷ್ಟ: ವಿಡಿಯೋ ನೋಡಿ
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್

